newsfirstkannada.com

×

‘ಬೇರೆ ಆಸ್ಪತ್ರೆಗೆ ಹೋಗ್ತೀವಿ ಮಕ್ಕಳನ್ನು ಕೊಡಿ ಅಂದ್ರು ಕೊಡಲಿಲ್ಲ’- ಬಾಣಂತಿ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್!

Share :

Published May 23, 2024 at 8:53pm

    ಜನನಿ ವಿಷ್ಯದಲ್ಲಿ ಆಸ್ಪತ್ರೆಯವರು ಅಜಾಗರೂಕತೆಯಿಂದ ನಡೆದುಕೊಂಡ್ರಾ?

    ಕುಟುಂಬಸ್ಥರ ದೂರಿನ ಹಿನ್ನೆಲೆ 2 ವೈದ್ಯರನ್ನ ಒಳಗೊಂಡ ತಜ್ಞರ ಸಮಿತಿ ರಚನೆ

    ಮೃತದೇಹ ನೀಡದೆ ಸತಾಯಿಸಿದ್ದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣ ಆಯ್ತಾ?

ಜೀವ ಉಳಿಸಬೇಕಾದ ವೈದ್ಯರೇ ಜೀವ ಬಲಿ ಪಡೆದ್ರು ಅನ್ನೋದು ಆ ಕುಟುಂಬದವರ ಗಂಭೀರ ಆರೋಪ. ಹಣದ ಮುಂದೆ ಮನುಷ್ಯತ್ವ ಸತ್ತೋಯ್ತಾ ಅಂತಾ ಅವ್ರು ಪ್ರಶ್ನೆ ಮಾಡಿದ್ದಾರೆ. ಆದ್ರೆ, ತಲೆ ತಗ್ಗಿಸೋ ವಿಚಾರ ಏನಂದ್ರೆ, ಹಣಕ್ಕಾಗಿ ಮೃತ ದೇಹವನ್ನ ಕುಟುಂಬಕ್ಕೆ ಕೊಡದೇ ಸತಾಯಿಸಿದ್ದು ಯಾವ ಊರಿನ ನ್ಯಾಯ? ಹಾಗಾದ್ರೆ, ಮನುಷ್ಯತ್ವ ಸಮಾಧಿಯಾಗಿಬಿಟ್ಟಿದ್ಯಾ?

ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಕೇಶವ್ ಮತ್ತು ಜನನಿ ದಂಪತಿಗೆ ಅವಳಿ ಮಕ್ಕಳು ಅಂತ ಗೊತ್ತಾದ್ಮೇಲೆ ಇಡೀ ಕುಟುಂಬ ಸಂತಸಗೊಂಡಿತ್ತು. ಅವಳಿ ಮಕ್ಕಳು ಅನ್ನೋ ಕಾರಣಕ್ಕೆ ಜನನಿ ಬಗ್ಗೆ ಹೆಚ್ಚು ಕೇರ್ ತಗೊಂಡ್ರು. ತಾನೊಬ್ಬ ಡ್ರೈವರ್ ಆಗಿದ್ದರೂ ಪತ್ನಿ ಮಕ್ಕಳಿಗೆ ಯಾವ ತೊಂದರೆನೂ ಆಗಬಾರದು ಅನ್ನೋ ಕಾರಣಕ್ಕೆ ನಗರದ ಟಾಪ್ ಆಸ್ಪತ್ರೆಗಳಲ್ಲಿ ಒಂದಾಗಿದ್ದ ಕ್ಲೈಡ್ ​ನೈನ್​ ಮೊರೆ ಹೋಗ್ತಾರೆ.

