newsfirstkannada.com

ಸ್ನೇಹಿತನ ಹೆಂಡತಿಯನ್ನೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಹಂತಕ; ಕಾರಣ ಮಾತ್ರ ನಿಗೂಢ

Share :

Published May 16, 2024 at 6:06am

  ಸ್ನೇಹಿತನನ್ನು ಮೆಡಿಕಲ್​ಗೆ ಕಳುಹಿಸಿ ಮಹಿಳೆಗೆ ಚಾಕು ಇರಿದ ಕೇಡಿ

  ಪೊಲೀಸ್ ಸಿಬ್ಬಂದಿ, ಜನರ ಮೇಲೆ ದಾಳಿ ಮಾಡಿದ ಆರೋಪಿ

  ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪರಿಚಿತ

ಕೋಲ್ಕತ್ತಾ: ಹಾಡಹಗಲೇ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಹೌರಾದ ನಿವಾಸಿ ರಿವು ಬಿಸ್ವಾ ಸಾವನ್ನಪ್ಪಿದ ಮಹಿಳೆ. ಈಕೆಯನ್ನು ಕೊಲೆ ಮಾಡಿದ ವ್ಯಕ್ತಿ ಮುಂಗೇಶ್ ಯಾದವ್ ಎಂದು ಗುರುತಿಸಲಾಗಿದೆ. ಚಾಕು ಇರಿದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಯು ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ ಮೇಲೆ ಚಾಕುವನ್ನು ಕಸಿದುಕೊಳ್ಳಲು ರೈಲ್ವೆ ಪೊಲೀಸರು ಹಾಗೂ ಜನರು ಮುಂದಾಗಿದ್ದಾರೆ. ಆದರೆ ಈ ವೇಳೆ ವ್ಯಕ್ತಿಯು ಪೊಲೀಸ್ ಸಿಬ್ಬಂದಿ ಹಾಗೂ ಜನರ ಮೇಲೆ ದಾಳಿ ಮಾಡಿದ್ದಾನೆ. ಕೊನೆಗೆ ಪೊಲೀಸರು ವ್ಯಕ್ತಿಯಿಂದ ಚಾಕು ಕಸಿದುಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?

ಮಹಿಳೆ ಹಾಗೂ ಈಕೆಯ ಪತಿ ಪಿಂಟು ಬಿಸ್ವಾಸ್​ಗೆ ಕೆಲವು ವರ್ಷಗಳಿಂದ ಆರೋಪಿ ಯಾದವ್ ಪರಿಚಿತನಾಗಿದ್ದನು. ಅಲ್ಲದೇ ಮುಂಬೈಯಲ್ಲಿ ಮಹಿಳೆಯ ಪತಿ ಮತ್ತು ಹಂತಕ ಇಬ್ಬರು ಜೊತೆಯಲ್ಲೇ ಕೆಲಸ ಮಾಡುತ್ತಿದ್ದು ಗೆಳೆಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಲೆಂದು ಹೌರಾದ ರೈಲ್ವೆ ನಿಲ್ದಾಣಕ್ಕೆ ಮೂವರು ಜೊತೆಯಲ್ಲಿ ಆಗಮಿಸಿದ್ದರು. ಈ ವೇಳೆ ಆರೋಪಿ ಮಾತ್ರೆಗಳನ್ನ ತರುವಂತೆ ಆಕೆಯ ಗಂಡನಿಗೆ ಹೇಳಿದ್ದಾನೆ. ಅದರಂತೆ ಮೆಡಿಕಲ್​ಗೆ ಗಂಡ ಹೋಗುತ್ತಿದ್ದಂತೆ ಇತ್ತ ತನ್ನ ಬ್ಯಾಗ್​ನಲ್ಲಿದ್ದ ಚಾಕು ತೆಗೆದುಕೊಂಡು ಮಹಿಳೆಯ ಹೊಟ್ಟೆಗೆ ಭೀಕರವಾಗಿ ಚುಚ್ಚಿ.. ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕೊಲೆಯ ಆರೋಪಿಯನ್ನು ಹೌರಾ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತನ ಹೆಂಡತಿಯನ್ನೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಹಂತಕ; ಕಾರಣ ಮಾತ್ರ ನಿಗೂಢ

https://newsfirstlive.com/wp-content/uploads/2023/07/Crime-News_1.jpg

Load More