newsfirstkannada.com

×

World Cup 2023: ಆಸೀಸ್​ಗೆ ಈತನೇ ಕೃಪಾಕಟಾಕ್ಷ! ಯೆಲ್ಲೋ ಆರ್ಮಿಯ ​​​ಹಣೆಬರಹ ಬದಲಿಸಿದ ಪುಣ್ಯಾತ್ಮ ಈತ!

Share :

Published November 18, 2023 at 3:48pm

Update November 18, 2023 at 3:52pm

    ಕುಗ್ಗಿಹೋದ ತಂಡವನ್ನ ಬಡಿದೆಬ್ಬಿಸಿದ 'ಶಕ್ತಿಮಾನ್​​'

    ಕಮಿನ್ಸ್ ಕರಾಮತ್ತು..ಆಸೀಸ್​​ಗೆ ಫೈನಲ್​ ಡೋರ್​​ ಓಪನ್​​

    ಸತತ ಎರಡು ಸೋಲು..ಬಳಿಕ 7ಕ್ಕೆ 7 ರಲ್ಲಿ ಗೆಲುವು..!

ಐದು ಬಾರಿ ಚಾಂಪಿಯನ್​​​​​ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್​ನಲ್ಲಿ ಫೈನಲ್​​ಗೇರಿದೆ. ಆರಂಭದಲ್ಲಿ ಮುಗ್ಗರಿಸಿ ಲೀಗ್​ಸ್ಟೇಜ್​ನಲ್ಲೇ ಹೊರಬೀಳುವ ಭೀತಿಯಲ್ಲಿತ್ತು. ಆದ್ರೆ ಎಲ್ಲರ ನಿರೀಕ್ಷೆ ಹುಸಿಯಾಗಿಸಿ ಪ್ರಶಸಿ ರೇಸ್​​​ಗೆ ತಲುಪಿದೆ. ಎಲ್ಲವೂ ಸಾಧ್ಯವಾಗಿದ್ದು ಆ ಒನ್​​​ ಮ್ಯಾನ್​ ಆರ್ಮಿಯಿಂದ. ಆತನೇ ಆಸಿಸ್​​ಗೆ ಶಕ್ತಿಮಾನ್​​​​. ಆತನೇ ರಿಯಲ್ ಸೇವಿಯರ್​​​. ಅಷ್ಟಕ್ಕೂ ಆಸ್ಟ್ರೇಲಿಯಾ ಪಾಲಿನ ಆ ಆಪ್ತರಕ್ಷಕ ಯಾರು ? ಈ ಸ್ಟೋರಿ ಓದಿ|

ಆಸ್ಟ್ರೇಲಿಯಾ..! ವಿಶ್ವಕ್ರಿಕೆಟ್​ನ ಬೀಷ್ಮ..ಒಂದಲ್ಲ, ಎರಡಲ್ಲ, ಬರೋಬ್ಬರಿ 5 ವಿಶ್ವಕಪ್​​ ಟ್ರೋಫಿಗಳನ್ನ ಮುಡಿಗೇರಿಸಿಕೊಂಡ ದೈತ್ಯ ಟೀಮ್​​​. ಕಪ್​​ ಸಂಖ್ಯೆಯನ್ನ ಆರಕ್ಕೇರಿಸಿಕೊಳ್ಳುವ ಇರಾದೆಯಲ್ಲಿದೆ. ನಾಳೆ ನಡೆಯುವ 2023ರ ವಿಶ್ವಕಪ್​​​​​ ಫೈನಲ್​​​ನಲ್ಲಿ ಇಂಡೋ-ಆಸೀಸ್​​​​​​​​​​​​​​​​ ತಂಡಗಳು ಮುಖಾಮುಖಿಯಾಗಲಿವೆ. ಮದಗಜಗಳ ಕಾದಾಟ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಜತನದಿಂದ ಕಾದು ಕುಳಿತಿದೆ.

ಒನ್​ ಮ್ಯಾನ್ ಆರ್ಮಿ ತಂಡವನ್ನ ಫೈನಲ್​ಗೇರಿಸಿದ್ದೇಗೆ..?

