newsfirstkannada.com

×

Work Stress; ಯುವಕರನ್ನು ಕಾಡುತ್ತಿರುವ ಪರಿ ಎಂತಹದು? ಅನ್ನಾ ಸೆಬಾಸ್ಟೈನ್​ಳ ಸಾವು ಕಲಿಸಿದ ಪಾಠವೇನು?

Share :

Published September 21, 2024 at 8:14pm

Update September 22, 2024 at 6:47am

    ಕೆಲಸದ ಒತ್ತಡದಿಂದ ಯುವಜನತೆ ಅನುಭವಿಸುತ್ತಿರುವ ನೋವು ಎಂತಹದು

    ಭಾರತದಲ್ಲಿ ಕೆಲಸದ ಒತ್ತಡಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ?

    ಅನ್ನಾಳ ಅಕಾಲಿಕ ಮರಣ ಹುಟ್ಟು ಹಾಕಿದ ಚರ್ಚೆಯಲ್ಲಿ ಬಯಲಾಗಿದೆ ಅಂಕಿಅಂಶ

26 ವರ್ಷದ ಚಾರ್ಟೆಡ್ ಅಕೌಂಟೆಂಟ್​ ಅನ್ನಾ ಸೆಬಾಸ್ಟೈನ್​ ಪೆರಿಯಿಲ್​ರ ದುರಂತ ಅಂತ್ಯ ಈಗ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ನಾವು ಮಾಡುತ್ತಿರುವ ವೃತ್ತಿಯಲ್ಲಿ ನಾವೆಷ್ಟು ಮಾನಸಿಕವಾಗಿ ದೈಹಿಕವಾಗಿ ನೆಮ್ಮದಿಯಿಂದ ಇದ್ದೇವೆ ಅನ್ನುವದನ್ನ ಓರೆಗೆ ಹಚ್ಚಿ ನೋಡಬೇಕಾದ ಸ್ಥಿತಿ ಈಗ ಉದ್ಭವವಾಗಿದೆ.
ಅರ್ನ್ಸ್ಟ್ ಅಂಡ್ ಯಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅನ್ನಾಳ ದುರಂತ ಅಂತ್ಯದಿಂದಾಗಿ ಅವರ ಕುಟುಂಬ, ಅತಿಯಾದ ಕೆಲಸದ ಒತ್ತಡವೇ ಆಕೆಯ ಜೀವಕ್ಕೆ ಮುಳುವಾಯ್ತು ಎಂದು ದೂರಿದ್ದಾರೆ. 26 ವರ್ಷದ ಯುವತಿಯ ಸಾವು ಈಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇದೇ ವೇಳೆ ಒಂದು ಆತಂಕಕಾರಿ ಮಾಹಿತಿಯೂ ಕೂಡ ಆಚೆ ಬಂದಿದೆ.

ಭಾರತದಲ್ಲಿ ಹೆಚ್ಚುತ್ತಿದೆ ತೀವ್ರ ಕೆಲಸದ ಒತ್ತಡ
ಚಾರ್ಟೆಡ್ ಅಕೌಂಟಂಟ್​ ಅನ್ನಾ ಸೆಬಾಸ್ಟೈನ್ ಒಬ್ಬರೇ ಅಲ್ಲ, ಪ್ರತಿ ವೃತ್ತಿಯಲ್ಲೂ ಭಾರತೀಯ ಯುವಕರು ಹೊರಲಾರದಷ್ಟು ಒತ್ತಡದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಅನ್ನಾ ಅವರ ಸಾವು ನಿಂತಿದೆ. ದೇಶದಲ್ಲಿ ನಾಲ್ಕು ಜನರಲ್ಲಿ ಒಬ್ಬರು ಈ ವರ್ಕ್ಸ್ ಸ್ಟ್ರೇಸ್​ನಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಬೆಚ್ಚಿ ಬೀಳಿಸುವ ಅಂಶವು ಹೊರಗೆ ಬಿದ್ದಿದೆ. ಕೆಲಸ ಭಾರವನ್ನು ಒತ್ತಡವನ್ನು ಸಹಿಸಲಾಗದೇ ಅನೇಕ ಆರೋಗ್ಯದ ಸಮಸ್ಯೆಗಳಿಂದಾಗಿ ಭಾರತೀಯ ಯುವ ಜನತೆ ಸಾವಿನಂಚಿಗೆ ಹೋಗಿ ಸೇರುತ್ತಿದ್ದಾರೆ
ಇದೇ ವರ್ಷ ಮೇ ತಿಂಗಳಿನಲ್ಲಿ ಉಜ್ಜೈನಿಯ ಪ್ರೈವೇಟ್ ಬ್ಯಾಂಕ್​ನಲ್ಲಿ ಉಪ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹಿಮಾಂಶು ಅನ್ನುವವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಹೋದರಿ ಕೆಲಸದ ಒತ್ತಡದಿಂದಲೇ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ದೂರಿದ್ದರು.