ಸಾಧಾರಾಣ ಬಜೆಟ್​ನಲ್ಲಿ ಎಲ್ಲವೂ ಮುಗಿದು ಹೋಗುತ್ತೆ ಅಂತ ಹೇಳಿದ್ದರು

ರೆಗ್ಯುಲರ್​ ಆಗಿ ಇದೇ ಆಸ್ಪತ್ರೆಯಲ್ಲಿ ಚೆಕ್​ ಅಪ್ ಕೂಡ ಮಾಡಿಸ್ತಾರೆ. ಹೆರಿಗೆ ಮತ್ತು ಮಕ್ಕಳ ಹಾರೈಕೆಯಲ್ಲಿ ವಿಶೇಷ ಸವಲತ್ತುಗಳನ್ನ ಹೊಂದಿರುವ ಕ್ಲೌಡ್​ ನೈನ್​ನಲ್ಲೇ ಹೆರಿಗೆ ಮಾಡಿಸೋಕು ಅಂತಾನೂ ನಿರ್ಧರಿಸಿರ್ತಾರೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಕೂಡ ಸಾಧಾರಾಣ ಬಜೆಟ್​ನಲ್ಲಿ ಎಲ್ಲವೂ ಮುಗಿದು ಬಿಡುತ್ತೆ ಅಂತಾನೂ ಹೇಳಿದ್ದರು. ಅದೇ ವಿಶ್ವಾಸದಲ್ಲಿ ಕೇಶವ್ ತನ್ನ ಪತ್ನಿಯನ್ನ ಕ್ಲೌಡ್​ ನೈನ್​ಗೆ ದಾಖಲಿಸಿದ್ದರು. ಆದರೆ ಆ ವಿಶ್ವಾಸವನ್ನ ಆಸ್ಪತ್ರೆಯವರು ಉಳಿಸಿಕೊಂಡಿಲ್ಲ ಅನ್ನೋದು ಆರೋಪ.

ಮೇ 2ನೇ ತಾರೀಖು ಜನನಿಯನ್ನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಕ್ಲೌಡ್​ನೈನ್ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ಜನನಿಗೆ ಪ್ರಿ-ಮೆಚುರ್ಡ್ ಹೆರಿಗೆ ಮಾಡ್ಬೇಕು, ಇಲ್ಲ ಅಂದ್ರೆ ಕಷ್ಟ ಆಗುತ್ತೆ ಅಂತ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಅದರಂತೆ ಜನನಿಯ ಪತಿ ಕೇಶವ್ ಹಾಗೂ ಕುಟುಂಬಸ್ಥರು ಒಪ್ಪಿಗೆ ಕೊಟ್ಟು ಆಪರೇಷನ್ ಮಾಡಲಾಗಿದೆ. ನಿರೀಕ್ಷೆಯಂತೆ ಜನನಿಗೆ ಅವಳಿ ಮಕ್ಕಳಾಯ್ತು.. ಬಟ್, 7 ತಿಂಗಳಿಗೆ ಆಪರೇಷನ್ ಮಾಡಿದ್ದರಿಂದ ಜನನಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆ ಅಂತೇಳಿ ತಾಯಿ ಮತ್ತು ಮಕ್ಕಳನ್ನ ಅದೇ ಆಸ್ಪತ್ರೆಯಲ್ಲಿ ಇರಿಸಿಕೊಳ್ತಾರೆ. ಈ ನಡುವೆ ಜನನಿ ಆರೋಗ್ಯದಲ್ಲಿ ದಿಢೀರ್ ಅಂತ ಏರುಪೇರು ಆಗಿ ಆತಂಕ ಸೃಷ್ಟಿಯಾಗಿದೆ.

