10ರ ಗಡಿ ದಾಟದ ಗಿಲ್, ಸೂರ್ಯ, ಸಂಜು ಸ್ಯಾಮ್ಸನ್ ಬ್ಯಾಟಿಂಗ್
ಕಳಪೆ ಪ್ರದರ್ಶನ ನೀಡಿದ ಭಾರತದ ಆಟಗಾರರು, ವಿಂಡೀಸ್ ವಿನ್
2ನೇ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ.!
ಟಿ20 ಸ್ಪೆಷಲಿಸ್ಟ್ಗಳ ಎದುರು 2ನೇ ಪಂದ್ಯದಲ್ಲೂ ಐಪಿಎಲ್ ಸ್ಟಾರ್ಸ್ ಮಕಾಡೆ ಮಲಗಿದ್ದಾರೆ. ಮಾಡಿದ ಯಾವ ತಪ್ಪನ್ನ ತಿದ್ದಿಕೊಳ್ಳದ ಟೀಮ್ ಇಂಡಿಯಾ ಯಂಗ್ಸ್ಟರ್ಸ್ ಮತ್ತೆ ಸೋಲಿಗೆ ಶರಣಾಗಿದ್ದಾರೆ. ಅಷ್ಟಕ್ಕೂ ಪಾಂಡ್ಯ ಪಡೆ ಮಾಡಿದ ಪ್ರಮಾದವೇನು?.
ಟೀಮ್ ಇಂಡಿಯಾದ ಭವಿಷ್ಯದ ಬ್ಯಾಟ್ಸ್ಮನ್ಗಳು ಅನಿಸಿಕೊಂಡಿರೋ ಯಂಗ್ಸ್ಟರ್ಗಳು ತಪ್ಪಿನಿಂದ ಪಾಠ ಕಲಿಯೋ ಗೋಜಿಗೆ ಹೋಗ್ತಿಲ್ಲ. ಮೊದಲ ಟಿ20ಯಲ್ಲಿ ಏನ್ ತಪ್ಪು ಮಾಡಿದ್ರೋ ಅದೇ ತಪ್ಪುಗಳನ್ನ 2ನೇ ಪಂದ್ಯದಲ್ಲೂ ಮಾಡಿದ್ರು. ಹೋದ ಪುಟ್ಟ ಬಂದ ಪುಟ್ಟ ಎಂಬ ಮಾತಿನಂತೆ ಪೆವಿಲಿಯನ್ ಪರೇಡ್ ನಡೆಸಿದ್ರು..
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಪ್ಲಾಫ್ ಶೋ.!
ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಟೀಮ್ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಕಣಕ್ಕಿಳಿದಷ್ಟೇ ವೇಗವಾಗಿ ಸೈಲೆಂಟಾಗಿ ಪೆವಿಲಿಯನ್ ಸೇರಿಕೊಂಡ್ರು. ತಾಳ್ಮೆಯ ಆಟವಾಡಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್ ತಂಡಕ್ಕೆ ಆಸರೆಯಾದ್ರು.
ಹಾಫ್ ಸೆಂಚುರಿ ಸಿಡಿಸಿ ಘರ್ಜಿಸಿದ ತಿಲಕ್ ವರ್ಮಾ.!
ಇಶಾನ್ ಕಿಶನ್ ಹೋರಾಟ 27 ರನ್ಗಳಿಗೆ ಅಂತ್ಯವಾಯ್ತು. ಆ ಬಳಿಕ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಬೇಜವಾಬ್ದಾರಿಯುತ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ರು. ಅನುಭವಿ ಆಟಗಾರರು ಪೆವಿಲಿಯನ್ ಪರೇಡ್ ನಡೆಸ್ತಾ ಇದ್ರೆ, 2ನೇ ಅಂತರಾಷ್ಟ್ರೀಯ ಪಂದ್ಯವನ್ನಾಡ್ತಿರೋ ತಿಲಕ್ ವರ್ಮಾ ಘರ್ಜಿಸಿದ್ರು. ಅರ್ಧಶತಕದ ಆಟವಾಡಿ ತಂಡಕ್ಕೆ ನೆರವಾದ್ರು.
ತಿಲಕ್ ವರ್ಮಾ 51 ರನ್ಗಳಿಸಿ ಔಟಾದ್ರೆ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ 24 ರನ್ಗಳ ಕಾಣಿಕೆ ನೀಡಿದ್ರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್, ರವಿ ಬಿಷ್ನೋಯ್ ಹಾಗೂ ಆರ್ಷ್ದೀಪ್ ನೀಡಿದ ಅಲ್ಪ ರನ್ಗಳ ನೆರವಿನಿಂದ ಟೀಮ್ ಇಂಡಿಯಾ 152 ರನ್ಗಳಿಸಿತು.
ವಿಂಡೀಸ್ಗೆ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ.!
152 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ಯಡವಟ್ಟು ಮಾಡಿಕೊಳ್ತು. ಆರಂಭಿಕರಿಬ್ಬರಿಗೂ ಬಹುಬೇಗನೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದ್ರು. ಇಷ್ಟೇ ಅಲ್ಲ.. ಸ್ಫೋಟಕ ಆಟದ ಮುನ್ಸೂಚನೆ ನೀಡಿದ ಕೈಲ್ ಮೆಯರ್ಸ್ಗೆ ಆರ್ಷ್ದೀಪ್ ಬ್ರೇಕ್ ಹಾಕಿ ಆರಂಭಿಕ ಯಶಸ್ಸು ತಂದುಕೊಟ್ರು..
ಪೂರನ್ ರಣಾರ್ಭಟ, ಬೌಲರ್ಸ್ ತತ್ತರ.!
ಆದ್ರೆ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೊಲಸ್ ಪೂರನ್ ಸ್ಫೋಟಕ ಆಟವಾಡಿದ್ರು. ಪೂರನ್ ಆಟಕ್ಕೆ ರೋವ್ಮನ್ ಪೊವೆಲ್ ಸಖತ್ ಸಾಥ್ ನೀಡಿದ್ರು. ಬೌಂಡರಿ- ಸಿಕ್ಸರ್ ಬಾರಿಸಿ ಆರ್ಭಟಿಸಿದ ಪೂರನ್, ಅಬ್ಬರದ ಅರ್ಧಶತಕ ಸಿಡಿಸಿದ್ರು.
ಪೂವೆಲ್ 21 ರನ್ಗಳಿಸಿ ನಿರ್ಗಮಿಸಿದ್ರೆ, 67 ರನ್ಗಳಿಗೆ ಪೂರನ್ ಆಟ ಅಂತ್ಯವಾಯ್ತು. ಅದ್ರ ಬೆನ್ನಲ್ಲೇ ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್ ಡಕೌಟ್ ಆದ್ರು. ಇದ್ರ ಪಂದ್ಯಕ್ಕೆ ಟ್ವಿಸ್ಟ್ ಸಿಕ್ತು. ಆದ್ರೆ, ದಿಟ್ಟ ಹೋರಾಟ ನಡೆಸಿದ ಅಕೈಲ್ ಹುಸೇನ್, ಅಲ್ಜಾರಿ ಜೋಸೇಫ್ ವಿಂಡೀಸ್ ಪಡೆ 7 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿಸಿದ್ರು. ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