Advertisment

Hydrated; ಅತಿಯಾಗಿ ನೀರು ಕುಡಿದರೂ ಅಪಾಯ.. ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತೆ?

author-image
Gopal Kulkarni
Updated On
Hydrated; ಅತಿಯಾಗಿ ನೀರು ಕುಡಿದರೂ ಅಪಾಯ.. ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತೆ?
Advertisment
  • ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಹೆಚ್ಚು ನೀರು ಕುಡಿದರೇ ಅಪಾಯ
  • ಗಂಟೆಗೆ 1.5 ಲೀಟರ್​ಗಿಂತ ಹೆಚ್ಚು ನೀರು ಕುಡಿದರೆ ಸಮಸ್ಯೆಗಳು ಏನು..?
  • ಪ್ರತಿ ಲೀಟರ್ ನೀರಿನಲ್ಲಿ ಇರಬೇಕಾದ ಸೋಡಿಯಂನ ಪ್ರಮಾಣ ಎಷ್ಟು?

ನಮ್ಮ ದೇಹವು ಹಲವು ಜೀವಕೋಶಗಳ, ರಕ್ತ ಮಾಂಸ ಮಜ್ಜೆಗಳು ಸೇರಿ ಒಂದು ರೂಪ ಪಡೆದುಕೊಂಡಿದೆ. ಅವುಗಳ ಜೊತೆಗೆ ದೇಹಲ್ಲಿ ಶೇಕಡಾ 40 ರಿಂದ 60 ರಷ್ಟು ನೀರಿನಂಶ ಇದೆ. ನೀರು ನಮ್ಮ ದೇಹದ ಹಲವು ಅಂಗಗಳು ತಮ್ಮ ಕಾರ್ಯನಿರ್ವಹಿಸಲು ಅತ್ಯಗತ್ಯ. ಜೀವಕೋಶಗಳಿಗೆ ಪೋಷಕಾಂಶ ದೊರೆಯುವಂತೆ ಮಾಡುವುದರ ಜೊತೆ ಜೊತೆಗೆ ಮೆದಳು ಕ್ರಿಯಾಶೀಲವಾಗಿರಲು ಕೂಡ ನೀರು ಅತ್ಯಗತ್ಯ.

Advertisment

ನಮ್ಮ ದೇಹವು ಅನೇಕ ರೀತಿಯಲ್ಲಿ ನಿರ್ಜಲೀಕರಣಗೊಳ್ಳುತ್ತಾ ಹೋಗುತ್ತದೆ. ದೇಹದಲ್ಲಿರುವ ನೀರಿನಂಶ ಹಲವು ರೂಪದಲ್ಲಿ ಆಚೆ ಹೋಗುತ್ತಿರುತ್ತದೆ. ಬೆವರಿನ ಮೂಲಕ, ಮೂತ್ರ ವಿಸರ್ಜನೆ ಮೂಲಕ ದೇಹದಲ್ಲಿರುವ ನೀರಿನ ಅಂಶ ಹೊರಗೆ ಹೋಗುತ್ತಿರುತ್ತದೆ. ಅದು ಹೊರಹೊದಂತೆಲ್ಲಾ ನಾವು ಮತ್ತೆ ನೀರಿನ ಅಂಶವನ್ನು ದೇಹಕ್ಕೆ ತುಂಬಿಸಬೇಕಾಗುತ್ತದೆ. ಹಲವರು ಅದನ್ನು ಮರೆತುಬಿಡುತ್ತಾರೆ.

ಇದನ್ನೂ ಓದಿ:ಕೇರಳದಲ್ಲಿ MPOX ಕನ್ಫರ್ಮ್.. ಕರ್ನಾಟಕಕ್ಕೂ ಶುರುವಾಯ್ತು ಡೇಂಜರ್​​ ಮಹಾಮಾರಿ ಆತಂಕ..!

ದೇಹದ ಮೂಲಕ ನೀರಿನ ಅಂಶ ಹೊರ ಹೋಗುವುದು ಕೂಡ ಅವಶ್ಯಕವೇ ಹೊರಗೆ ಹೋದ ನೀರನ್ನು ಸಮರ್ಪಕವಾಗಿ ಮತ್ತೆ ದೇಹಕ್ಕೆ ರಿಫೀಲ್ ಮಾಡುವುದು ಕೂಡ ಅಷ್ಟೇ ಅವಶ್ಯಕ. ಒಂದು ವೇಳೆ ಬೆವರಿನ ಮೂಲಕ ನೀರಿನಂಶ ಆಚೆ ಹೋಗದೆ ಇದ್ದಲ್ಲಿ. ದೇಹಕ್ಕೆ ಅಗತ್ಯವಾದ ವ್ಯಾಯಾಮ ನೀಡದೇ ಇದ್ದಲ್ಲಿ ದೇಹದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಬೆವರು ಕೇವಲ ವ್ಯಾಯಾಮದಿಂದ ಮಾತ್ರವಲ್ಲ ವಿಪರೀತ ಒತ್ತಡ ಹಾಗೂ ಅನಾರೋಗ್ಯಕ್ಕೀಡಾದಗಲೂ ಬರುತ್ತದೆ.

