ಭಾರತ-ವೆಸ್ಟ್ ಇಂಡೀಸ್ 4ನೇ ಟಿ20 ಪಂದ್ಯ
2-2 ರಿಂದ ಸರಣಿ ಸಮಬಲ.. ಇಂದು ಫೈನಲ್ ಫೈಟ್..!
ಮೊದಲ ವಿಕೆಟ್ಗೆ ದಾಖಲೆಯ ಸೆಂಚುರಿ ಜೊತೆಯಾಟ
ಅಬ್ಬಬ್ಬಾ ಎಂತಹ ವಿಕ್ಟರಿ ಗುರು..! ಗೆಲುವಂದ್ರೆ ಹೀಗಿರ್ಬೇಕು. ಎದುರಾಳಿ ಪಡೆ ಕನಸಲ್ಲೂ ಕನವರಿಸೋ ಹಾಗೇ. ವೆಸ್ಟ್ ವಿಂಡೀಸ್ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಚಂಡ ಗೆಲುವು ಸಾಧಿಸಿದೆ. 2-2 ರಿಂದ ಸರಣಿ ಸಮಬಲಗೊಂಡಿದ್ದು, ಇಂದು ನಡೆಯುವ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಫ್ಲೋರಿಡಾದಲ್ಲಿ ಟಾಸ್ ಗೆದ್ದು ಸಾಲಿಡ್ ಓಪನಿಂಗ್ ಪಡೆಯುವ ವಿಂಡೀಸ್ ಲೆಕ್ಕಚಾರವನ್ನು ಇಂಡಿಯನ್ ಬೌಲರ್ಸ್ ತಲೆಕೆಳಗಾಗಿಸಿದ್ರು. ಅರ್ಷ್ದೀಪ್ ಸಿಂಗ್ ಪವರ್ಫುಲ್ ಸ್ಪೆಲ್ ಮೂಲಕ ಕೈಲ್ ಮೇಯರ್ಸ್-ಬ್ರೆಂಡನ್ ಕಿಂಗ್ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಡೇಂಜರಸ್ ನಿಕೋಲಸ್ ಪೂರನ್ ಹಾಗೂ ಕ್ಯಾಪ್ಟನ್ ಪಾವೆಲ್ಗೆ ಚೈನಾಮ್ಯಾನ್ ಸ್ಪಿನ್ ಕುಲ್ದೀಪ್ ಯಾದವ್ ಒಂದೇ ಓವರ್ನಲ್ಲಿ ಫುಲ್ ಸ್ಟಾಪ್ ಹಾಕಿದ್ರು.
5ನೇ ವಿಕೆಟ್ಗೆ ಹೆಟ್ಮೆಯರ್-ಹೋಪ್ ಜುಗಲ್ಬಂದಿ
57 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್ ತಂಡಕ್ಕೆ ಡೇರಿಂಗ್ ಬ್ಯಾಟರ್ ಸಿಮ್ರನ್ ಹೆಟ್ಮೆಯರ್ ಆಸರೆಯಾದ್ರು. ಭಾರತದ ಬೌಲರ್ಗಳನ್ನ ಮನಸೋ ಇಚ್ಛೆ ದಂಡಿಸಿದ ಹೆಟ್ಮೆಯರ್ ಹಾಫ್ಸೆಂಚುರಿ ಬಾರಿಸಿ ಶೈನ್ ಆದ್ರು. ಹೆಟ್ಮೆಯರ್ಗೆ ಉತ್ತಮ ಸಾಥ್ ನೀಡಿದ ಶಾಯ್ ಹೋಪ್ ಬಿರುಸಿನ 45 ರನ್ ಗಳಿಸಿದ್ರು. ಇಬ್ಬರು 5ನೇ ವಿಕೆಟ್ಗೆ ಸ್ಫೋಟಕ 49 ರನ್ಗಳ ಜೊತೆಯಾಟವಾಡಿದರು. ಇವರನ್ನ ಬಿಟ್ಟರೆ ಮಿಕ್ಕ ಬ್ಯಾಟ್ಸ್ಮನ್ಗಳು ಹೀಗೆ ಬಂದು ಹಾಗೇ ಹೋದ್ರು. ಫೈನಲಿ ವಿಂಡೀಸ್ ತಂಡ 20 ಓವರ್ಗಳಲ್ಲಿ 178 ರನ್ ಕಲೆ ಹಾಕ್ತು.
