ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ ಪತ್ತೆ.. ಪೊಲೀಸರಿಗೆ ಕಾಡಿದೆ ಹೀಗೊಂದು ಅನುಮಾನ

author-image
AS Harshith
Updated On
ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ ಪತ್ತೆ.. ಪೊಲೀಸರಿಗೆ ಕಾಡಿದೆ ಹೀಗೊಂದು ಅನುಮಾನ
Advertisment
  • ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ
  • ಯಶವಂತಪುರದಿಂದ ಬಾಗಲಕೋಟೆಗೆ ಬಂದಿದ್ದ ರೈಲು
  • ಜನರಿಲ್ಲದ ಭೋಗಿಯಲ್ಲಿ ಮಹಿಳೆಯ ಶವ ಪತ್ತೆ. ಯಾರು ಈಕೆ?

ಬಾಗಲಕೋಟೆ: ರೈಲಿನಲ್ಲಿ ಅ‌ನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಯಶವಂತಪುರದಿಂದ ಬಾಗಲಕೋಟೆಗೆ ಬಂದಿದ್ದ ರೈಲಿನಲ್ಲಿ ಮಹಿಳೆಯ ಶವ ಸಿಕ್ಕಿದೆ. ರೈಲು ವಿಜಯಪುರದಿಂದ ಬಾಗಲಕೋಟೆಗೆ ಆಗಮಿಸಿದ ವೇಳೆ ಜನರಿಲ್ಲದ ಭೋಗಿಯಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ: VIDEO: ನೂರಾರು ಬಲಿ ಪಡೆದ ಬಾಲಸೋರ್ ಕರಾಳ ದಿನವೇ ಮತ್ತೊಂದು ರೈಲು ಅವಘಡ; ಆಗಿದ್ದೇನು?

42 ವರ್ಷ ವಯಸ್ಸಿನ ಮಹಿಳೆಯ ಶವ ಎಂದು ಅಂದಾಜಿಸಲಾಗಿದೆ. ಘಟನೆ ಬೆನ್ನಲ್ಲೆ ರೈಲ್ವೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈಲ್ವೆ ಪೋಲಿಸರು ಮಹಿಳೆ ಶವ ಗುರುತು ಹಚ್ಚಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment