/newsfirstlive-kannada/media/post_attachments/wp-content/uploads/2024/07/ANATNH_AMBANI.jpg)
ಮದುವೆ ಅಂದ್ರೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಅನ್ನೋದು ನಂಬಿಕೆ. ಆದ್ರೆ ಮದುವೆಗಾಗಿ ಆ ಸ್ವರ್ಗವೇ ಧರೆಗಿಳಿದ್ರೆ ಹೇಗಿರುತ್ತೆ?. ಅದು ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಅದೇ ಕಲ್ಪನೆಗೆ ಭಾರತದ ಕುಬೇರ ಮುಖೇಶ್​ ಅಂಬಾನಿ ಪುತ್ರನ ಮದುವೆ ದಿಬ್ಬಣ ಸಾಕ್ಷಿ ಆಗ್ತಿದೆ.
ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್​​-ರಾಧಿಕಾ ಕಲ್ಯಾಣ
ಏಷಿಯಾ ಅತಿ ದೊಡ್ಡ ಶ್ರೀಮಂತ ಮುಖೇಶ್​​​​ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ. ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಸ್ವರ್ಗವೇ ಧರೆಗಿಳಿದಿದೆ. ತಾಳಿ ಕಟ್ಟೋ ಮುಹೂರ್ತ ರಾತ್ರಿಯೇ ನಡೆದಿದೆ. ಆದ್ರೆ, ಮುಹೂರ್ತದ ಸಮಯವನ್ನ ರಹಸ್ಯವಾಗಿಡಲಾಗಿದೆ.
ವರ್ಷದ ಅದ್ಧೂರಿ ಮದುವೆಗೆ ಗಣ್ಯರ ಸಮೂಹ ಆಗಮನ
ಅನಂತ್ ಅಂಬಾನಿ ಮದುವೆಗೆ ಈಗಾಗಲೇ ದೇಶ, ವಿದೇಶಗಳಿಂದ ಗಣ್ಯರು ಮುಂಬೈಗೆ ಬಂದಿಳಿದಿದ್ದಾರೆ.. ಜಾಗತಿಕ ಕಂಪನಿಗಳ ಎಂಡಿ, ಸಿಇಓಗಳ ಆಗಮನವಾಗಿದೆ.. WWE ಸೂಪರ್ ಸ್ಟಾರ್​​ ಜಾನ್ ಸೆನಾ, ಕಿಮ್​ ಕರ್ದಾಶಿಯನ್​, ಅಮಿತಾಬ್​ ಬಚ್ಚನ್​​, ಸೂಪರ್​ ಸ್ಟಾರ್​​ ರಜನಿಕಾಂತ್​​, ಸಲ್ಮಾನ್ ಖಾನ್, ಧೋನಿ ಸೇರಿ ಗಣ್ಯರ ದಂಡು ಸಾಂಪ್ರದಾಯಿಕ ಉಡುಪುಗಳಲ್ಲಿ ಮಿಂಚಿದ್ರು.
ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಅಂಬಾನಿ ಮನೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಭರ್ಜರಿ ಸ್ವಾಗತ ದೊರೆತಿದೆ. ಮೊದಲಿಗೆ ಅತಿಥಿಗಳ ತಲೆಯ ಮೇಲೆ ಗುಲಾಬಿ ದಳಗಳನ್ನ ಹಾಕಿ ಕೈಗೆ ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಿದ್ದಾರೆ.
ಯಶ್​​ ‘ಟಾಕ್ಸಿಕ್’ ಲುಕ್​ಗೆ ಅಭಿಮಾನಿಗಳು ಫಿದಾ!
ಪ್ಯಾನ್​ ಇಂಡಿಯಾ ಸ್ಟಾರ್​​ ಯಶ್​​ ಸಹ ಶಾದಿ ಮುಬಾರಕ್​​ ಹೇಳಲು ಬಂದಿದ್ರು. ಪತ್ನಿ ರಾಧಿಕಾ ಪಂಡಿತ್​​​ ಜೊತೆ ಮುಂಬೈಗೆ ತೆರಳಿದ್ರು. ಲಾಂಗ್​ ಹೇರ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಯಶ್, ಟಾಕ್ಸಿಕ್​ಗಾಗಿ ಕೂದಲಿಗೆ ಕತ್ತರಿ ಹಾಕಿದ್ದು, ಹೊಸ ಗೆಟಪ್​​​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಶತಮಾನದ ಮದುವೆ ಎಂದೇ ಬಣ್ಣನೆ ಆಗ್ತಿದ್ದು, 2 ಸಾವಿರ ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡ್ಲಾಗ್ತಿದೆ ಅಂತ ಗೊತ್ತಾಗಿದೆ..
ಇದನ್ನೂ ಓದಿ:ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!
Ambani's Family wedding
Johncena attends Ananth Ambani & Radhika's wedding @JohnCena#AmbaniWedding#JohnCenapic.twitter.com/XXFaFRfBd8— NS Kondappa (@NSKondappaRaya) July 12, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