ಬಲಾಢ್ಯ ಆಸೀಸ್​​​, ಸೆಮಿಫೈನಲ್​ ದಕ್ಷಿಣ ಆಫ್ರಿಕಾ ಸದೆಬಡಿದು ಫೈನಲ್​ ಪ್ರವೇಶಿಸಿದೆ. ಫೈನಲ್​​ನಲ್ಲಿ ಭಾರತಕ್ಕೆ ಸವಾಲೊಡ್ಡಲಿದೆ. ಇದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ಟೂರ್ನಿ ಆರಂಭದಲ್ಲಿ ಆಸಿಸ್​​ ಆಡಿದ ರೀತಿ ನೋಡ್ತಿದ್ರೆ ಫೈನಲ್ ಅಲ್ಲ, ಸೆಮಿಫೈನಲ್​​​​ಗೆ ಎಂಟ್ರಿಕೊಡೋದು ಕಬ್ಬಿಣಡದ ಕಡಲೆಯಾಗಿತ್ತು.

ಆಸೀಸ್​​​ ಹಣೆಬರಹ ಬದಲಿಸಿದ ಕ್ಯಾಪ್ಟನ್ ಕಮಿನ್ಸ್​​​

ಸ್ಟ್ರಾಂಗ್ ಸೈಡ್ ಎನಿಸಿಕೊಂಡಿದ್ದ ಆಸೀಸ್​​​ ಅಭಿಯಾನ ಆರಂಭಿಸಿದ್ದು ಸೋಲಿನಿಂದ..ಲೀಗ್​​​ನ ಮೊದಲೆರಡು ಪಂದ್ಯಗಳಲ್ಲಿ ಕಾಂಗರೂಸ್​​ ಸೋತು ಸುಣ್ಣವಾಯ್ತು. ಇಡೀ ತಂಡದ ಆತ್ಮವಿಶ್ವಾಸವೇ ಕುಗ್ಗಿ ಹೋಗಿತ್ತು. ಆಸಿಸ್​​ ಕಥೆ ಮುಗೀತು, ಮತ್ತೆ ಬೌನ್ಸ್ ಬ್ಯಾಕ್ ಮಾಡಲ್ಲ. ಲೀಗ್ ಸ್ಟೇಜ್​ನಲ್ಲೇ ಗಂಟುಮೂಟೆ ಕಟ್ಟುತ್ತೆ ಎಂದು ಎಲ್ಲರರೂ ಪ್ರಿಡಿಕ್ಷನ್ ಮಾಡೋಕೆ ಶುರುಮಾಡಿದ್ರು. ಇಂತಹ ಸಂಕಷ್ಟದಲ್ಲಿ ತಂಡಕ್ಕೆ ಆಪ್ತರಕ್ಷನಾಗಿದ್ದು ಕ್ಯಾಪ್ಟನ್ ಪ್ಯಾಟ್​ ಕಮಿನ್ಸ್​​​.

ಆರಂಭಿಕ ಎರಡು ಸೋಲಿನಿಂದ ಟ್ರೂ ಲೀಡರ್​ ದೃತಿಗೆಡಲಿಲ್ಲ..ಆದ ತಪ್ಪುಗಳಿಂದಲೇ ಬೇಗನೇ ಪಾಠ ಕಲಿತ್ರು..ಮಾನಸಿಕವಾಗಿ ಕುಗ್ಗಿಹೋಗಿದ್ದ ಆಟಗಾರರಲ್ಲಿ ನೈತಿಕ ಸ್ಥೈರ್ಯ ತುಂಬಿದ್ರು. ಅಷ್ಟೇ. ಇಡೀ ತಂಡವೇ ಸಿಡಿದೆದ್ದಿತು. ನಂತ್ರ ಆಡಿದ ಏಳಕ್ಕೆ ಏಳು ಪಂದ್ಯಗಳನ್ನ ಗೆದ್ದು, ಫೈನಲ್​​ ಪ್ರವೇಶಿಸಿತು. ಸೆಮೀಸ್​​ನಲ್ಲಿ ಹರಿಣ ಪಡೆ ಸೋಲಿಸಿ ಫೈನಲ್​​ಗೆ ಲಗ್ಗೆ ಇಟ್ಟಿದ್ದು ಈಗ ಇತಿಹಾಸ.