Advertisment

ಇದನ್ನೂ ಓದಿ:Health Tips: ಬೆಳಗ್ಗೆ ಎದ್ದು ಈ ಕೆಲಸ ಮಾಡಿದ್ರೆ ಸಕ್ಕರೆ ಕಾಯಿಲೆ ಮಾಯ; ಈ ಸ್ಟೋರಿ ತಪ್ಪದೆ ಓದಿ!

publive-image

ಆದ್ರೆ ದೇಹವನ್ನು ನಿರ್ಜಲೀಕರಣ ಅಂದ್ರೆ ಡಿಹೈಡ್ರೇಷನ್​ನಿಂದ ತಡೆಯುವುದು ಜಾಸ್ತಿ ನೀರು ಕುಡಿಯುವುದರಿಂದ ಮಾತ್ರ ಸಾಧ್ಯ ಎಂದು ನಂಬಿದ್ದಾರೆ. ಆದ್ರೆ ನಿಮಗೆ ನೆನಪಿರಲಿ ಅತಿಯಾದ ನೀರು ಸೇವನೆಯಿಂದಲೂ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ನೀವು ಹಲವು ಕ್ರೀಡಾಪಟುಗಳನ್ನು ನೋಡಿರಬಹುದು. ದೇಹಕ್ಕೆ ಹೆಚ್ಚು ಸೋಡಿಯಂ ಪೋಟ್ಯಾಶಿಯಂ ಹಾಗೂ ಕ್ಲೋರೈಡ್​ ಪೂರೈಸಲು ಅಂತಲೇ ಹೆಚ್ಚು ಹೆಚ್ಚು ನೀರು ಕುಡಿಯುತ್ತಾರೆ. ನೀರನಲ್ಲಿ ಓಆರ್​ಎಸ್​ ಮಾದರಿಯ electrolytesಗಳನ್ನು ಬಳಸುತ್ತಾರೆ. ಹೀಗೆ ಹೆಚ್ಚು ನೀರು ಕುಡಿಯುವುದರಿಂದ ನಾವು ಹೈಡ್ರೇಡ್​ ಆಗಿ ಇರಲು ಸಾಧ್ಯ ಅಂತ ತಿಳಿದುಕೊಂಡಿದ್ರೆ ಅದು ಕೂಡ ತಪ್ಪು.

Advertisment

ಇದನ್ನೂ ಓದಿ:ನುಗ್ಗೆಕಾಯಿ ಅಲ್ಲ, ನುಗ್ಗೆ ಎಲೆಯ ಪುಡಿಯಲ್ಲಿದೆ ಪವರ್‌.. ದಿನ ಟೀಯಂತೆ ಕುಡಿದರೆ ಏನೆಲ್ಲಾ ಆಗುತ್ತೆ ಗೊತ್ತಾ?

ನೀವು ಕುಡಿಯುವ ನೀರಿನಲ್ಲಿ ಪ್ರತಿ ಲೀಟರ್​ಗೆ 135 ರಿಂದ 144 ಮಿಲಿಗ್ರಾಮ್​ನಷ್ಟು ಮಾತ್ರ ಸೊಡಿಯಂ ಇರಬೇಕು ಅದಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಅದು ಕೂಡ ಅಪಾಯವೇ. ಗಂಟೆಗೆ 1.5 ಲೀಟರ್​ಗಿಂತ ಹೆಚ್ಚು ನೀರು ಕುಡಿಯುವುದು ಕೂಡ ಅಪಾಯ ಕೇವಲ ನೀರಲ್ಲ ಎನರ್ಜಿ ಡ್ರಿಂಕ್ ಹಾಗೂ ಸ್ಪೋರ್ಟ್ಸ್​ ಡ್ರಿಂಕ್​ ಕೂಡ ಗಂಟೆಗೆ 1.5 ಲೀಟರ್​ಗಿಂತ ಜಾಸ್ತಿ ಕುಡಿದಲ್ಲಿ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮಗಳು ಬೀಳುವುದು ನಿಶ್ಚಿತ ಎಂದು ಹೇಳುತ್ತದೆ ಯುಎಸ್​ನ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ಹೀಗಾಗಿ ದೇಹಕ್ಕೆ ಬೇಕಾದಷ್ಟು ಸೋಡಿಯಂ, ಪೋಟ್ಯಾಶಿಯಂ ಹಾಗೂ ಫ್ಲೋರೈಡ್​ ಮಾತ್ರ ನೀಡಬೇಕೇ ಹೊರತು ಅತಿಯಾಗಿ ನೀರು ಕುಡಿಯುವುದು ಕೂಡ ಆರೋಗ್ಯದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment