newsfirstkannada.com

×

ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ.. ಟಿಕೆಟ್​ ತಪಾಸಣಾ ಸಿಬ್ಬಂದಿ ಸಹಾಯವನ್ನು ಶ್ಲಾಘಿಸಿದ ರೈಲ್ವೇ ಇಲಾಖೆ

Share :

Published April 3, 2024 at 12:42pm

Update April 3, 2024 at 12:43pm

    ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಕಾಣಿಸಿಕೊಂಡ ಹೆರಿಗೆ ನೋವು

    ಚಲಿಸುತ್ತಿದ್ದ ರೈಲಿನಲ್ಲಿ ಪುಟಾಣಿ ಕಂದನಿಗೆ ಜನ್ಮ ನೀಡಿದ ತಾಯಿ

    ಗರ್ಭಿಣಿ ಮಹಿಳೆಗೆ ದೇವರಂತೆ ಸಹಾಯ ಮಾಡಿದ ಪ್ರಯಾಣಿಕರು

ಗರ್ಭಿಣಿ ಮಹಿಳೆಯೊಬ್ಬಳು ಚಲಿಸುತ್ತಿದ್ದ ಪ್ರಯಾಗ್​​ರಾಜ್​ ದುರಂತೋ ಎಕ್ಸ್​ಪ್ರೆಸ್​​ ರೈಲಿನಲ್ಲಿ ಮಗುವಿನ ಜನ್ಮ ನೀಡಿದ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಂತೆ ಟಿಕೆಟ್​ ತಪಾಸಣೆ ಸಿಬ್ಬಂದಿ ಮತ್ತು ಪ್ರಯಾಣಿಕರು ಆಕೆಯ ಸಹಾಯಕ್ಕೆ ಬಂದಿದ್ದಾರೆ. ಹೆರಿಗೆ ಬಳಿಕ ತಾಯಿ ಮಗು ಆರೋಗ್ಯವಾಗಿರುವ ದೃಶ್ಯವನ್ನು ಸೆಂಟ್ರಲ್​ ರೈಲ್ವೇ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಟ್ವಿಟ್ಟರ್​ನಲ್ಲಿ, ‘ಎಲ್​ಟಿಟಿ- ಪ್ರಯಾಗ್​ರಾಜ್​ ದುರಂತೋ ಎಕ್ಸ್​ಪ್ರೆಸ್​​ನಲ್ಲಿ ಮಹಿಳೆಯೊಬ್ಬಳು ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಈಕೆಗೆ ಟಿಕೆಟ್​ ತಪಾಸಣಾ ಸಿಬ್ಬಂದಿ ಮತ್ತು ಪ್ರಯಾಣಿಕರು ಸಹಾಯ ಮಾಡಿದ್ದಾರೆ. ತ್ವರಿತ ಪ್ರತಿಕ್ರಿಯೆಯ ಜೊತೆಗೆ ಟಿಕೆಟ್ ತಪಾಸಣಾ​ ಸಿಬ್ಬಂದಿ ಶ್ರೀನಂದ್​​ ಬಿಹಾರಿ ಮೀನಾ, ಶ್ರೀ ಅಲೋಕ್​ ಶರ್ಮಾ, ಶ್ರೀ ರಾಜಕರಣ್​ ಯಾದವ್​, ಶ್ರೀ ಇಂದ್ರ ಕುಮಾರ್​ ಅವರ ನೆರವಿಗೆ ಬಂದರು. ಸದ್ಯ ತಾಯಿ ಮಗುವಿನ ಸುರಕ್ಷಿತವಾಗಿದ್ದಾರೆಂದು ಖಾತ್ರಿಪಡಿಸಿದರು’ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: VIDEO: ವೃದ್ಧ ತಾಯಿಗೆ ಅಟ್ಟಾಡಿಸಿ ಥಳಿಸಿದ ಮಗ.. ಮಗನ ಏಟಿಗೆ ಗೋಗರೆದು ಓಡಿದರು ಸಹಾಯಕ್ಕೆ ಬಾರದ ಜನ

ಇನ್ನು ಘಟನೆ ಬೆಳಕಿಗೆ ಬಂದಂತೆ ಅನೇಕರು ಕಾಮೆಂಟ್​, ರಿಟ್ವೀಟ್​ ಮಾಡಿದ್ದಾರೆ. ಪ್ರಯಾಣಿಕರು ಮತ್ತು ಟಿಕೆಟ್​ ಸಿಬ್ಬಂದಿಯ ಕೆಲವನ್ನು ಶ್ಲಾಘಿಸಿದ್ದಾರೆ. ‘ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಧನ್ಯವಾದಗಳು’ ಎಂದು ಒಬ್ಬರು ಕಾಮೆಂಟ್​ ಬರೆದರೆ ಮತ್ತೊಬ್ಬರು ‘ರೈಲ್ವೆ ತಂಡದಿಂದ ಇದೊಂದು ಮಾನವೀಯತೆಯ ಕೆಲಸ’ ಎಂದು ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ.. ಟಿಕೆಟ್​ ತಪಾಸಣಾ ಸಿಬ್ಬಂದಿ ಸಹಾಯವನ್ನು ಶ್ಲಾಘಿಸಿದ ರೈಲ್ವೇ ಇಲಾಖೆ

https://newsfirstlive.com/wp-content/uploads/2024/04/baby-Bith-In-train.jpg

Load More