ಅಫ್ಘನ್​​​​​​​​-ಆಫ್ರಿಕಾ ವಿರುದ್ಧ ಕೆಚ್ಚದೆಯ ಪ್ರದರ್ಶನ

ಆಸ್ಟ್ರೇಲಿಯಾದ ಸೆಮಿಫೈನಲ್​​​​ ಡಿಸೈಡ್​ ಮಾಡಿದ್ದೇ ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ರೋಚಕ ಗೆಲುವುಗಳು. ಅಪ್ಘನ್​​ ವಿರುದ್ಧ 292 ರನ್​​​​​ ಗುರಿ ಪಡೆದಿದ್ದ ಆಸಿಸ್​​ 91 ರನ್​ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆಗ ಮ್ಯಾಕ್ಸ್​ವೆಲ್​ ಜೊತೆ 8ನೇ ವಿಕೆಟ್​ಗೆ ದ್ವಿಶತಕದ ಜೊತೆಯಾಟವಾಡಿದ್ರು. ಒಂದೆಡೆ ಮ್ಯಾಕ್ಸಿ ಅಬ್ಬರಿಸ್ತಿದ್ರೆ ಇನ್ನೊಂದೆ ಕಮಿನ್ಸ್ ಸಾಥ್​​ ನೀಡಿದ್ರು. ತಾಳ್ಮೆಯುತ ಆಟವಾಡಿದ ಕಮಿನ್ಸ್ 68 ಎಸೆತಗಳಲ್ಲಿ 12 ರನ್​ ಗಳಿಸಿ ತಂಡವನ್ನ ಸೋಲಿನ ದವಡೆಯಿಂದ ಪಾರು ಮಾಡಿದ್ರು.

ಇನ್ನು ಆಫ್ರಿಕಾ ಎದುರು ಕೂಡ ಇಂತಹದೇ ಸಿಚುವೇಶನ್ ಇತ್ತು. 29 ಎಸೆತಗಳಲ್ಲಿ 17 ರನ್​ ಗಳಿಸಿ ತಂಡವನ್ನ ಸೋಲಿನಿಂದ ಎಸ್ಕೇಪ್ ಮಾಡಿದ್ರು. ಆ ಮೂಲಕ ತಂಡಕ್ಕೆ ಫೈನಲ್​ ಗಿಫ್ಟ್​ ಕೊಟ್ರು.

ಇನ್ನು ಬರೀ ಬ್ಯಾಟಿಂಗ್​ ಅಷ್ಟೇ ಅಲ್ಲದೇ, ಬೌಲಿಂಗ್​​ನಲ್ಲೂ ತಂಡಕ್ಕೆ ನೆರವಾಗಿದ್ದಾರೆ..ಈ ವಿಶ್ವಕಪ್​​​ನಲ್ಲಿ ಕಮಿನ್ಸ್​ 13 ವಿಕೆಟ್ ಬೇಟೆಯಾಡಿದ್ದಾರೆ. ಕಮಿನ್ಸ್ ಕೆಚ್ಚದೆಯ ಹೋರಾಟದ ಪ್ರತಿಫಲವೇ ಆಸೀಸ್​​ ಫೈನಲ್​​ನಲ್ಲಿ ಭಾರತ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ರೋಹಿತ್ ಶರ್ಮಾರಂತೆ ಕಮಿನ್ಸ್​ ನಾಯಕರಾಗಿ ತಂಡವನ್ನ ಮುಂಚೂಣಿಯಲ್ಲಿ ಮುನ್ನಡೆಸ್ತಿದ್ದಾರೆ. ಈ ಟ್ರೂ ಕ್ಯಾಪ್ಟನ್ಸ್​ಗಳಲ್ಲಿ ಕೊನೆಗೆ ವಿಶ್ವಕಪ್ ಸಿಂಹಾಸನ ಪಟ್ಟ ಏರೋದ್ಯಾರು ಅನ್ನೋದೇ ಭಾರಿ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup 2023: ಆಸೀಸ್​ಗೆ ಈತನೇ ಕೃಪಾಕಟಾಕ್ಷ! ಯೆಲ್ಲೋ ಆರ್ಮಿಯ ​​​ಹಣೆಬರಹ ಬದಲಿಸಿದ ಪುಣ್ಯಾತ್ಮ ಈತ!

https://newsfirstlive.com/wp-content/uploads/2023/11/pat-cummins.jpg

Load More