/newsfirstlive-kannada/media/post_attachments/wp-content/uploads/2024/07/Owl.jpg)
ದೇಶವೊಂದು ಬರೋಬ್ಬರಿ 4 ಲಕ್ಷದ 50 ಸಾವಿರ ಗೂಬೆಗಳನ್ನು ಕೊಲ್ಲಲು ಮುಂದಾಗಿರುವ ಘಟನೆ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ‘ಬಾರ್ಡ್’ ಜಾತಿಗೆ ಸೇರಿದ ಗೂಬೆಗಳನ್ನು ಕೊಲ್ಲಲು ಕರಡು ಸಿದ್ಧಪಡಿಸಿದೆ. ಆದರೆ ಸರ್ಕಾರವೇ ಗೂಬೆಗಳನ್ನು ಕೊಲ್ಲಲು ನಿರ್ಧಾರ ಮಾಡಿರೋದೇಕೆ ಗೊತ್ತಾ? ಇಲ್ಲಿದೆ ಮಾಹಿತಿ.
ಕೀನ್ಯಾ ದೇಶ ತನ್ನ ದೇಶದಲ್ಲಿದ್ದ ಸುಮಾರು 10 ಲಕ್ಷ ಭಾರತೀಯ ಮೂಲದ ಕಾಗೆಗಳನ್ನು ಕೊಲ್ಲುವುದಾಗಿ ಘೋಷಿಸಿತ್ತು. ಇದೀಗ ಅಮೆರಿಕ ದೇಶ ಗೂಬೆಗಳನ್ನು ಕೊಲ್ಲುವುದಾಗಿ ನಿರ್ಧಿರಿಸಿದೆ. ಸುಮಾರು 4 ಲಕ್ಷ 50 ಸಾವಿರ ಗೂಬೆಗಳನ್ನು ಹೊಡೆದುರಿಸಲು ಪ್ಲಾನ್ ಮಾಡಿದೆ.
ಇದನ್ನೂ ಓದಿ: ಅರುಣ್ ಕಟಾರೆಯಿಂದ ಸ್ಯಾಂಡಲ್ವುಡ್ನ ಈ ಟೆಕ್ನಿಷನ್ಗೆ ಸಂಕಷ್ಟ! ಡಮ್ಮಿ ವೆಪನ್ ಕೊಟ್ಟಿದ್ದೇ ಈತನಂತೆ!
ಅಮೆರಿಕದ ‘ಸ್ಪಾಟೆಡ್ ಗೂಬೆ’ಗಳು ಸದ್ಯ ಅಳಿವಿನ ಅಂಚಿನಲ್ಲಿವೆ. ಕಾರಣ ‘ಬಾರ್ಡ್’ ಗೂಬೆಗಳು ಹೆಚ್ಚಿದ ಪರಿಣಾಮ ‘ಸ್ಟಾಟೆಡ್ ಗೂಬೆ’ಗಳು ಕೊನೆಯ ಕಾಲಘಟ್ಟದಲ್ಲಿವೆ. ಹಾಗಾಗಿ ಅವುಗಳನ್ನು ಉಳಿಸಲು ಸರ್ಕಾರ ಚಿಂತಿಸಿದೆ. ಈ ಕಾರಣಕ್ಕಾಗಿ ಸದ್ಯ ಸಂತತಿ ಹೆಚ್ಚಿರುವ ‘ಬಾರ್ಡ್’ ಗೂಬೆಗಳು ಹೊಡೆದುರುಳಿಸಲು ಮತ್ತು ಅಳಿವಿನಂಚಿನಲ್ಲಿರುವ ಗೂಬೆಗಳನ್ನು ಉಳಿಸಲು ಯೋಚಿಸಿದೆ. ಇದಕ್ಕೆಂದೇ ವೃತ್ತಿಪರ ಶೂಟರ್ಗಳ ಸಹಾಯ ಪಡೆಯುವ ಮೂಲಕ ‘ಬಾರ್ಡ್’ ಗೂಬೆಗಳನ್ನು ಕೊಲ್ಲಲು ಮುಂದಾಗಿದ್ದಾರೆ .
ಇದನ್ನೂ ಓದಿ: ನಿವೃತ್ತಿ ಬೆನ್ನಲ್ಲೇ ಕೊಹ್ಲಿಗೆ ಹೊಸ ಜವಾಬ್ದಾರಿ ಹೊರಿಸಿದ ರಾಹುಲ್ ದ್ರಾವಿಡ್.. ಆ ಕನಸು ನನಸು ಮಾಡ್ತಾರಾ ಕಿಂಗ್!
‘ಸ್ಪಾಟೆಡ್ ಗೂಬೆ’ಗಳು ಮಚ್ಚೆಯುಳ್ಳ ಗೂಬೆಗಳಾಗಿದ್ದು, ‘ಬಾರ್ಡ್’ ಗೂಬೆಗಳಿಂದಾಗಿ ಈ ಜಾತಿ ಅಳಿವಿನ ಅಂಚಿನತ್ತ ಸಾಗಿವೆ. ಮತ್ತೊಂದೆಡೆ ಬಾರ್ಡ್ ಗೂಬೆಗಳು ಪೂರ್ವ ಯುನೈಟೆಡ್ ಸ್ಟೇಟ್ಸ್ ನ ಮೂಲದ್ದಾಗಿದ್ದು, ಈಗ ‘ಸ್ಪಾಟೆಡ್ ಗೂಬೆ’ಗಳು ಜಾತಿಗಳನ್ನು ಸ್ವಾಧೀನಪಡಿಸಿಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