ಸಿಕ್ಕ ಸಿಕ್ಕ ವಾಹನಗಳ ಮೇಲೆ ಮಳೆ ನೀರು ಎರಚಿದ ಯುವಕರು
ಹೊಳೆಯಂತೆ ಹರಿಯುತ್ತಿರುವ ನೀರಿನಲ್ಲಿ ಯುವಕರ ಪುಂಡಾಟ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ
ಲಕ್ನೋ: ಮುಂಗಾರು ಮಳೆ ದಕ್ಷಿಣದ ರಾಜ್ಯಗಳನ್ನ ಹಿಂಡಿ ಹಿಪ್ಪೆ ಮಾಡಿದ್ರೆ, ಅತ್ತ ಉತ್ತರ ಭಾರತದ ರಾಜ್ಯಗಳು ಕೂಡ ವರುಣಾರ್ಭಟಕ್ಕೆ ನಲುಗಿವೆ. ದೆಹಲಿ, ಉತ್ತರ ಪ್ರದೇಶ, ದೇವಭೂಮಿ ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳು ಮಳೆಯಿಂದ ತತ್ತರಿಸಿವೆ. ಅನಾಹುತಗಳ ಸರಮಾಲೆಯೇ ಸೃಷ್ಟಿಯಾಗಿದೆ. ದಾಖಲೆಯ ಮಳೆಗೆ ರಾಷ್ಟ್ರ ರಾಜಧಾನಿ ನವದೆಹಲಿ ತೊಯ್ದು ತೊಪ್ಪೆಯಾಗಿದೆ.
ಇದನ್ನೂ ಓದಿ: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ; ಸರ್ಪದಂತೆ ಗುಹೆಯಲ್ಲಿ ಪತ್ತೆ; ನಾಗಿಣಿ ನೋಡಿ ಬೆಚ್ಚಿ ಬಿದ್ದ ಜನ!
ಬಿಟ್ಟೂ ಬಿಡದೇ ಕಾಡುತ್ತಿರುವ ವರುಣ ಅವಾಂತರಗಳ ಮೂಟೆ ಕಟ್ಟಿದ್ದಾನೆ. ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತವಾಗಿದೆ. ಹೊಳೆಯಂತೆ ಹರಿಯುತ್ತಿರುವ ನೀರಿನಲ್ಲಿ ಕೆಲ ವಾಹನಗಳು ಮುಳುಗಿವೆ. ದಿಲ್ಲಿಯ ಹಲವೆಡೆ ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಕೂಲಿಕಾರ್ಮಿಕರು ಮಳೆಯಿಂದ ನಲುಗಿದ್ದಾರೆ.
This is Lucknow, Uttar Pradesh.
A woman is groped in broad daylight as she passes by on the pillion seat of a motorbike.
Miscreants are so unafraid that they don’t even have even a second thought before touching a woman.
RT this by tagging @Uppolice till these haramis are… pic.twitter.com/pXDOOZRMwa
— Roshan Rai (@RoshanKrRaii) July 31, 2024
ಭಾರೀ ಮಳೆಯಿಂದ ಉತ್ತರ ಪ್ರದೇಶ ಲಕ್ನೋ, ನೊಯ್ಡಾ ಸೇರಿದಂತೆ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಇದೇ ಮಳೆಯ ನೀರಿನಲ್ಲಿ ಯುವಕ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಹೋಟೆಲ್ ತಾಜ್ ಮತ್ತು ಯುಪಿ ದರ್ಶನ್ ಪಾರ್ಕ್ ಮುಂಭಾಗದಲ್ಲಿ 20 ರಿಂದ 30 ಯುವಕರು ಮಳೆ ನೀರಿನಲ್ಲಿ ಆಟವಾಡುತ್ತಿದ್ದರು.
ಇದೇ ವೇಳೆ ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನಗಳ ಮೇಲೆ ಮಳೆ ನೀರನ್ನು ಎರಚಿ ಪುಂಡಾಟ ಮೆರೆಯುತ್ತಿದ್ದರು. ಆಗ ಕೆಲ ಸಮಯದ ಬಳಿಕ ಬೈಕ್ ಮೇಲೆ ಯುವಕ ಹಾಗೂ ಯುವತಿ ಬರುತ್ತಾ ಇರುತ್ತಾರೆ. ಆಗ ಬೈಕ್ ಹಾಗೂ ಸವಾರರ ಮೇಲೆ ಯುವಕರು ನೀರು ಹಾಕುತ್ತಾರೆ. ಬಳಿಕ ಬೈಕ್ ಮೇಲೆ ಕುಳಿತಯಕೊಂಡಿದ್ದ ಇಬ್ಬರನ್ನು ಬಲವಂತವಾಗಿ ಕೆಳಗೆ ತಳ್ಳುತ್ತಾರೆ. ಆದರೆ ಇದರ ಮಧ್ಯೆ ಅಲ್ಲೇ ನಿಂತುಕೊಂಡಿದ್ದ ಯುವಕನೊಬ್ಬ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಎಲ್ಲ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದರಲ್ಲೂ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಯುವಕನಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