newsfirstkannada.com

ಕ್ರೀಸ್​ನಲ್ಲಿ ಹೊಸ ವೆಪನ್ ಹುಡುಕಿಕೊಂಡ ರಿಷಬ್ ಪಂತ್; ಇನ್ಮೇಲೆ ಔಟ್ ಮಾಡೋದು ಸುಲಭ ಇಲ್ಲ

Share :

Published September 11, 2024 at 8:24am

Update September 12, 2024 at 6:47am

    ಎರಡು ವೆಪ್​​ನ್ಸ್​​​​ನಿಂದಲೇ ಎದುರಾಳಿ ಪಡೆ ಧೂಳೀಪಟ

    ಪಂತ್ ಬದಲಾಯಿಸಿರೋ ಆ ವೆಪನ್ಸ್​ ಯಾವುದು..?

    ಬೌಲರ್​​​ಗಳ ನಿದ್ದೆಗೆಡಿಸಿದ ಡೇಂಜರಸ್​ ಲೆಫ್ಟಿ ಬ್ಯಾಟರ್​​..

ರಿಷಬ್ ಪಂತ್​​​​..! ಈ ಹೆಸರು ಕೇಳಿದ್ರೆ ಸಾಕು ಬೌಲರ್ಸ್​ ಥಂಡಾ ಹೊಡಿತಾರೆ. ಯಾಕಪ್ಪಾ ಈ ಫೈರಿ ಬ್ಯಾಟರ್​ ಕ್ರೀಸ್​​ಗೆ ಎಂಟ್ರಿಕೊಟ್ಟ ಅಂತ ತಲೆಮೇಲೆ ಕೈ ಹೊತ್ತು ಕೂರ್ತಾರೆ. ಇಂತಹ ಡೇಂಜರಸ್​ ಬ್ಯಾಟರ್​​​ ಇನ್ಮುಂದೆ ಬೌಲರ್ಸ್​ಗೆ ಮತ್ತಷ್ಟು ದುಸ್ವಪ್ನರಾಗಿ ಕಾಡಲಿದ್ದಾರೆ.

ಫೈರಿ​​ ಪಂತ್​ಗೆ ಸಿಕ್ಕಿದೆ ಮತ್ತೊಂದು ಹೊಸ ವೆಪನ್​​
ಅಗ್ರೆಸ್ಸಿವ್​​..! ಇದಕ್ಕೆ ಇನ್ನೊಂದು ಹೆಸರೇ ರಿಷಬ್ ಪಂತ್​​..! ಲೆಫ್ಟಿ ಬ್ಯಾಟರ್​​ ಅಗ್ರೆಸ್ಸಿವ್ ಮೈಂಡ್​​ಸೆಟ್​ನಿಂದ ಎದುರಾಳಿ ಪಡೆ ಕಿಲ್ ಮಾಡ್ತಿದ್ದಾರೆ. ಪಂತ್​​ಗೆ ಡಿಫೆನ್ಸಿವ್​​​​​​​​ ಆಟ ಅನ್ನೋದೆ ಗೊತ್ತಿಲ್ಲ. ಏನಿದ್ರೂ ಅಗ್ರೆಸ್ಸಿವ್​​. ಆಕ್ರಮಣಕಾರಿ ಶೈಲಿ ಬ್ಯಾಟಿಂಗ್​ ಪಂತ್​ಗೆ ಸಿಕ್ಕ ದೊಡ್ಡ ವೆಪನ್​​​. ಇದೀಗ ಈ ವೆಪನ್​​ ಜೊತೆ ಇನ್ನೊಂದು ಹೊಸ ವೆಪನ್​ ಸೇರಿಕೊಂಡಿದ್ದಾರೆ. ಇದರಿಂದ ಅವರು ಹಿಂದಿಗಿಂತೂ ಮತ್ತಷ್ಟು ಡೇಂಜರ್ ಆಗಿ ಕಾಣಿಸ್ತಿದ್ದಾರೆ. ಅಷ್ಟಕ್ಕೂ ಆ ಹೊಸ ವೆಪನ್​ ಬೇರಾವುದು ಅಲ್ಲ, MATURITY..!

