/newsfirstlive-kannada/media/post_attachments/wp-content/uploads/2024/07/rape.jpg)
ಸಾಲ ಮಾಡೋದು ಸಹಜ. ಅನಿವಾರ್ಯವಾದಾಗ ಎಂಥವರು ಕೂಡ ಸಾಲ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಮಾಡಿದ ಸಾಲವನ್ನು ತೀರಿಸಲು ತುಮಕೂರು ಮೂಲದ ಸಹೋದರಿಯ ಮಗಳನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು. 35 ಸಾವಿರ ರೂಪಾಯಿ ಸಾಲ ಮಾಡಿ ಅದನ್ನು ತೀರಿಸಲು ಚಿಕ್ಕಮ್ಮ ತನ್ನ ಸಹೋದರಿಯ 11 ವರ್ಷದ ಮಗಳನ್ನೇ ಮಾರಾಟ ಮಾಡಿದ್ದಾಳೆ. ಕೊನೆಗೆ ತುಮಕೂರು ಪೊಲೀಸರು ಬಾಲಕಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ತುಮಕೂರು ಮೂಲದ ಬಾಲಕಿಯನ್ನು ಆಕೆಯ ತಾಯಿ ರಜೆಯ ವೇಳೆ ಆಂಧ್ರಪ್ರದೇಶದ ಹಿಂದೂಪುರದಲ್ಲಿರುವ ಚಿಕ್ಕಮ್ಮನ ಮನೆಗೆ ಕಳುಹಿಸಿದ್ದಳು. ಆದರೆ ಚಿಕ್ಕಮ್ಮ ತಾನು ಮಾಡಿದ್ದ 35 ಸಾವಿರ ರೂಪಾಯಿ ಸಾಲವನ್ನು ತೀರಿಸಲು ಸಹೋದರಿ ಮಗಳನ್ನು ಮಾರಾಟ ಮಾಡಿದ್ದಾಳೆ.
ಇದನ್ನೂ ಓದಿ: INDvsZIM: ಜೋಡಿಯಾಟದಲ್ಲಿ ದಾಖಲೆ! ಯಶಸ್ವಿ ಮತ್ತು ಗಿಲ್ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?
ಬಾಲಕಿಯನ್ನು ಶ್ರೀರಾಮುಲು ಎಂಬ ಜಮೀನುದಾರನಿಗೆ ಮಾರಾಟ ಮಾಡಿದ್ದಾಳೆ. 11 ವರ್ಷದ ಬಾಲಕಿ ಬಳಿ ಬಾತುಕೋಳಿ ಸಾಕುವಂತೆ ಆತ ಹೇಳಿದ್ದಾನೆ. ಜೂನ್​ ತಿಂಗಳಲ್ಲಿ ತಾಯಿ ತನ್ನ ಮಗಳನ್ನು ನೋಡಲು ಸಹೋದರಿ ಮನೆಗೆ ಹೋದಾಗ ಅಲ್ಲಿ ಮಗಳಿರಲಿಲ್ಲ. ಜಮೀನುದಾರನ ಬಳಿ ತನ್ನ ಮಗಳನ್ನು ಕಂಡ ತಾಯಿ ಶಾಕ್​ ಆಗಿದ್ದಾರೆ.
ಕೊನೆಗೆ ತನ್ನ ಮಗಳನ್ನು ತನಗೆ ಕೊಡುವಂತೆ ತಾಯಿ ಆತನ ಬಳಿ ಕೇಳಿಕೊಂಡಿದ್ದಾಳೆ. ಆದರೆ ಶ್ರೀರಾಮುಲು ತನ್ನ ಸಾಲ ವಾಪಸ್ಸು ನೀಡಿದರೆ ಬಾಲಕಿಯನ್ನು ಕೊಡುವುದಾಗಿ ಹೇಳಿದ್ದಾನೆ. ಕೊನೆಗೆ ದಿಕ್ಕು ಕಾಣದ ತಾಯಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ. ತೇಜಾವತಿಗೆ ದೂರು ನೀಡಿದ್ದಾರೆ.
ತಾಯಿಯ ದೂರು ಆಲಿಸಿದ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಪ್ರವೃತ್ತರಾಗಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಬಾಲಕಿ ತನ್ನ ತುಮಕೂರಿನ ಮನೆ ಸೇರಿಕೊಂಡಿದ್ದಾಳೆ.
ಇದನ್ನೂ ಓದಿ: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ ಬರಲಿದೆ ಈ ವೈಶಿಷ್ಟ್ಯ.. ಏನದು?
ಇನ್ನು ಘಟನೆ ಸಂಬಂಧ ಬಾಲಕಿಯ ಚಿಕ್ಕಮ್ಮ ಸುಜಾತ, ಆಕೆಯ ಪತಿ ಶಂಕರ್​, ಮನೆ ಮಾಲೀಕ ಶ್ರೀರಾಮುಲು ವಿರುದ್ಧ ಕೇಸ್​ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us