ಇದನ್ನೂ ಓದಿ: ಈ ವರ್ಷ ದೇಶದಲ್ಲಿ ಎಷ್ಟು ಮದುವೆ ನಡೆಯಲಿವೆ? ಆಗುತ್ತಿರುವ ಖರ್ಚು ಗೊತ್ತಾದ್ರೆ ಶಾಕ್ ಆಗ್ತಿರಾ

ಉತ್ತರಪ್ರದೇಶದ ಪೋಸ್ಟ್ ಮಾಸ್ಟರ್ ಒಬ್ಬರು ಕೆಲಸಕ್ಕೆ ಸೇರಿ ಕೇವಲ ಆರು ತಿಂಗಳಾಗಿತ್ತು. ಕೆಲಸದ ಒತ್ತಡ ತಾಳಲಾರದೆ ನೇಣು ಬಿಗಿದುಕೊಂಡು ತಮ್ಮ ಜೀವ ಕಳೆದುಕೊಂಡಿದ್ದರು. ಉದಾಹರಣೆ ನೀಡುತ್ತಾ ಹೋದರೆ ಇಂತಹ ಸಾಲು ಸಾಲು ಪ್ರಕರಣಗಳಿವೆ. ಇವೆಲ್ಲವೂ ಕೆಲಸದ ಒತ್ತಡದಿಂದಾಗಿ ನಡೆದ ಅನಾಹುತಗಳು. ಇವುಗಳನ್ನು ಆತ್ಮಹತ್ಯೆ ಅಂತ ಕರೆಯುವ ಬದಲು ಸದ್ಯದ ಕೆಲಸದ ವಾತಾವರಣಗಳು ಮಾಡುತ್ತಿರುವ ಕೊಲೆ ಅಂದರೂ ಕೂಡ ತಪ್ಪಿಲ್ಲ.

ಕೆಲಸದ ಒತ್ತಡ ಅನ್ನೋದು ಕೇವಲ ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯೂ ಕೂಡ ಮನುಷ್ಯನನ್ನು ಹೈರಾಣು ಮಾಡಿ ಹಾಕುತ್ತಿದೆ. ಹಲವು ರೀತಿಯಲ್ಲಿ ಕೆಲಸಗಾರರನ್ನು ಹಣಿದು ಹಾಕುತ್ತಿದೆ. ಮಾನಸಿಕ ಸಮಸ್ಯೆಗಳಾದಂತಹ ಎಂಕ್ಸೈಟಿ (ಆತಂಕ) ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳು, ನಿದ್ರಾಹೀನೆಯಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದೆ.

ಇದನ್ನೂ ಓದಿ: ಸೌಂದರ್ಯ ರಾಶಿ ಸಮಂತಾ ಚರ್ಮದ ಕಾಂತಿಯ ಗುಟ್ಟೇನು? ತ್ವಚೆ ಆರೋಗ್ಯಕ್ಕೆ ಟಿಪ್ಸ್​ ಕೊಟ್ಟಿರುವ ಟಾಲಿವುಡ್ ನಾಯಕಿ

ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (NSSO) ಪ್ರಕಾರ ಭಾರತದಲ್ಲಿ ಶೇಕಡಾ 60ರಷ್ಟು ಕೆಲಸಗಾರರು ಕೆಲಸ ಒತ್ತಡವನ್ನು ನಿರ್ವಹಿಸಲಾಗದೆ ಒದ್ದಾಡುತ್ತಿದ್ದಾರೆ ಅಂತ ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದ ನಾಲ್ಕು ಜನ ಕೆಲಸಗಾರರಲ್ಲಿ ಒಬ್ಬ ವ್ಯಕ್ತಿ ಕೆಲಸದ ಒತ್ತಡದಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಒದ್ದಾಡುತ್ತಿದ್ದಾನೆ ಎಂದು ಹೇಳಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಷನ್ (NCBI) ನೀಡಿದ ವರದಿ ಪ್ರಕಾರ ಸುಮಾರು ಶೇಕಡಾ 43ಕ್ಕೂ ಹೆಚ್ಚು ಕೆಲಸಗಾರರು ಈ ಕೆಲಸದ ಒತ್ತಡವನ್ನು ನಿರ್ವಹಿಸಲಾಗದೆ ಅಕಾಲಿಕ ಸಾವಿಗೆ ಬಲಿಯಾಗುತ್ತಿದ್ದಾರೆ ಎಂದಿದೆ. ಅಮೆರಿಕಾ ಒಂದರಲ್ಲಿಯೇ ಕೆಲಸದ ಒತ್ತಡವನ್ನು ನಿರ್ವಹಿಸಲಾಗದೆ. ಅದರ ವರ್ಕ್​ ಸ್ಟ್ರೇಸ್​ನಿಂದಾಗಿಯೇ ವರ್ಷಕ್ಕೆ 20,231 ಕೆಲಸಗಾರರು ಅಸುನೀಗಿದ್ದಾರೆ ಎಂಬ ಅಂಕಿಅಂಶ ಬಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Work Stress; ಯುವಕರನ್ನು ಕಾಡುತ್ತಿರುವ ಪರಿ ಎಂತಹದು? ಅನ್ನಾ ಸೆಬಾಸ್ಟೈನ್​ಳ ಸಾವು ಕಲಿಸಿದ ಪಾಠವೇನು?

https://newsfirstlive.com/wp-content/uploads/2024/09/WORK-STRESS.jpg

Load More