newsfirstkannada.com

238 ಬಾರಿ ಸೋಲು! ಈ ಬಾರಿಯೂ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಈ ಅಭ್ಯರ್ಥಿ!

Share :

Published March 28, 2024 at 1:15pm

Update March 28, 2024 at 1:33pm

  ಮೋದಿ, ವಾಜಪೇಯಿ ಮುಂದೆ ನಿಂತು ಸೋಲುಂಡ ಅಭ್ಯರ್ಥಿ ಇವರು

  ಚುನಾವಣೆ ಸೋಲಿನಲ್ಲಿ ಲಿಮ್ಕಾ ದಾಖಲೆ ಪಡೆದ ‘ಚುನಾವಣೆ ರಾಜ’

  ಒಂದಲ್ಲಾ, ಎರಡಲ್ಲಾ 238 ಬಾರಿ ಸೋತರು ಛಲ ಬಿಡದ 65 ವರ್ಷದ ವ್ಯಕ್ತಿ

ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿದೆ. ಈಗಾಗಲೇ ಸ್ಪರ್ಧಿಗಳು ಟಿಕೆಟ್​ ಪಡೆಯಲು ಹೋರಾಡುತ್ತಿದ್ದಾರೆ. ಕೆಲವರಂತೂ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಆದರೆ ಇಲ್ಲೊಬ್ಬರು ಅಭ್ಯರ್ಥಿಯ ಹಿನ್ನೋಟವನ್ನು ತಿಳಿದುಕೊಳ್ಳಲೇಬೇಕು. ಏಕೆಂದರೆ ಇವರು ಬರೋಬ್ಬರಿ 238 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅಷ್ಟು ಮಾತ್ರವಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಬಾರಿ ಚುನಾವಣೆಗೆ ಸ್ಪರ್ಧಿ ಸೋತ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದಾರೆ.

ಹೆಸರು ಕೆ ಪದ್ಮರಾಜನ್. ಮೂಲತಃ ತಮಿಳುನಾಡಿನವರಾದ ಇವರನ್ನು ‘ಚುನಾವಣಾ ರಾಜ’ ಎಂದು ಕರೆಯುತ್ತಾರೆ. ಅಂದಹಾಗೆಯೇ ಇವರು ಒಟ್ಟು 238 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಅಚ್ಚರಿ ಸಂಗತಿ ಎಂದರೆ 65 ವರ್ಷದ ​ಕೆ ಪದ್ಮರಾಜನ್ ಟೈರ್​ ರಿಪೇರಿ ಅಂಗಡಿ ಮಾಲೀಕರಾಗಿದ್ದು, 1988ರಿಂದ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿದ್ದಾರೆ. ಮೊದಲ ಬಾರಿ ತಮಿಳುನಾಡು ಮೆಟ್ಟೂರಿನಿಂದ ಸ್ಪರ್ಧಿಸಿದ್ದರು.

ಕೆ ಪದ್ಮರಾಜನ್ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಏಪ್ರಿಲ್​ 19ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಕೆ ಪದ್ಮರಾಜನ್​ ಧರ್ಮಪುರಿ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ.

ಅಚ್ಚರಿಯ ವಿಚಾರವೆಂದರೆ, ಕೆ ಪದ್ಮರಾಜನ್ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್​ ಬಿಹಾರಿ ವಾಜಪೇಯಿ, ಮನಮೋಹನ್​ ಸಿಂಗ್​, ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ.

‘ಐ ಡೋಂರ್​ ಕೇರ್’​ ಎಂದ ಕೆ ಪದ್ಮರಾಜನ್

ಕೆ ಪದ್ಮರಾಜನ್ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಸೋಲನ್ನು ಅನುಭವಿಸುತ್ತಾ ಬಂದಿದ್ದಾರೆ. ಹಾಗಾಗಿ ಅವರು ಸೋಲಿನ ಬಗ್ಗೆ ಅಷ್ಟೇನು ತಲೆ ಕಡೆಸಿಕೊಳ್ಳುವುದಿಲ್ಲ. ಇದಲ್ಲದೆ, ಮೂರು ದಶಕಗಳಲ್ಲಿ ಅವರು ಚುನಾವಣೆ ನಾಮನಿರ್ದೇಶನಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾ ಬಂದಿದ್ದಾರೆ. ಇದೀಗ ಮತ್ತೆ ಈ ಬಾರಿಯ ಚುನಾವಣೆಗೆ 25 ಸಾವಿರ ಹಣವನ್ನು ಚುನಾವಣಾ ಆಯೋಗದಲ್ಲಿ ಠೇವಣಿ ಇಡಬೇಕಾಗಿದೆ.

ಇದನ್ನೂ ಓದಿ: ಸ್ನೇಹಿತನ ತಮಾಷೆಯಿಂದ ಅಮಾಯಕ ಬಲಿ.. ಬೈಕ್​ ಸರ್ವೀಸ್​ ಮಾಡಲು ಹೋದಾತ ಅನ್ಯಾಯವಾಗಿ ಸಾವನ್ನಪ್ಪಿದ

ಟೈರ್​ ರಿಪೇರಿ ಮಾಲಿಕರಾದ ಕೆ ಪದ್ಮರಾಜನ್ ಇದೇ ವಿಚಾರಕ್ಕೆ ಲಿಮ್ಕಾ ದಾಖಲೆ ಪಡೆದಿದ್ದಾರೆ. ತನ್ನ ದೈನಂದಿನ ಕೆಲಸದ ಜೊತೆಗೆ ಹೋಮಿಯೋಪತಿ ಔಷಧಿಯನ್ನು ನೀಡುತ್ತಾರಂತೆ ಮತ್ತು ಸ್ಥಳೀಯ ಮಾಧ್ಯಮವೊಂದರ ಸಂಪಾದಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

238 ಬಾರಿ ಸೋಲು! ಈ ಬಾರಿಯೂ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಈ ಅಭ್ಯರ್ಥಿ!

https://newsfirstlive.com/wp-content/uploads/2024/03/K-Padmarajan.jpg

Load More