VIDEO: ಪಾಸ್ತಾಗೆ ಅಜ್ಜಿಯ ಚಿತಾಭಸ್ಮವನ್ನು ಸೇರಿಸಿ ತಿಂದ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?

author-image
AS Harshith
Updated On
VIDEO: ಪಾಸ್ತಾಗೆ ಅಜ್ಜಿಯ ಚಿತಾಭಸ್ಮವನ್ನು ಸೇರಿಸಿ ತಿಂದ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?
Advertisment
  • ತನ್ನ ಅಜ್ಜಿಯ ಚಿತಾಭಸ್ಮವನ್ನು ಪಾಸ್ತಾಗೆ ಸೇರಿಸಿದ ಮಹಿಳೆ
  • ಬೆಳಗಿನ ಉಪಹಾರದ ವೇಳೆ ಪಾಸ್ತಾಗೆ ಚಿತಾಭಸ್ಮ ಸೇರಿಸಿ ತಿಂದಳು
  • ರೇಡಿಯೋದಲ್ಲಿ ನೈಜ ಘಟನೆಯನ್ನು ಹಿಂಜರಿಯದೇ ಹೇಳಿದ ಮಹಿಳೆ

ನೂಡಲ್ಸ್​, ಪ್ರೈಡ್​​ರೈಸ್​, ಪಪ್ಸ್​ ತಿನ್ನಲು ಸಾಸ್​ ಬೇಕೇ ಬೇಕು. ಇಡ್ಲಿ, ಬಜ್ಜಿ, ದೋಸೆ ಜೊತೆ ಸವಿಯಲು ಚಟ್ನಿ ಬೇಕು. ಆದರೆ ಇಲ್ಲೊಬ್ಬ ಮಹಿಳೆ ಪಾಸ್ತಾ ತಿನ್ನಲು ಏನು ಮಾಡಿದ್ದಾಳೆ ಗೊತ್ತಾ?. ತನ್ನ ಅಜ್ಜಿಯ ಚಿತಾಭಸ್ಮವನ್ನು ಹಾಕಿಕೊಂಡು ಸವಿದಿದ್ದಾಳೆ. ಮಾತ್ರವಲ್ಲ ಮನೆಯವರಿಗೂ ನೀಡಿದ್ದಾಳೆ.

ಹೌದು. ಇಂತಹದೊಂದು ಅಚ್ಚರಿಯ ಪ್ರಸಂಗ ಮುನ್ನೆಲೆಗೆ ಬಂದಿದೆ. ಸಾಮಾನ್ಯವಾಗಿ ಕಳೆದುಕೊಂಡ ವ್ಯಕ್ತಿಯ ಚಿತಾಭಸ್ಮವನ್ನು ನೆನಪಿಗಾಗಿ ಅಥವಾ ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವದಲ್ಲಿ ಕೆಲವರು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಮನೆಯಲ್ಲಿ ಇರಿಸಿಕೊಂಡಿದ್ದ ಅಜ್ಜಿಯ ಚಿತಾಭಸ್ಮವನ್ನು ಪಾಸ್ತಾ ಜೊತೆಗೆ ಸೇರಿಸಿಕೊಂಡು ಸವಿದಿದ್ದಾಳೆ. ಅಂದಹಾಗೆಯೇ ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ?

ಇದು ಭಾರತದಲ್ಲಿ ನಡೆದ ಘಟನೆಯಲ್ಲ. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಮೂಲದ ಮಹಿಳೆ ಚೆಯೆನ್ನೆ ಬೆಳಗಿನ ಉಪಹಾರಕ್ಕೆ ಪಾಸ್ತಾ ಮಾಡಿದ್ದಾಳೆ. ಅದಕ್ಕೆ ತನ್ನ ಅಜ್ಜಿಯ ಚಿತಾಭಸ್ಮವನ್ನು ಸೇರಿಸಿದ್ದಾಳೆ. ಬಳಿಕ ಸವಿದಿದ್ದಾಳೆ. ಅಂದಹಾಗೆಯೇ ಚೆಯೆನ್ನೆ ಈ ಘಟನೆಯನ್ನು ರೆಡಿಯೋ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ ಪತ್ತೆ.. ಪೊಲೀಸರಿಗೆ ಕಾಡಿದೆ ಹೀಗೊಂದು ಅನುಮಾನ

ಚೆಯೆನ್ನೆ ಅಜ್ಜಿ ಕಳೆದ ವರ್ಷ ನಿಧನರಾದರು. ಅವರ ಚಿತಾಭಸ್ಮವನ್ನು ಜಾರ್​ನಲ್ಲಿ ಇರಿಸಲಾಗಿತ್ತು. ಮಹಿಳೆಯ ಕುಟುಂಬ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾಗ ಜಾರ್​ನಲ್ಲಿ ಇರಿಸಲಾಗಿದ್ದ ಚಿತಾಭಸ್ಮವನ್ನು ಪಾಸ್ತಾಗೆ ಸೇರಿಸಿ ಬೆಳಗ್ಗಿನ ಉಪಹಾರವಾಗಿ ನೀಡಿದಳು.

ಇನ್ನು ಮಹಿಳೆ ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ನಾನು ತಮಾಷೆಗಾಗಿ ಹೀಗೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment