/newsfirstlive-kannada/media/post_attachments/wp-content/uploads/2024/06/darshan-and-Vijayalakshmi-1.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​​ ಅರೆಸ್ಟ್ ಆಗಿ ಇಂದಿಗೆ 9 ದಿನ. ಅರೆಸ್ಟ್​ ಆದ ನಂತರದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪೊಲೀಸ್​ ಠಾಣೆಗೆ ಬಂದಿರಲಿಲ್ಲ. ಆದರೀಗ ಇದ್ದಕ್ಕಿದ್ದಂತೆಯೇ ಪೊಲೀಸ್​ ಠಾಣೆಯಲ್ಲಿ ವಿಜಯಲಕ್ಷ್ಮೀ ಪ್ರತ್ಯಕ್ಷವಾಗಿದ್ದಾರೆ.
ವಿಜಯಲಕ್ಷ್ಮೀಯವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ಠಾಣೆಗೆ ಆಗಮಿಸಿದ್ದಾರೆ. ಆದರೆ ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸದ್ಯ ಠಾಣೆಯ ಒಳಗೆ ವಿಜಯಲಕ್ಷ್ಮೀ ಹೋಗಿದ್ದಾರೆ ಎಂಬ ಸಂಗತಿ ನ್ಯೂಸ್​​ಫಸ್ಟ್​ಗೆ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/06/Vijayalakshmi.jpg)
ವಿಜಯಲಕ್ಷ್ಮೀಯವರು ಕಾರಿನಲ್ಲಿ ಠಾಣೆಗೆ ಬಂದಿದ್ದಾರೆ. ಅವರ ಹೆಸರಿನಲ್ಲಿ ರಿಜಿಸ್ಟರ್ ಅಗಿರುವ ಕಾರಿನಲ್ಲಿ ಧಾವಿಸಿದ್ದಾರೆ. ಆದರೆ ಕಾರಿನಲ್ಲಿ ಯಾರ್ಯಾರು ಬಂದಿದ್ದಾರೆ ಎನ್ನುವ ಬಗ್ಗೆ ಸ್ವಷ್ಟ ಮಾಹಿತಿ ಬರಬೇಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​​ ಅರೆಸ್ಟ್ ಆಗಿ ಇಂದಿಗೆ 9 ದಿನ. ಅರೆಸ್ಟ್​ ಆದ ನಂತರದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀಯಾಗಲಿ, ಸ್ನೇಹಿತರು, ಕುಟುಂಬಸ್ಥರು, ತಾಯಿ ಮೀನಾ, ತಮ್ಮ ದಿನಕರ್ ತೂಗುದೀಪ್​​ ಪೊಲೀಸ್​ ಠಾಣೆಯತ್ತ ಬಂದಿರಲಿಲ್ಲ. ಆದರೀಗ ಇದ್ದಕ್ಕಿದ್ದಂತೆಯೇ ಪೊಲೀಸ್​ ಠಾಣೆಯಲ್ಲಿ ದರ್ಶನ್​​ ಪತ್ನಿ ವಿಜಯಲಕ್ಷ್ಮೀ ಪ್ರತ್ಯಕ್ಷವಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us