2027ರಲ್ಲಿ ನಡೆಯಲಿದೆ ಐಸಿಸಿ ವಿಶ್ವಕಪ್ ಪಂದ್ಯಾಟ
ಜಂಟಿಯಾಗಿ ವಿಶ್ವಕಪ್ ಆಯೋಜಿಸಲು ಮುಂದಾಲೋಚನೆ
ಮುಂಬರುವ ವಿಶ್ವಕಪ್ನಲ್ಲಿ ಎಷ್ಟು ತಂಡಗಳು ಭಾಗವಹಿಸಲಿವೆ ಗೊತ್ತಾ?
2023ರ ವಿಶ್ವಕಪ್ ಫೈನಲ್ ಪಂದ್ಯ ಕೊನೆಗೊಂಡು ಇಂದಿಗೆ 2 ದಿನ ಕಳೆದಿದ್ದಷ್ಟೆ. ಆದರೀಗ ಕ್ರಿಕೆಟ್ ಅಭಿಮಾನಿಗಳಿಗಾಗಿ ಮುಂಬರುವ ವಿಶ್ವಕಪ್ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಐಸಿಸಿ ಪುರುಷರ ವಿಶ್ವಕಪ್ ಪಂದ್ಯವನ್ನು 2027ರಲ್ಲಿ ನಡೆಸಲು ಮುಂದಾಗಿದೆ. ದಕ್ಷಿಣಾ ಆಫ್ರಿಕಾ ಮತ್ತು ಜಿಂಬಾಬ್ವೆ ಜಂಟಿಯಾಗಿ ವಿಶ್ವಕಪ್ ಆಯೋಜಿಸಲು ಸಿದ್ಧವಾಗಿದೆ.
ಅಚ್ಚರಿಯ ಸಂಗತಿ ಎಂದರೆ ಮುಂಬರುವ ವಿಶ್ವಕಪ್ನಲ್ಲಿ ನಮೀಬಿಯಾ ಅತಿಥೇಯ ರಾಷ್ಟ್ರವಾಗಿ ಪಾದರ್ಪಣೆ ಮಾಡಲು ಸಜ್ಜಾಗಿದೆ. ಹೀಗಾಗಿ 2027ರ ವಿಶ್ವಕಪ್ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ.
ಐಸಿಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ದಕ್ಷಿಣಾ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಅತಿಥೇಯರಾ್ಇ ಕಾರ್ಯ ನಿರ್ವಹಿಸಲಿದೆ. ODI ಶ್ರೇಯಾಂಕದಲ್ಲಿ ಅಗ್ರ 8 ತಂಡಗಳು ಅರ್ಹತೆ ಪಡೆಯುತ್ತವೆ. ಉಳಿದ 4 ಸ್ಥಾನಗಳು ಜಾಗತಿಕ ಅರ್ಹತಾ ಪಂದ್ಯಾವಳಿ ಮೂಲಕ ನಿರ್ಧರಿಸಲಾಗುತ್ತದೆ.ನಮೀಬಿಯಾ ವಿಶ್ವಕಪ್ ಆಯೋಜನೆಯ ಹೊರತಾಗಿಯೂ, ಸದಸ್ಯತ್ವ ಹೊಂದಿರದ ಕಾರಣ ಅದರ ಭಾಗವಹಿಸುವಿಕೆ ಇನ್ನೂ ಖಚಿತವಾಗಿಲ್ಲ ಎಂದಿದೆ.
2027ರ ವಿಶ್ವಕಪ್ ಪಂದ್ಯ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ 2003ರಲ್ಲಿ ನಡೆದ ಪಂದ್ಯದಂತೆ ದಕ್ಷಿಣಾ ಆಫ್ರಿಕಾದ 12 ಸ್ಥಳಗಳಲ್ಲಿ ವಿಶ್ವಕಪ್ ಪಂದ್ಯ ನಡೆಯಲಿಕ್ಕಿದೆ ಎನ್ನಲಾಗುತ್ತಿದೆ. ಅಂದು ಜಿಂಬಾಬ್ವೆಯಲ್ಲಿ ಎರಡು ಮತ್ತು ಕೀನ್ಯಾದಲ್ಲಿ ಒಂದು ಪಂದ್ಯ ಆಯೋಜಿಸಲಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