ಇಂದಿರಾಗಾಂಧಿ ಆಸ್ಪತ್ರೆಗೆ ಹೋಗಲು ಮುಂದಾಗಿದ್ರು

ಅವಳಿ ಮಕ್ಕಳಿಗೆ ಜನ್ಮ ಕೊಟ್ಟು ಸುಧಾರಿಸಿಕೊಳ್ತಿದ್ದ ಜನನಿ ಹಾಗೂ ಮಕ್ಕಳ ಆರೈಕೆ ಕಷ್ಟ ಆಗ್ತಿತ್ತು. ಯಾಕಂದ್ರೆ ಅದಾಗಲೇ ನಿರೀಕ್ಷೆಗೂ ಮೀರಿ ಹಣ ಖರ್ಚು ಆಗಿತ್ತು. ಹೀಗಾಗಿ ಪತ್ನಿ ಮತ್ತು ಮಕ್ಕಳನ್ನ ಬೇರೆ ಆಸ್ಪತ್ರೆಗೆ ಶಿಫ್ಟ್​ ಮಾಡುವ ನಿರ್ಧಾರಕ್ಕೆ ಕುಟುಂಬಸ್ಥರು ಬಂದು ಬಿಟ್ಟಿದ್ದರು. ಆಸ್ಪತ್ರೆಯವರು ಅದೇ ಸಲಹೆ ಕೊಟ್ಟಿದ್ದರಂತೆ. ಅದರಂತೆ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ವಿಚಾರಿಸೋಣ ಅಂತಾ ಕೇಶವ್​ ಮುಂದಾಗಿದ್ದಾರೆ. ಆದರೆ ಅಷ್ಟೊತ್ತಿಗೆ ಕ್ಲೌಡ್​ ನೈನ್ ಆಸ್ಪತ್ರೆಯವರು ಜನನಿಯನ್ನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್​ ಮಾಡೋ ಪ್ರಕ್ರಿಯೆ ಆರಂಭಿಸಿದ್ದರು ಅನ್ನೋದು ಕೇಶವ್ ಆರೋಪ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್​; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್​ನಲ್ಲಿ ಬಾಲಾಪರಾಧಿ ಏನೇನು ಮಾಡಬೇಕು ಗೊತ್ತಾ?

ಮೃತದೇಹ ಕೊಡುತ್ತೇವೆ ಎಂದು ಹೇಳಿದ್ದಾರೆ. ಬೆಳಗ್ಗೆಯಿಂದ ಕಾಯುತ್ತಿದ್ದೇವೆ. ಎಷ್ಟೊತ್ತು ಆಗುತ್ತೋ ಗೊತ್ತಿಲ್ಲ. ಈ ತರ ಪರಿಸ್ಥಿತಿ ಕನಸಲ್ಲೂ ಇನ್ನೊಬ್ಬರು ಕಾಣಕೂಡದು. ಇದರ ಬಗ್ಗೆ ಏನು ಗೊತ್ತಿಲ್ಲ. ಆಲ್​ರೆಡಿ ಎಲ್ಲವನ್ನು ಕಳೆದುಕೊಂಡಿದ್ದೇವೆ. ಇನ್ಮೇಲೆ ಕಳ್ಕೊಳ್ಳೋಕೆ ಏನು ಇಲ್ಲ. ಮೃತದೇಹ ಆದ್ರೂ ಕೊಟ್ಟರೇ ಸ್ವಲ್ಪ ಕಣ್ಣೀರು ಹಾಕಿ ಮುಂದಿನ ಕಾರ್ಯ ಮಾಡುತ್ತೇವೆ.

ಕೇಶವ್, ಮೃತಳ ತಾಯಿ ಗಂಡ

ಅದ್ಯಾವಾಗ ಆಸ್ಪತ್ರೆ ಕಡೆಯಿಂದ ಫೋನ್ ಮಾಡಿ ನಿಮ್ಮ ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಿದೆ, ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್​ ಮಾಡಡ್ಬೇಕು ಅಂತಾರೋ ಆಗ ಕೇಶವ್ ಓಡೋಡಿ ಬಂದಿದ್ದಾರೆ. ಬರ್ತಿದ್ದಂತೆ ಪತ್ನಿಯನ್ನ ಆಂಬುಲೆನ್ಸ್​ನಲ್ಲಿ ಶಿಫ್ಟ್​ ಮಾಡುತ್ತಿರುವುದು ಕಂಡು ಬಂದಿದೆ. ಗಾಬರಿ ಗಾಬರಿಯಿಂದಲೇ ಜನನಿಯನ್ನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಇಂಟರ್​ನಲ್ ಬ್ಲೀಡಿಂಗ್ ಆಗಿದೆ

ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಜನನಿ ಆರೋಗ್ಯವಾಗಿದ್ದಾರೆ ಅಂತ ಹೇಳಿದ್ದ ಕ್ಲೌಡ್​ನೈನ್​ ವೈದ್ಯರು, ಮತ್ತೊಂದು ಸಂದರ್ಭದಲ್ಲಿ ತೀವ್ರ ಹುಷಾರಿಲ್ಲ ಅಂತ ಹೇಳಿ ಬೇರೊಂದು ಆಸ್ಪತ್ರೆಗೆ ಶಿಫ್ಟ್​ ಮಾಡಿದ್ರಂತೆ. ಈ ನಡುವೆ ಇದ್ದಕ್ಕಿದಂತೆ ಜನನಿಯನ್ನ ಶಿಫ್ಟ್​ ಮಾಡಿದ್ದೇಕೆ? ದಿಢೀರ್ ಅಂತ ಏನಾಯ್ತು? ಅನ್ನೋದನ್ನ ಸಹ ಕುಟುಂದವರಿಗೆ ಹೇಳೇ ಇಲ್ಲ ಅನ್ನೋದು ಆರೋಪ. ಇನ್​ಫ್ಯಾಕ್ಟ್​ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ 3 ದಿನದ ನಂತರ ಜನನಿಗೆ ಆಪರೇಷನ್ ಮಾಡಿದ ಸ್ಥಳದಲ್ಲಿ ಇಂಟರ್​ನಲ್ ಬ್ಲೀಡಿಂಗ್ ಆಗಿದೆ, ಅದು ಆಕೆಗೆ ತೊಂದರೆ ಆಗಿದೆ ಅಂತ ತಿಳಿಸಿದ್ದರು ಅನ್ನೋದು ಕುಟುಂಬಸ್ಥರ ಆರೋಪ.

ಹಣ ಇದ್ದರೇ ಹೆಣನು ಹೊರಗೆ ಬರೋಕೆ ನಾನೇ ಉದಾಹರಣೆ ಆಗಿದ್ದೇನೆ. ದುಡ್ಡಿಗೆ, ಮನುಷ್ಯನಿಗೆ ಯಾವುದಕ್ಕೆ ಹೆಚ್ಚು ಬೆಲೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ. ಬಡವ ಅಳೋದೊಂದು ಬಿಟ್ಟು ಏನು ಮಾಡೋಕೆ ಆಗಲ್ಲ. ಹೆಂಡತಿಗೆ ತುಂಬಾ ಕ್ರಿಟಿಕಲ್ ಆಗಿದೆ ಎಂದು ಹೇಳಿ ಬೇಗ ಬರೋಕೆ ಹೇಳಿದ್ದಾರೆ. ಮಕ್ಕಳನ್ನ ಎನ್​ಐಸಿಯಲ್ಲಿ ಇಡೋಕೆ 30 ಸಾವಿರ ರೂಪಾಯಿಗಳು. 2 ಮಕ್ಕಳಿಗೆ ಸೇರಿ 60 ಸಾವಿರ ರೂಪಾಯಿ. ಅಡಿಷನಲ್​ ಚಾರ್ಜಸ್​ ಎಲ್ಲ ಜಾಸ್ತಿ ಇದೆ. ಒಂದು ದಿನಕ್ಕೆ 90 ಸಾವಿರ ರೂಪಾಯಿ ಎಂದರೆ 15 ರಿಂದ 20 ದಿನ ಆಯಿತು. ಈ ದುಡ್ಡನ್ನ ನಾನು ಎಲ್ಲಿ ಹೋಗಿ ತರಲಿ. ಅದಕ್ಕೆ ಇಂದಿರಾಗಾಂಧಿ ಆಸ್ಪೊತ್ರೆಗೆ ಹೋಗುವಾಗ ನನಗೆ ಕಾಲ್ ಮಾಡಿ ಕರೆದರು. ಬೇರೆ ಆಸ್ಪತ್ರೆಗೆ ದಾಖಲು ಮಾಡೋಕೆ ಬಿಡಲಿಲ್ಲ. ಒಂದು ಮಗುವನ್ನ ಕೊಡಿ ಎಂದರು ಕೊಟ್ಟಿಲ್ಲ.

