ಘಟನೆ ನಡೆದ 20 ಸೆಕೆಂಡ್ನಲ್ಲೇ ಸ್ಥಳಕ್ಕೆ ಬಂದಿತ್ತು ಬೆಸ್ಕಾಂ ವಾಹನ!
ಆ ತಾಯಿ-ಮಗುವಿಗೂ ಮೊದಲೇ ಪಾರಾಗಿದ್ದ ಅಲ್ಲೊಬ್ಬ ವ್ಯಕ್ತಿ!
ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ ತಾಯಿ ಮಗಳು ಸಾವಿನ ಕೇಸ್
ಬೆಂಗಳೂರು: ಮನುಷ್ಯರ ಜೀವನ ನೀರಿನ ಮೇಲಿನ ಗುಳ್ಳೆಯಂತೆ.. ಸೆಕೆಂಡ್ಗಳಲ್ಲಿ ಮನುಷ್ಯನ ಜೀವ ಹೋಗ್ಲಬಹುದು ಉಳಿಲುಬಹುದು. ಕೆಲ ದಿನಗಳ ಹಿಂದೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ತಾಯಿ ಮಗು ಪ್ರಕರಣದಲ್ಲೂ ಇದೇ ಆಗಿದೆ. ಬೆಸ್ಕಾಂನವರು ಕೇವಲ 20 ಸೆಕೆಂಡ್ ಬೇಗ ಬಂದಿದ್ರು ತಾಯಿ ಮಗು ಪ್ರಾಣ ಉಳಿಯುತ್ತಿತ್ತು. ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದ ತಾಯಿ ಮಗಳು ಪ್ರಕರಣ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ಪತಿಯ ಕಣ್ಣೇದುರೆ ಹೆಂಡತಿ ಮಗು ಬೆಂಕಿಯ ಕೆನ್ನಲಾಗೆಯಲ್ಲಿ ವಿಲ ವಿಲ ಒದ್ದಾಡಿ ಜೀವ ಬಿಟ್ಟಿದ್ರು, ಇದೀಗ ಈ ದುರ್ಘಟನೆಯ ಸಿಸಿಟಿವಿ ಲಭ್ಯವಾಗಿದ್ದು, ಈ ದೃಶ್ಯ ನೋಡಿದ್ರೆ ನಿಮ್ಮ ಹೃದಯ ಮಮ್ಮಲ ಮರುಗುತ್ತೆ.
ಸಮಯ 5 ಗಂಟೆ 42 ನಿಮಿಷ. ವಿದ್ಯುತ್ ತಿಂತಿ ಕಟ್ ಆಗಿ ಬಿದ್ದು, ಬರೋಬ್ಬರಿ ಎರಡು ಗಂಟೆ ಕಳೆದಿತ್ತು. ಆದ್ರೆ ಎರಡು ಗಂಟೆ ಕಳೆದ್ರೂ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ಅಲ್ಲಿಂದ ತೆರವುಗೊಂಡಿರಲಿಲ್ಲ. ಯಾಕಂದ್ರೆ ಅದು ಯಾರ ಗಮನಕ್ಕೂ ಬಂದಿಲ್ಲ. ಬಂದವನು ಯಾರಿಗೂ ಹೇಳಿಲ್ಲ. ಅದೇ ಸಮಯಕ್ಕೆ ತಮಿಳುನಾಡಿನಿಂದ ಗೋಪಾಲ್, ಪತ್ನಿ ಸೌಂದರ್ಯ ಹಾಗೂ 9 ತಿಂಗಳ ಹೆಣ್ಣು ಮಗು ಸುವಿಕ್ಸ ಲಿಯಾ ಜೊತೆ ಬೆಂಗಳೂರಿನ ವೈಟ್ ಫೀಲ್ಡ್ನ ಕಾಡುಗೋಡಿಯಲ್ಲಿ ಬಂದಿಳಿದಿದ್ದರು. ಸೌಂದರ್ಯ ತನ್ನ ಮಗುವಿನ ಜೊತೆ ತಂತಿ ಕಟ್ ಆಗಿ ಬಿದ್ದಿದ್ದ ಪುಟ್ಪಾತ್ ಮೇಲೆ ನಡೆದುಕೊಂಡು ಬರ್ತಿದ್ರೆ, ಗಂಡ ಗೋಪಾಲ್ ಕೆಳಗೆ ನಡೆದುಕೊಂಡು ಬರ್ತಿದ್ದಾನೆ. 