ಬೇಸರದಲ್ಲಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಿಕ್ಕಿದ ಸಿಹಿ ಸುದ್ದಿ
ತವರಿಗೆ ಮರಳದ ವಿರಾಟ್ ಕೊಹ್ಲಿ, ಕಮ್ಬ್ಯಾಕ್ ಚರ್ಚೆ ಬಗ್ಗೆ ಚರ್ಚೆ
ಕಿಂಗ್ ಕೊಹ್ಲಿಯ ಕೋಟ್ಯಾಂತರ ಅಭಿಮಾನಿಗಳಿಗೆ ಗುಡ್ನ್ಯೂಸ್.!
ಅಸಂಖ್ಯಾ ಕ್ರಿಕೆಟ್ ಪ್ರೇಮಿಗಳಲ್ಲಿ ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆ ಒಂದೇ. ಅದು ಕಿಂಗ್ ಕೊಹ್ಲಿ, ಮಿಲಿಯನ್ ಡಾಲರ್ ಟೂರ್ನಿ ಆಡ್ತಾರಾ ಇಲ್ವಾ ಅನ್ನೋದು. ಆದ್ರೀಗ ಈ ಮಿಲಿಯನ್ ಡಾಲರ್ ಪಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮಿಲಿಯನ್ ಡಾಲರ್ ಟೂರ್ನಿಗೆ ಕೌಂಟ್ಡೌನ್ ಶುರುವಾಗಿದೆ. ಟ್ರೋಫಿ ಗೆಲ್ಲೋ ಲೆಕ್ಕಾಚಾರದಲ್ಲಿರೋ 10 ತಂಡಗಳೂ, ತೆರೆ ಹಿಂದೆ ಮಾಸ್ಟರ್ ಪ್ಲಾನ್ನಲ್ಲಿ ಬ್ಯುಸಿಯಾಗಿವೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಾಯಲ್ ಫಾನ್ಸ್ಗೆ ಇರೋ ಪ್ರಶ್ನೆ ಮಾತ್ರ ಒಂದೇ. ಅದೇ ಐಪಿಎಲ್ ಸೀಸನ್-17ರಲ್ಲಿ ವಿರಾಟ್ ಆಡ್ತಾರಾ, ಇಲ್ವಾ ಅನ್ನೋದು.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ವಿರಾಟ್, ಸರಣಿ ಆರಂಭಕ್ಕೂ ಮುನ್ನವೇ ಮೊದಲ 2 ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದರು. ಮೊದಲ 2 ಟೆಸ್ಟ್ಗಳಿಗೆ ವಿರಾಟ್ ಅಲಭ್ಯರಾಗಿದ್ರು. ಮೂರನೇ ಟೆಸ್ಟ್ನಿಂದ ಲಭ್ಯರಾಗ್ತಾರೆ ಎಂಬ ಭರವಸೆ ಕ್ರಿಕೆಟ್ ಅಭಿಮಾನಿಗಳಲ್ಲಿತ್ತು. ಆದ್ರೆ, ಯಾವಾಗ ವಿರಾಟ್ ಕೊಹ್ಲಿ, ಟೆಸ್ಟ್ ಸಿರೀಸ್ನಿಂದ ಹೊರಗೆ ಉಳಿದ್ರೋ, ಸ್ವತಃ ಬಿಸಿಸಿಐ ಆ್ಯಂಡ್ ಟೀಮ್ ಮ್ಯಾನೇಜ್ಮೆಂಟ್ ಗೊಂದಲಕ್ಕೀಡಾಗಿತ್ತು.
ಬಿಸಿಸಿಐ ಅಧಿಕಾರಿಗಳು, ವಿರಾಟ್ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿತ್ತು. ಟೀಮ್ ಮ್ಯಾನೇಜ್ಮೆಂಟ್, ಯಾವಾಗ ಬರ್ತಾರೋ ಅನ್ನೋ ಮಾಹಿತಿ ಇಲ್ಲ ಅಂದ್ರೋ, ಈ ಬೆನ್ನಲ್ಲೇ ಹುಟ್ಟಿಕೊಂಡ ಪ್ರಶ್ನೆಯೇ ವಿರಾಟ್, ಐಪಿಎಲ್ನಲ್ಲಿ ಆಡ್ತಾರಾ ಇಲ್ವಾ ಅನ್ನೋದು. ಇದಕ್ಕೆಲ್ಲ ಕಾರಣ ಮಗ ಆಕಾಯ್ ಜನನ.
ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿಯದ್ದೇ ಚರ್ಚೆ
ಯಾವಾಗ ಲಂಡನ್ನಲ್ಲಿ ವಿರುಷ್ಕಾ ದಂಪತಿ, ಅಕಾಯ್ಗೆ ಸ್ವಾಗತಿಸಿದರೋ ಆಗ ಫ್ಯಾನ್ಸ್ ಸಂಭ್ರಮದಲ್ಲೇ ತೇಲಾಡಿದ್ರು. ಆದ್ರೆ, ಮಗನ ಜನನವಾಗಿ 20 ದಿನಗಳು ಕಳೆದರೂ, ಯಾವಾಗ ವಿರಾಟ್ ತವರಿಗೆ ಮರಳಿಲ್ಲವೋ ಆಗ ಹುಟ್ಟಿಕೊಂಡಿದ್ದೇ ಕೊಹ್ಲಿ ಕಮ್ಬ್ಯಾಕ್ ಚರ್ಚೆ?.