ಇದನ್ನೂ ಓದಿ: 6, 0, 6, 6, 6, 6 ! ಬದೋನಿಯ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ ಮಯಾಂಕ್ -VIDEO

ದುಲೀಪ್ ಟ್ರೋಫಿಯಲ್ಲಿ ಪಂತ್ ಪರಾಕ್ರಮ
ಇಂಡಿಯಾ ಎ ಎದುರಿನ ದುಲೀಪ್​ ಟ್ರೋಫಿ ಪಂದ್ಯವನ್ನ ಇಂಡಿಯಾ ಬಿ ಗೆದ್ದಿದೆ. ಗೆಲ್ಲಿಸಿದ್ದು ರಿಷಬ್​ ಪಂತ್​​. ಎರಡನೇ ಇನ್ನಿಂಗ್ಸ್​​ನಲ್ಲಿ ಆಕ್ರಮಣಕಾರಿ ಜೊತೆ ಪಕ್ವತೆಯ ಇನ್ನಿಂಗ್ಸ್ ಕಟ್ಟಿದ್ರು. ಟಾಪ್​ ಆರ್ಡರ್ ಕುಸಿದಿತ್ತು. ಆಗ ಕಣಕ್ಕಿಳಿದ ಪಂತ್​​​ ರನ್ ವೇಗದ ಹೆಚ್ಚಿಸೋದ್ರ ಜೊತೆ ಜಾಗರೂಕತೆಯಿಂದ ಅವಸರಕ್ಕೆ ಚಾನ್ಸ್​ ನೀಡ್ಲಿಲ್ಲ. ಪರಿಣಾಮ 61 ರನ್ ಗಳಿಸಿದ್ರು. ಇದರಿಂದ ಬಿಗ್ ಟಾರ್ಗೆಟ್ ಸೆಟ್ ಮಾಡಿ ,ಎದುರಾಳಿಯನ್ನ ಒತ್ತಡಕ್ಕೆ ಸಿಲುಕಿಸಿ ಗೆಲುವು ದಾಖಲಿಸ್ತು.

ಸಿಂಹಳೀಯರಿಗೆ ವಿಲನ್ ಆದ್ರು ಫೈರಿ ಬ್ಯಾಟ್ಸ್​​ಮನ್
2024ರ ಟಿ20 ವಿಶ್ವಕಪ್​ನಲ್ಲಿ ಲಂಕಾ ವಿರುದ್ಧ ಪಂತ್ ತೋರಿದ ಅದ್ಭುತ ಆಟವನ್ನ ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಎಡಗೈ ಬ್ಯಾಟರ್​​ 33 ಎಸೆತಗಳಲ್ಲಿ ಸ್ಪೋಟಕ 49 ರನ್ ಗಳಿಸಿದ್ರು. 3ನೇ ವಿಕೆಟ್​ಗೆ ಸೂರ್ಯ ಜೊತೆಗೂಡಿ ಅಮೋಘ 76 ರನ್​ಗಳ ಕಾಣಿಕೆ ನೀಡಿದ್ರು. ಪಂತ್​​ರ ಈ ಇನ್ನಿಂಗ್ಸ್​​​ನಲ್ಲಿ ಅಗ್ರೆಸ್ಸಿವ್ ಹಾಗೂ ಮೆಚ್ಯೂರಿಟಿ ಕಾಣಿಸ್ತಿತ್ತು.

ಬದ್ಧವೈರಿ ಪಾಕ್​​ ಹುಟ್ಟಡಗಿಸಿದ ವೀರ ಕಲಿ
ಲೋಸ್ಕೋರ್ ಗೇಮ್​​​​ನಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಸಂಗ್ರಾಮದಲ್ಲಿ ಬದ್ಧವೈರಿ ಪಾಕ್​​ ಹುಟ್ಟಡಗಿಸಿತ್ತು. ಇದರ ರೂವಾರಿ ವೀರ ಕಲಿ ಪಂತ್​​. ಹೌದು, ಪಾಕ್​​​​​ನ ಡೆಡ್ಲಿ ಸ್ಪೆಷಲ್​​​​ಗೆ ಇಂಡಿಯನ್ ಬ್ಯಾಟರ್ಸ್​, ತಡಬಡಾಯಿಸಿದ್ರು. ಆದ್ರೆ ಪಂತ್​ ಮಾತ್ರ ಎದೆಗುಂದದೇ ಬಿರುಸಿನ 42 ರನ್ ಸಿಡಿಸಿದ್ರು. ಒಂದೂ ಕೆಟ್ಟ ಹೊಡೆತಕ್ಕೆ ಕೈ ಹಾಕದೇ ಅಗ್ರೆಸ್ಸಿವ್ ಆಟದ ಪ್ರಬುದ್ಧತೆ ತೋರಿದ್ರು.