5 ಗಂಟೆ 42 ನಿಮಿಷ 12 ಸೆಕೆಂಡ್ಗೆ ಸೌಂದರ್ಯ ಕಟ್ ಆಗಿ ಬಿದ್ದಿದ್ದ ತಂತಿ ತುಳಿದು ಪುಟ್ಪಾತ್ ಮೇಲೆ ಬಿದ್ದಿದ್ದಾರೆ. ಅಷ್ಟೆ ನೋಡಿ ವಿದ್ಯುತ್ನಿಂದ ಆವರಿಸಿದ ಬೆಂಕಿ ಕ್ಷಣಾರ್ಧದಲ್ಲಿ ಸೌಂದರ್ಯ ಮತ್ತು ಮಗು ಇಬ್ಬರಿಗೂ ಹೊತ್ತಿಕೊಂಡಿದೆ. ಅತ್ತ ಪತಿ ಗೋಪಾಲ್ ಇಬ್ಬರನ್ನ ಕಾಪಾಡೋದಕ್ಕ ಪ್ರಯತ್ನ ಪಟ್ರೂ ಸಾಧ್ಯವಾಗದೆ ರಕ್ಷಣೆಗಾಗಿ ಅಂಗಲಾಚಿದ್ದಾನೆ. ಆದ್ರೆ ಯಾರೋಬ್ಬರು ಅವನ ಸಹಾಯಕ್ಕೆ ಧಾವಿಸಿಲ್ಲ. ಒಂದ್ವೆಳೆ ನೆರವಿಗೆ ಹೋಗಿದ್ರು ಯಾರಿಂದಲೂ ಏನೂ ಮಾಡಲು ಆಗ್ತಿರಲಿಲ್ಲ. ಯಾಕಂದ್ರೆ ಅಷ್ಟೊತ್ತಿಗಾಗಲೇ ಸೌಂದರ್ಯ ಮತ್ತು ಮಗು ದೇಹ ಬೆಂಕಿಯಿಂದ ಹೊತ್ತಿ ಉರಿದಿತ್ತು.
ದುರಂತ ಏನಂದ್ರೆ ತಾಯಿ ಮಗುವಿಗೆ ವಿದ್ಯುತ್ ತಗುಲಿದ 20 ಸೆಕೆಂಡ್ನಲ್ಲೆ ಬೆಸ್ಕಾಂ ವಾಹನವೊಂದು ಆ ಸ್ಥಳಕ್ಕೆ ರೀಚ್ ಆಗಿದೆ. ಎಂಥ ವಿಪರ್ಯಾಸ ಅಲ್ಲವೇ! ಒಂದ್ವೆಳೆ ಬೆಸ್ಕಾಂ ಸಿಬ್ಬಂದಿ 20 ಸೆಕೆಂಡ್ ಬೇಗ ಬಂದಿದ್ರೆ ಬಹುಶಃ ಆ ತಾಯಿ ಮಗುವಿನ ಜೀವ ಉಳಿಯುತ್ತಿತ್ತೆನೋ? ಅಂತ ಅನಿಸಿಬಿಡುತ್ತೆ.! ಆದ್ರೆ, ಇದು ಎಷ್ಟರ ಮಟ್ಟಿಗೆ ವಾಸ್ತವ ಅಂತ ಜಡ್ಜ್ ಮಾಡೋಕೆ ಆಗ್ತಿಲ್ಲ. ಒಂದ್ಕಡೆ ಕರೆಂಟ್ ತಂತಿ ತಗುಲಿ ನಡುರಸ್ತೆಯಲ್ಲಿ ತಾಯಿ-ಮಗು ಹೊತ್ತಿ ಉರಿಯುತ್ತಿದ್ದರೆ, ಆಗಷ್ಟೇ ಸ್ಥಳಕ್ಕೆ ಬಂದ ಬೆಸ್ಕಾ ವಾಹನ ಎದುರುಗಡೆ ರಸ್ತೆಗೆ ಬಂದು ನಿಂತಿತ್ತು. ವ್ಯಾನ್ನಿಂದ ಕೆಳಗಿಳಿದ ಸಿಬ್ಬಂದಿಗೆ ಆರಂಭದಲ್ಲಿ ಏನಾಯ್ತು ಅಂತ ಗೊತ್ತಾಗಿಲ್ಲ. ಆದ್ರೆ ಎಲ್ಲರೂ ಆ ಕಡೆ ಓಡಿ ಹೋಗಿದ್ದನ್ನ ಕಂಡು ತಾನೂ ಕೂಡ ಓಡಿ ಹೋದರು. ಆದ್ರೆ ಅಷ್ಟೊತ್ತಿಗೆ ಆ ತಾಯಿ ಮಗುವಿನ ದೇಹ ಹೊತ್ತಿ ಉರಿದಿತ್ತು.
