ದರ್ಶನ್ ಫೋಟೋ ವೈರಲ್ ಮಾಡಿದ ರೌಡಿ ವೇಲು
ರಾತ್ರಿ ವೇಳೆ ರೌಡಿ ವೇಲುಗೆ ಸರಿಯಾಗಿ ಬಿತ್ತಾ ಗೂಸಾ?
ರೌಡಿ ಮೇಲು ಯಾರು? ಆತ ಯಾವ ಕೇಸಲ್ಲಿ ಜೈಲು ಸೇರಿದ?
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಪೋಟೋಗಳು ವೈರಲ್ ಆದ ಹಿನ್ನಲೆ ವಿಲ್ಸನ್ ಗಾರ್ಡನ್ ನಾಗ ಕೆರಳಿ ಕೆಂಡವಾಗಿದ್ದಾನೆ ಎಂಬ ಸಂಗತಿಯೊಂದು ಹೊರಬಿದ್ದಿದೆ. ಫೋಟೋ ವೈರಲ್ ಮಾಡಿದ್ದ ರೌಡಿ ವೇಲುಗೆ ರಾತ್ರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ರೌಡಿ ವೇಲುಗೆ ಪೋಟೊ ವೈರಲ್ ಮಾಡಿರೋದು ನೀನೆ ಎಂದು ವಿಲ್ಸನ್ ಗಾರ್ಡನ್ ನಾಗ ಹೊಡೆದಿದ್ದಾನಂತೆ. ದರ್ಶನ್ ಜೊತೆಗೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ಮಾಧ್ಯಮದಲ್ಲಿ ಬಿತ್ತರವಾಗುತ್ತಿರುವ ಸುದ್ದಿ ತಿಳಿದು ಥಳಿಸಿದ್ದಾನಂತೆ.
ಇದನ್ನೂ ಓದಿ: ದರ್ಶನ್ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿ.. ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ರೌಡಿ ವೇಲು ಸಿದ್ದಾಪುರ ಮಹೇಶನ ಕೊಲೆ ಕೇಸಲ್ಲಿ ಜೈಲು ಸೇರಿದ್ದನು. ದರ್ಶನ್, ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್ ನಾಗರಾಜು ಜೈಲಿನಲ್ಲಿ ಕುಳಿತು ಆರಾಮಾಗಿ ಹರಟೆ ಹೊಡೆಯುವ ದೃಶ್ಯವನ್ನು ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿದ್ದನು. ಈ ವೇಳೆ ದರ್ಶನ್ ಕೈಯಲ್ಲಿ ಟೀ ಕಪ್ ಮತ್ತು ಸಿಗರೇಟು ಕಾಣಿಸಿದೆ. ಇದೇ ಫೋಟೋ ಮಾಧ್ಯಮಗಳಿಗೆ ಸಿಕ್ಕಿದೆ.
ಇದನ್ನೂ ಓದಿ: BREAKING: ದರ್ಶನ್ ಮತ್ತೊಂದು ಫೋಟೋ ವೈರಲ್.. ಅಚ್ಚರಿ ಮೂಡಿಸಿದೆ ಕೇಂದ್ರ ಕಾರಾಗೃಹದಲ್ಲಿ ಆರೋಪಿ ಮತ್ತು ಕೈದಿಗಳ ನಡೆ!
ವೈರಲ್ ಆದ ಫೋಟೋ ವಿಚಾರವಾಗಿ ವಿಲ್ಸನ್ ಗಾರ್ಡನ್ ನಾಗ ಸೇರಿ ಹತ್ತು ಜನರಿಂದ ವೇಲು ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ನ್ಯೂಸ್ ಫಸ್ಟ್ಗೆ ಈ ಕುರಿತು ಜೈಲಿನ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