ಕೇಶವ್, ಮೃತ ಜನನಿ ಗಂಪತಿ

ಕ್ಲೌಡ್​ ನೈನ್​ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸೋದೇ ಕಷ್ಟ ಅಂದ್ಕೊಂಡಿದ್ದ ಜನನಿ ಕುಟುಂಬದವರು ಒಂದೂವರೆ ಲಕ್ಷದಲ್ಲಿ ಎಲ್ಲವೂ ಅಂದುಕೊಂಡಂತೆ ಮುಗಿದು ಹೋಗುತ್ತೆ ಅಂದ್ಕೊಂಡಿದ್ದರು. ಆದರೆ, ಅಲ್ಲಿ ಅಂದ್ಕೊಂಡಂತೆ ಆಗ್ಲಿಲ್ಲ. ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದ ಜನನಿ ಅನಾರೋಗ್ಯಕ್ಕೆ ತುತ್ತಾದರು. ಆಪರೇಷನ್ ಮಾಡಿದ ನಂತರ ಜನನಿಯ ಆರೋಗ್ಯ ಹದೆಗೆಟ್ಟಿತ್ತು. ಹೆಚ್ಚಿನ ಚಿಕಿತ್ಸೆ ಕೊಡಿಸಬೇಕಾಯ್ತು. ಈ ಕಡೆ ತಾಯಿಯನ್ನ ಉಳಿಸಿಕೊಳ್ಳಲೇಬೇಕು ಅಂತ ಸಾಲ ಮಾಡ್ಕೊಂಡು ಬಂದು ಆಸ್ಪತ್ರೆಗೆ ದುಡ್ಡು ಕಟ್ಟಿದ್ರಂತೆ ಕುಟುಂಬಸ್ಥರು.

ಟ್ರೀಟ್​ಮೆಂಟ್​, ಮೆಡಿಸನ್ ಅಂತೇಳಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡರು

ಪ್ರಿ-ಮೆರ್ಚುರ್ಡ್ ಹೆರಿಗೆ ಅಂತ ಹೇಳಿ ಆಪರೇಷನ್ ಮಾಡಿದ್ದ ಕ್ಲೌಡ್​ ನೈನ್ ವೈದ್ಯರು, ತಾಯಿಗೆ ಇಂಟರ್ನೆಲ್ ಬ್ಲೀಡಿಂಗ್ ಆಗಿ ಸೀರಿಯಸ್​ ಆಗಿದ್ದರ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲವಂತೆ. ಟ್ರೀಟ್​ಮೆಂಟ್​, ಮೆಡಿಸನ್ ಅಂತೇಳಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡರಂತೆ. ಸುಮಾರು 29 ಲಕ್ಷದವರೆಗೂ ಕ್ಲೌಡ್​ ನೈನ್​ನಲ್ಲಿ ಹಣ ಖರ್ಚು ಮಾಡಿದ್ದರಂತೆ. ಅಷ್ಟು ಹಣ ಕಟ್ಟಿಸಿಕೊಂಡ ನಂತರವೂ ಕ್ಲೌಡ್​ ನೈನ್ ಅವ್ರು ಜನನಿಯನ್ನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್​ ಮಾಡಿ ಸುಮ್ಮನಾಗಿಟ್ಟರು ಅನ್ನೋದು ಕುಟುಂಬಸ್ಥರು ಅಳಲು.

ಇದನ್ನೂ ಓದಿ: ಉರಿಯೋ ಬೆಂಕಿಗೆ ತುಪ್ಪ! ಸೋತ ಮೇಲೆ ಆರ್​​ಸಿಬಿ​ಗೆ ಬೇಕಂತಲೇ ಉರಿಸುತ್ತಿರೋ ಚೆನ್ನೈ ಫ್ಯಾನ್ಸ್​​!