ಇದನ್ನೂ ಓದಿ: ಉಪನಾಯಕನ ವಿಚಾರದಲ್ಲಿ BCCI ಜಾಣ ನಡೆ; ಭಾರೀ ಚರ್ಚೆ ಆಗ್ತಿದೆ ಈ ನಿರ್ಧಾರ

ಪಂತ್ ಘರ್ಜನೆಗೆ ಚಾಂಪಿಯನ್ ಸಿಎಸ್​ಕೆ ಢಮಾರ್​​​..!
ಕಳೆದ ಐಪಿಎಲ್​​​ ಸೀಸನ್​ನಲ್ಲಿ ಡೆಲ್ಲಿ ತಂಡ ಬಲಾಢ್ಯ ಸಿಎಸ್​ಕೆ ತಂಡವನ್ನ ಬಗ್ಗುಬಡಿದಿತ್ತು. ಸೋಲಿನ ರುಚಿ ತೋರಿಸಿದ್ದು ಇದೇ ಪಂತ್​. 3ನೇ ಕ್ರಮಾಂಕದಲ್ಲಿ ಆಡಿದ ಕ್ಯಾಪ್ಟನ್​ ಪಂತ್ ಬಿರುಸಿನ 51 ರನ್ ಸಿಡಿಸಿದ್ರು. ಪ್ರತಿ ಎಸೆತದಲ್ಲಿ ಪರಿಪಕ್ವತೆಯಿಂದ ಬ್ಯಾಟ್ ಬೀಸಿದ್ರು. ಪಂತ್​ರ ಅಗ್ರೆಸ್ಸಿವ್ ಹಾಗೂ ಮೆಚ್ಯೂರಿಟಿ ತಂತ್ರದ ಫಲವೇ ಚೆನ್ನೈಗೆ ಸೋಲಿನ ದರ್ಶನ ಆಗಿತ್ತು.

ಲೆಫ್ಟಿ ಬ್ಯಾಟರ್​​​​​​​​​​​​​​ ಆರ್ಭಟಕ್ಕೆ ಬೆಚ್ಚಿಬಿದ್ದ ಗುಜರಾತ್ ಟೈಟನ್ಸ್​​..!
ಈ ಮಾಸ್ ಇನ್ನಿಂಗ್ಸ್​ ಬಗ್ಗೆಯಂತೂ ಹೇಳೋದೆ ಬೇಡ. ಗುಜರಾತ್​ ಟೈಟನ್ಸ್​ ವಿರುದ್ಧ ಪಂತ್ ಬ್ಯಾಟಿಂಗ್​ ರೌದ್ರ ನರ್ತನ ನಡೆಸಿದ್ರು. 8 ಸಿಕ್ಸರ್ ಒಳಗೊಂಡ ಸಿಡಿಲಬ್ಬರದ 88 ರನ್​ ಚಚ್ಚಿ, ತಂಡದ ರೋಚಕ ಗೆಲುವಿಗೆ ಕಾರಣರಾದ್ರು. ಇಲ್ಲಿ ವಿಕ್ಟರಿಗಿಂತ ಸಂಕಷ್ಟದಲ್ಲಿ ದಿಟ್ಟವಾಗಿ ಕ್ರೀಸ್​ನಲ್ಲಿ ನೆಲೆಯೂರಿದ ಪಂತ್​​​ ಇನ್ನಿಂಗ್ಸ್​​ ಅನ್ನ ಎಲ್ಲರೂ ಕೊಂಡಾಡಿದ್ರು. ರಿಎಂಟ್ರಿ ಬಳಿಕ ಪಂತ್ ತಮ್ಮ ಆಟದ ಶೈಲಿಯನ್ನ ಬದಲಿಸಿಕೊಂಡಿದ್ದಾರೆ. ಅಗ್ರೆಸ್ಸಿವ್​ ಪಂತ್​ ಬೌಲರ್​ಗಳನ್ನ ಇನ್ನಿಲ್ಲದಂತೆ ಕಾಡಿದ್ದಾರೆ. ಇದೀಗ ಮೆಚ್ಯೂರಿಟಿ ಅನ್ನೋ ಹೊಸ ವೆಪನ್ ಅವರಿಗೆ ಸಿಕ್ಕಿದ್ದು, ಅವರನ್ನ ಕಟ್ಟಿಹಾಕೋದು ನಿಜಕ್ಕೂ ಕಷ್ಟವೇ ಸೈ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್​ರೌಂಡರ್ ಕ್ರಿಕೆಟ್​ಗೆ ಗುಡ್​ಬೈ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ರೀಸ್​ನಲ್ಲಿ ಹೊಸ ವೆಪನ್ ಹುಡುಕಿಕೊಂಡ ರಿಷಬ್ ಪಂತ್; ಇನ್ಮೇಲೆ ಔಟ್ ಮಾಡೋದು ಸುಲಭ ಇಲ್ಲ

https://newsfirstlive.com/wp-content/uploads/2024/06/RISHAB-PANT-1.jpg

Load More