ಗುಡುಗಿದ ಜೈಸ್ವಾಲ್-ಗಿಲ್.. ನಲುಗಿದ ಕೆರಿಬಿಯನ್ಸ್..!
ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಬೊಂಬಾಟ್ ಓಪನಿಂಗ್ ಒದಗಿಸಿದ್ರು. ಪೈಪೋಟಿಗೆ ಬಿದ್ದವರಂತೆ ಸಿಕ್ಸರ್-ಬೌಂಡ್ರಿಗಳ ಮಳೆಗರೆದು ವಿಂಡೀಸ್ ಬೌಲರ್ಸ್ಗೆ ಬೆವರಿಳಿಸಿದರು.
ಜೈಸ್ವಾಲ್ ಡೆಬ್ಯು ಅರ್ಧಶತಕ.. ಗಿಲ್ ಬ್ಯಾಕ್ ವಿತ್ ಬ್ಯಾಂಗ್..!
ಯಾವ ಬೌಲರ್ಗೂ ಬಗ್ಗದ ಖತರ್ನಾಕ್ ಯಂಗ್ಪೇರ್ 10 ಓವರ್ಗಳಲ್ಲೇ ಸ್ಫೋಟಕ 100 ರನ್ ಗಳಿಸಿ ಗೆಲುವನ್ನ ಖಾತ್ರಿಪಡಿಸಿತು. ವಿಂಡೀಸ್ ಬೌಲರ್ಸ್ ಬೆಂಡೆತ್ತಿದ ಗಿಲ್ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರು. ಇನ್ನೊಂದೆಡೆ ಡಿಸ್ಟ್ರಾಕಿವ್ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್ ನರಸಿಂಹನ ಉಗ್ರರೂಪವನ್ನೇ ತಾಳಿದ್ರು. ಜಸ್ಟ್ 33 ಎಸೆತಗಳಲ್ಲಿ ಡೆಬ್ಯು ಅರ್ಧಶತಕ ಪೂರೈಸಿದ್ರು.
ಭಾರತಕ್ಕೆ 9 ವಿಕೆಟ್ಗಳ ಪ್ರಚಂಡ ಗೆಲುವು
ಅರ್ಧಶತಕ ಸಿಡಿಸಿದ ಬಳಿಕ ಗಿಲ್-ಜೈಸ್ವಾಲ್ ಮತ್ತಷ್ಟು ವೈಲೆಂಟ್ ಆದ್ರು. ವಿಂಡೀಸ್ ಪಾಲಿಗೆ ಸಿಂಹಸ್ವಪ್ನರಾದ ಗಿಲ್ ಸ್ಪೋಟಕ 77 ರನ್ ಸಿಡಿಸಿ ವಿಕ್ಟರಿ ಹೊಸ್ತಿಲಲ್ಲಿ ಔಟಾದ್ರು. ಫೈನಲಿ ಜೈಸ್ವಾಲ್ ಅಜೇಯ 84 ಹಾಗೂ ತಿಲಕ್ ವರ್ಮಾ ಅಜೇಯ 7 ರನ್ಗಳ ನೆರವಿನಿಂದ ಭಾರತ ತಂಡ ಇನ್ನೂ 18 ಎಸೆತ ಬಾಕಿ ಇರುವಂತೆಯೇ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. 2-2 ರಿಂದ ಸರಣಿ ಸಮಬಲಗೊಂಡಿದ್ದು ಇಂದು ಗೆದ್ದೋರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್