ಮತ್ತೊಂದೆಡೆ ಜನನಿಯನ್ನ ದಾಖಲಿಸಿಕೊಂಡ ಮಣಿಪಾಲ್ ಆಸ್ಪತ್ರೆಯವರು ಸಹ ಮಾನವೀಯತೆ ಮರೆತು ಕಟುವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಕ್ಲೌಡ್​ ನೈನ್ ಆಸ್ಪತ್ರೆಯಿಂದ ಮಣಿಪಾಲ್​ಗೆ ಬಂದಮೇಲೆ ಸುಮಾರು 20 ದಿನಗಳ ವರೆಗೂ ಜನನಿಗೆ ಚಿಕಿತ್ಸೆ ಮಾಡಿದ್ದಾರಂತೆ. ಸುಮಾರು 20 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡಿದ್ದ ಜನನಿ 22ನೇ ತಾರೀಖು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರೇ ಕಾರಣ ಎಂದು ದೂಷಿಸಲಾಗ್ತಿದೆ.

ಹಣದ ಮುಂದೆ ಮೌನವಾಯ್ತಾ ಮಾನವೀಯತೆ?

ಕಳೆದ 20 ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನನಿ, ಚಿಕಿತ್ಸೆ ಫಲಕಾರಿಯಾಗದೇ ಮೇ 22ನೇ ತಾರೀಖು ಕೊನೆಯುಸಿರೆಳೆದಿದ್ದಾರೆ. ಆದರೆ ಮಣಿಪಾಲ್ ಆಸ್ಪತ್ರೆಯವರು ಕುಟುಂಬಸ್ಥರಿಗೆ ಜನನಿಯ ಮೃತದೇಹ ಕೊಡದೇ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. 10 ಲಕ್ಷ ಹಣ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಅಂತ ಕಠೋರವಾಗಿ ನಡೆದುಕೊಂಡಿದ್ದಾರಂತೆ. ಬೆಳಗ್ಗೆಯಿಂದ ಆಸ್ಪತ್ರೆಯ ಮುಂದೆ ಕಾದರು ಶವ ನೀಡದೇ ಸತಾಯಿಸಿರೋದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

3 ದಿನ ಪ್ಯಾಕೇಜ್ ಅಂತ ಕ್ಲೌಡ್​ ನೈನ್​ ಸೇರಿದ್ದರೇ 30 ಲಕ್ಷದವರೆಗೂ ಖರ್ಚು ಮಾಡಿಸಿದ್ರು. ಈಗ ನೋಡಿದ್ರೆ ಮಣಿಪಾಲ್ ಆಸ್ಪತ್ರೆಯವರು ಸಾವನ್ನಪ್ಪಿರುವ ಜನನಿಯ ಶವ ಕೊಡಲ್ಲ ಅಂತಿದ್ದಾರೆ ಎಂಬ ಆಕ್ರೋಶಕ್ಕೆ ಬಿದ್ದಿದ್ದರು. ಜನನಿ ವಿಷ್ಯದಲ್ಲಿ ಕ್ಲೌಡ್​ ನೈನ್ ಆಸ್ಪತ್ರೆಯವರು ಅಜಾಗರೂಕತೆಯಿಂದ ನಡೆದುಕೊಂಡಿದ್ದಾರೆ, ಆಪರೇಷನ್ ಕರೆಕ್ಟ್​ ಆಗಿಲ್ಲ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಅದರಿಂದಲೇ ನಮ್ಮ ಮಗಳಿಗೆ ಹೀಗಾಯ್ತು ಅಂತ ದೂಷಿಸಿದವರು, ನಮಗೆ ಹೇಳದೇ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದರು, ನಮ್ ಹತ್ರಾ ಇದ್ದ ದುಡ್ಡನ್ನೆಲ್ಲ ಅವರಿಗೆ ಕೊಟ್ಟಿದ್ದೇವೆ, ನೀವು ಅವರನ್ನೇ ಕೇಳಿ ಅಂತ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: 3 ಕಿಲೋ ಮೀಟರ್​ ದೂರ ಕೇಳಿಸಿದ ಸ್ಫೋಟದ ಸದ್ದು.. 6 ಮಂದಿ ಸಾವು; ಆಗಿದ್ದೇನು?

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್​.. ಆರೋಗ್ಯ ಅಧಿಕಾರಿ ಕ್ಲಾಸ್!