ಒಟ್ಟಾರೆ, 3 ಗಂಟೆ 40 ನಿಮಿಷಕ್ಕೆ ಅಲ್ಲಿ ವಿದ್ಯುತ್ ತಂತಿ ಕಟ್ ಆಗಿರುವುದು ಗಮನಕ್ಕೆ ಬಂದಿದೆ. ಆದರೆ ಐದು ಗಂಟೆ 40 ನಿಮಿಷಕ್ಕೆ ಅಲ್ಲೊಂದು ಬೆಸ್ಕಾ ವಾಹನ ಬರುತ್ತೆ. ನಿಜಕ್ಕೂ ಅವರಿಗೆ ವಿದ್ಯುತ್ ತಂತಿ ಕಟ್ ಆಗಿ ಬಿದ್ದಿರುವ ಮಾಹಿತಿ ಇದ್ದರೂ ಅಷ್ಟು ತಡವಾಗಿ ಬಂದರೇ? ಅಥವಾ ಪ್ರತಿನಿತ್ಯ ಬರುವಂತೆ ರೌಂಡ್ಸ್ ಬಂದರೋ ಗೊತ್ತಿಲ್ಲ. ಬಟ್, ಎಲ್ಲೋ ಒಂದು ಕಡೆ ಬೆಸ್ಕಾ ಸಿಬ್ಬಂದಿಗಳು ರಸ್ತೆಯಲ್ಲಿ ಕಟ್ ಆಗಿ ಬಿದ್ದಿರುವ ವಿದ್ಯುತ್ ತಂತಿಗಳ ಬಗ್ಗೆ ಗಮನಿಸಬೇಕಿತ್ತು. ಹೀಗೆ ಎಚ್ಚರ ವಹಿಸದೇ ಇರೋದು ಈ ಪ್ರಕರಣದಲ್ಲಿ ಎದ್ದು ಕಾಣ್ತಿದೆ.
ಸದ್ಯ ಈ ಘಟನೆ ಸಂಬಂಧ ಲೋಕಾಯುಕ್ತ ಕೂಡ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಂಧನ ಇಲಾಖೆ ಅಪರ ಕಾರ್ಯದರ್ಶಿ, ಬೆಸ್ಕಾಂನ ಮ್ಯಾನೇಜಿಂಗ್ ಡೈರೆಕ್ಟರ್, ಬೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್ ಬೆಸ್ಕಾಂ ಕಾರ್ಯಾನಿವಾಹಕ ಅಭಿಯಂತರ, ವೈಟ್ ಫೀಲ್ಡ್ ವಿಭಾಗ. ಎಇಇ ವೈಟ್ ಫೀಲ್ಡ್ ಸೇರಿ ಒಟ್ಟು 7 ಜನರ ವಿರುದ್ಧ ಸೂಮೋಟೋ ಪ್ರಕರಣ ದಾಖಲಾಗಿದೆ. ಗುಡ್ಡಕ್ಕೆ ಬೆಂಕಿ ಹೊತ್ತಿದ್ದಾಗ ಬಾವಿ ತೋಡಿದ್ದರು ಅನ್ನೋ ಹಾಗೆ ದುರಂತ ನಡೆದು ಹೋಗಿದೆ. ಜೀವಗಳು ಪ್ರಾಣ ಬಿಟ್ಟಿವೆ. ಈಗೇನು ಮಾಡಿದ್ರೂ ಹೋದ ಜೀವಗಳಂತು ವಾಪಸ್ ಬರಲ್ಲ. ಆದ್ರೆ ಇನ್ನಾದ್ರೂ ಇಂಥಹ ದುರ್ಘಟನೆ ನಡೆಯದೇ ಇರೋ ಹಾಗೆ ಬೆಸ್ಕಾಂ ಎಚ್ಚರಿಕೆ ವಹಿಸೋದು ತುಂಬಾ ಮುಖ್ಯ. ಬೆಂಗಳೂರಿನಂತ ನಗರದಲ್ಲೇ ಇಂಥ ಬೇಜವಬ್ದಾರಿ ತೋರಿದ್ರೆ ಹಳ್ಳಿ ಹಳ್ಳಿಗಳಲ್ಲಿನ ಪರಿಸ್ಥಿತಿ ಆ ದೇವರಿಗೆ ಗೊತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