newsfirstkannada.com

ರಸ್ತೆ ಅಪಘಾತದಲ್ಲಿ ಮಹಿಳೆ ಸಾವು; ಕುಟುಂಬಸ್ಥರ ಆಕ್ರಂದನ ಕೇಳಿ ಕಾರು ನಿಲ್ಲಿಸಿದ ಡಾ.ಜಿ. ಪರಮೇಶ್ವರ್

Share :

Published March 23, 2024 at 7:20pm

    ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ

    ರಸ್ತೆ ಬದಿ ನಿಂತಿದ್ದ ಜನಸಂದಣಿ ನೋಡಿ ಕಾರು ನಿಲ್ಲಿಸಿದ ಹೋಂ‌ ಮಿನಿಸ್ಟರ್

    ಮೃತ ಮಹಿಳೆ ಕುಟುಂಬಸ್ಥರ ಬಳಿ ತೆರಳಿ ಅವರ ನೋವಿಗೆ ಸ್ಪಂದಿಸಿದ ಜಿ. ಪರಮೇಶ್ವರ್

ತುಮಕೂರು: ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಕೇಳಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹೋಂ‌ ಮಿನಿಸ್ಟರ್ ಡಾ.ಜಿ. ಪರಮೇಶ್ವರ್ ಕಾರು ನಿಲ್ಲಿಸಿ ಘಟನೆಗೆ ಸ್ಪಂಧಿಸಿದ್ದಾರೆ.

ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿ ಈ ಘಟನೆ‌‌ ಬೆಳಕಿಗೆ ಬಂದಿದೆ. ಚುನಾವಣಾ ಪ್ರಚಾರ ಸಭೆ ಮುಗಿಸಿ ತುಮಕೂರಿಗೆ ವಾಪಸ್ ಆಗುತ್ತಿದ್ದಾಗ ಪರಮೇಶ್ವರ್​ ಅವರು ಮೃತ ಮಹಿಳೆ ಕುಟುಂಬಸ್ಥರ ಬಳಿ ತೆರಳಿ ಅವರ ನೋವಿಗೆ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋದಲ್ಲಿ ಮತ್ತೆ ಯುವತಿಯರ ಹುಚ್ಚಾಟ.. ಇವರ ವಯ್ಯಾರಕ್ಕೆ ನೆತ್ತಿಗೇರಿತು ಪ್ರಯಾಣಿಕರ ಕೋಪ

ಗೃಹ ಸಚಿವ ಪರಮೇಶ್ವರ್ ಜನಸಂದಣಿ ನೋಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಕೂಡಲೇ ತುರುವೇಕೆರೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಅವರನ್ನ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುವಂತೆ ಡಾ. ಜಿ ಪರಮೇಶ್ವರ್ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಗೃಹ ಸಚಿವರಿಗೆ ಶಾಸಕ ಎಸ್.ಆರ್.ಶ್ರೀನಿವಾಸ್, ಪಾವಗಡ ಶಾಸಕ ವೆಂಕಟೇಶ್ ಸೇರಿದಂತೆ ಹಲವು ನಾಯಕರು ಸಾಥ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಅಪಘಾತದಲ್ಲಿ ಮಹಿಳೆ ಸಾವು; ಕುಟುಂಬಸ್ಥರ ಆಕ್ರಂದನ ಕೇಳಿ ಕಾರು ನಿಲ್ಲಿಸಿದ ಡಾ.ಜಿ. ಪರಮೇಶ್ವರ್

https://newsfirstlive.com/wp-content/uploads/2024/03/G-parameshwar-1.jpg

Load More