ಕೆಲವರು ವಿರಾಟ್ ಕೊಹ್ಲಿ, ಐಪಿಎಲ್ ಆಡ್ತಾರೆ ಅಂದ್ರೆ, ಕೆಲವರು ಆಡೋದೇ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ರು. ಕೊಹ್ಲಿಗೆ ಫ್ಯಾಮಿಲಿಯೇ ಮುಖ್ಯ, ಹೀಗಾಗಿ ಆಡೋದು ಅನುಮಾನ ಎಂದಿದ್ರು. ಆರ್ಸಿಬಿ ಜೆರ್ಸಿಯಲ್ಲಿ ಕೊಹ್ಲಿಯನ್ನ ನೋಡಕ್ಕೆ ಆಗಲ್ಲ ಎಂದು ಫ್ಯಾನ್ಸ್ ಬೇಸರದಲ್ಲಿದ್ರು. ಆದ್ರೆ, ಈ ಎಲ್ಲ ಬೆಳವಣೆಗೆಗಳ ನಡುವೆ ಕೋಟ್ಯಾಂತರ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ.
ಫ್ಯಾನ್ಸ್ಗೆ ಬದ್ಧವೈರಿ ಎದುರೇ ಕಣಕ್ಕಿಳಿಯುವ ನಿರೀಕ್ಷೆ!
ಕಳೆದೊಂದು ತಿಂಗಳಿಂದ ಲಂಡನ್ನಲ್ಲೇ ವಾಸ್ತವ್ಯ ಹೂಡಿರುವ ವಿರಾಟ್, ಇದೇ ತಿಂಗಳು ಭಾರತಕ್ಕೆ ಆಗಮಿಸುತ್ತಾರೆ ಎನ್ನಲಾಗಿದೆ. ಆದ್ರೆ, ಕಿಂಗ್ ಕೊಹ್ಲಿ ಆಗಮನದ ದಿನಾಂಕ ಮಾತ್ರ ಅಧಿಕೃತವಾಗಿಲ್ಲ. ಹೀಗಾಗಿ ವಿರಾಟ್, ಐಪಿಎಲ್ನಲ್ಲಿ ಆಡ್ತಾರೆ ಅನ್ನೋದು ಫ್ಯಾನ್ಸ್ ನಿರೀಕ್ಷೆ ಹೆಚ್ಛಾಗಿದೆ. ಮಾರ್ಚ್ 22ರಂದು ಚೆನ್ನೈ ಎದುರಿನ ಉದ್ಘಾಟನಾ ಪಂದ್ಯದಲ್ಲೇ ವಿರಾಟ್, ಕಣಕ್ಕಿಳಿಯಲಿ ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಮಹೋನ್ನತ ಕನಸಾಗಿದೆ.
ತವರಿನ ಎರಡು ಪಂದ್ಯ ಮಿಸ್.. ಫಲಿತಾಂಶಕ್ಕೂ ಎಫೆಕ್ಟ್
ಅಕಸ್ಮಾತ್ ವಿರಾಟ್ ಕೊಹ್ಲಿ, ಇದೇ ತಿಂಗಳ ಅಂತ್ಯದಲ್ಲಿ ಬರುವುದಾದ್ರೆ. ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ತವರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯಕ್ಕೂ ಅಲಭ್ಯರಾಗೋ ಸಾಧ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಭಾರೀ ಪರಿಣಾಮವೇ ಬೀಳಲಿದೆ.
ಆರಂಭಿಕ ಪಂದ್ಯಗಳ ಫಲಿತಾಂಶಗಳ ಮೇಲೆಯು ಹೊಡೆತ ಬೀಳುವ ಸಾಧ್ಯತೆ ಇದೆ. ಇದು ಸಹಜವಾಗೇ ಆರ್ಸಿಬಿ ತಂಡದ ಮೇಲೆ ಮತ್ತಷ್ಟು ಒತ್ತಡ ಬೀಳುವಂತೆ ಮಾಡೋದು ಗ್ಯಾರಂಟಿ. ಹೀಗಾಗಿ ಟೂರ್ನಿಯ ಪ್ರತಿ ಪಂದ್ಯಕ್ಕೂ ವಿರಾಟ್, ಇರಲಿ ಅನ್ನೋದೇ ಕೋಟ್ಯಾಂತರ ಫ್ಯಾನ್ಸ್ ಪ್ರಾರ್ಥನೆ. ಆದ್ರೆ, ಈ ಪ್ರಾರ್ಥನೆ ಫಲಿಸುತ್ತಾ, ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