ಈ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ನ್ಯೂಸ್​ಫಸ್ಟ್​ ಕನ್ನಡ ವಾಹಿನಿ ಕುಟುಂಬಸ್ಥರ ಸಹಾಯಕ್ಕೆ ಧಾವಿಸಿತ್ತು. ಸಾವಿನಲ್ಲೂ ವ್ಯಾಪಾರ ಮಾಡ್ತಿದ್ದ ಆಸ್ಪತ್ರೆಯ ವಿರುದ್ಧ ಸತತವಾಗಿ ಸುದ್ದಿ ಬಿತ್ತರಿಸಿತ್ತು. ಮಾನವೀಯತೆ ಮರೆತು ವರ್ತಿಸುತ್ತಿದ್ದ ಆಸ್ಪತ್ರೆಯ ಬಗ್ಗೆ ಆರೋಗ್ಯ ಇಲಾಖೆಗೆ ಗಮನಕ್ಕೆ ತಂದಿತ್ತು. ಅದ್ಯಾವಾಗ ನ್ಯೂಸ್​ಫಸ್ಟ್​ನಲ್ಲಿ ಈ ಸುದ್ದಿ ಪ್ರಸಾರವಾಯ್ತೋ, ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಯಿಂದ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿಗೆ ತರಾಟೆಗೆ ತೆಗೆದುಕೊಂಡಿದೆ. ಹಣದ ಕಾರಣಕ್ಕೆ ಮೃತದೇಹ ಪೆಂಡಿಂಗ್ ಇಡುವಂಗಿಲ್ಲ, ಮೊದಲು ಮೃತದೇಹ ಹಸ್ತಾಂತರ ಮಾಡಿ, ಆಮೇಲೆ ಹಣದ ವ್ಯವಹಾರ ಮಾಡಿ ಎಂದು ಸೂಚಿಸಿದೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?

ಆರೋಗ್ಯ ಇಲಾಖೆಯ ಅಧಿಕಾರಿಯ ಸೂಚನೆಯ ನಂತರ ಮಣಿಪಾಲ್ ಆಸ್ಪತ್ರೆಯವರು ಜನನಿಯ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಲೌಲ್ಡ್ ನೈನ್ ಆಸ್ಪತ್ರೆಯ ವಿರುದ್ದ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ಸಹ ನೀಡಲಾಗಿದೆ. ಮೃತ ಜನನಿ ಪತಿ ಕೇಶವ್ ಹಾಗೂ ಕುಟುಂಬಸ್ಥರಿಂದ ದೂರು ನೀಡಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಅವಳಿ ಮಕ್ಕಳ ತಾಯಿ ನಿಧನರಾದರು ಎಂದು ಹೇಳಿದೆ. ಕುಟುಂಬಸ್ಥರ ದೂರಿನ ಹಿನ್ನೆಲೆ 2 ವೈದ್ಯರೊನ್ನೊಳಗೊಂಡ ತಜ್ಞರ ಸಮಿತಿ ರಚನೆ ಮಾಡಿದ್ದು, ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದೆ. ಕ್ರಮ ಏನೇ ಆಗ್ಲಿ, ಅವಳಿ ಮಕ್ಕಳ ತಾಯಿ ಪ್ರಾಣ ವಾಪಸ್ ಬರಲ್ಲ. ಇನ್ನು ಹುಟ್ಟುತ್ತಲೇ ಅಮ್ಮನನ್ನ ಕಳೆದುಕೊಂಡ ಆ ಮಕ್ಕಳು, ಯಾರನ್ನ ಅಮ್ಮ ಅಂತಾ ಕರೀತಾರೆ ಅಲ್ವೇ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬೇರೆ ಆಸ್ಪತ್ರೆಗೆ ಹೋಗ್ತೀವಿ ಮಕ್ಕಳನ್ನು ಕೊಡಿ ಅಂದ್ರು ಕೊಡಲಿಲ್ಲ’- ಬಾಣಂತಿ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್!

https://newsfirstlive.com/wp-content/uploads/2024/05/BNG_WOMAN_DIED_3.jpg

Load More