/newsfirstlive-kannada/media/post_attachments/wp-content/uploads/2024/08/VANINDU-HASARANGA.jpg)
ಐಪಿಎಲ್ ಮೆಗಾ ಹರಾಜಿಗೆ ತಯಾರಿ ನಡೆಯುತ್ತಿದ್ದು, ಫ್ರಾಂಚೈಸಿಗಳ ಕುರಿತ ಒಂದೊಂದೇ ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ವಿಶೇಷ ಅಂದರೆ ಆರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್ ಆಗಿದ್ದ ವನಿಂದು ಹಸರಂಗ ಕಳೆದ ಬಾರಿ ಎಸ್​ಆರ್​ಹೆಚ್​ ತಂಡವನ್ನು ಸೇರಿದ್ದರು. ಆದರೆ ಅವರು 2024ರ ಐಪಿಎಲ್ ಆಡಿರಲಿಲ್ಲ, ಅದಕ್ಕೆ ಕಾರಣ ರಿವೀಲ್ ಆಗಿದೆ.
ಕಾರಣ ಏನು..?
2024 ಹರಾಜಿನ ವೇಳೆ ಆರ್​ಸಿಬಿ ಪ್ರಮುಖ ಬದಲಾವಣೆ ಮಾಡಿತ್ತು. ಅದರಲ್ಲಿ ವನಿಂದು ಹಸರಂಗ ಅವರನ್ನು ತಂಡದಿಂದ ಕೈಬಿಟ್ಟಿರೋದು. ಈ ವಿಚಾರ ಆರ್​ಸಿಬಿ ಅಭಿಮಾನಿಗಳಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯುಂಟು ಮಾಡಿತ್ತು. ಅಂದ್ಹಾಗೆ ಹಸರಂಗ ಆರ್​ಸಿಬಿ ಪರ ಎರಡು ಆವೃತ್ತಿಗಳನ್ನು ಆಡುತ್ತಿದ್ದ ವೇಳೆ, 10.75 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
2024ರ ಹರಾಜಿನ ಸಂದರ್ಭದಲ್ಲಿ ಸನ್​ ರೈಸರ್ಸ್ ಹೈದರಾಬಾದ್ ತಂಡ ಅವರನ್ನ 1.5 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಇದರಿಂದ ಅವಮಾನಕ್ಕೆ ಒಳಗಾದ ಹಸರಂಗ ಐಪಿಎಲ್ ಆರಂಭಕ್ಕೂ ಮುನ್ನ ಈ ಋತುವಿನಿಂದ ಹೊರಗುಳಿಯಲು ನಿರ್ಧರಿಸಿದರು. ಅದಕ್ಕೆ ಗಾಯದ ಸಮಸ್ಯೆ ಎಂದು ಸಮಾಜಿಯಿಸಿ ನೀಡಿದ್ದರು. ಜೊತೆಗೆ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಬೇಕು ಎಂಬ ಹೇಳಿಕೆ ಕೂಡ ಹೊರಬಿದ್ದಿತ್ತು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಮಾಹಿತಿ ಪ್ರಕಾರ.. ಹಸರಂಗ ಅವರು ಐಪಿಎಲ್​ನಲ್ಲಿ ತಮ್ಮ ಮೌಲ್ಯ ದಿಢೀರ್ ಕಡಿಮೆ ಆಗಿರೋದ್ರಿಂದ ಕಳೆದ ಬಾರಿಯ ಟೂರ್ನಿಯಲ್ಲಿ ಆಡಿಲ್ಲ ಎಂದು ಕ್ರಿಕೆಟ್ ತಜ್ಞರು ಹೇಳ್ತಿದ್ದಾರೆ. ಇನ್ನೊಂದು ವಿಚಾರ ಅಂದರೆ ಎಸ್​ಆರ್​ಹೆಚ್​ ಅವರನ್ನು ಈ ಬಾರಿ ಕೈಬಿಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಪಂತ್ ಕಂಬ್ಯಾಕ್.. ಕೊಹ್ಲಿ, ರೋಹಿತ್ ಗ್ಯಾರಂಟಿ; ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಹೇಗಿರುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