ಆರ್ಸಿಬಿ ಗೆಲುವಿಗಾಗಿ ಅಭಿಮಾನಿಗಳ ಪ್ರಾರ್ಥನೆ ಜೋರು
ಗೆದ್ದು ಬೀಗಲು ತುದಿಗಾಲಲ್ಲಿ ನಿಂತ ಆರ್ಸಿಬಿ ವುಮೆನ್ಸ್ ಟೀಮ್
WPL ಫೈನಲ್ನಲ್ಲಿ ಯಾವ ಟೀಮ್ ಗೆದ್ದರೂ ಇತಿಹಾಸ ಸೃಷ್ಟಿ
ಆರ್ಸಿಬಿ ಅಭಿಮಾನಿಗಳ ಕನಸು ನನಸಾಗೋ ಸಮಯ ಬಂದೇ ಬಿಡ್ತು. 16 ವರ್ಷಗಳ ಟ್ರೋಫಿ ಕೊರಗಿಗೆ ಬ್ರೇಕ್ ಹಾಕಲು ಇನ್ನೊಂದೆ ಹೆಜ್ಜೆ ಬಾಕಿ. ಡೆಲ್ಲಿಯನ್ನ ಬಗ್ಗು ಬಡಿದು ಟ್ರೋಫಿ ಗೆದ್ದು ಬೀಗಲು ಆರ್ಸಿಬಿ ವುಮೆನ್ಸ್ ಟೀಮ್ ತುದಿಗಾಲಲ್ಲಿ ನಿಂತಿದೆ. ಅಭಿಮಾನಿಗಳ ವಲಯದಲ್ಲಿ ಗೆಲುವಿಗಾಗಿ ಪ್ರಾರ್ಥನೆ ಜೋರಾಗಿದೆ.
2ನೇ ಸೀಸನ್ನ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯೋ ಅಂತಿಮ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಚೊಚ್ಚಲ ಟ್ರೋಫಿ ಗೆಲುವಿನ ಕನಸಿನಲ್ಲಿ ಉಭಯ ತಂಡಗಳಿವೆ.
ಈ ಸಲ ಕಪ್ ನಮ್ದೇ.. ಕನಸು ನನಸಾಗಲು ಒಂದೇ ಹೆಜ್ಜೆ.!
ಈ ಸಲ ಕಪ್ ನಮ್ದೇ.. 16 ವರ್ಷಗಳಿಂದ ಈ ಮಾತನ್ನ ಆರ್ಸಿಬಿ ಫ್ಯಾನ್ಸ್ ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಕನಸು ಕನಸಾಗೇ ಉಳಿದಿದೆ. ಇದೀಗ ಆರ್ಸಿಬಿ ವನಿತೆಯರ ತಂಡ ಆ ಕನಸನ್ನ ನನಸು ಮಾಡುವತ್ತ ಹೆಜ್ಜೆ ಇಟ್ಟಿದೆ. ಇಂದು ನಡೆಯೋ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಮಣ್ಣು ಮುಕ್ಕಿಸಿ ಟ್ರೋಫಿ ಎತ್ತಿ ಹಿಡಿಯಲು ಸ್ಮೃತಿ ಮಂದಾನ ಪಡೆ ಸಜ್ಜಾಗಿದೆ.
‘ಅಸಾಧ್ಯ’ ಅಂದಿದ್ದನ್ನ ಸಾಧಿಸ್ತಾರಾ ವನಿತೆಯರು.?
2008ರಿಂದ 2024.. ಬರೋಬ್ಬರಿ 16 ವರ್ಷಗಳ ಈ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ತಂಡ ಅದೆಷ್ಟೋ ದಿಗ್ಗಜರನ್ನ ನೋಡಿದೆ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿಯಂತ ಲೆಜೆಂಡ್ಗಳು ತಂಡವನ್ನ ಲೀಡ್ ಮಾಡಿದ್ದಾರೆ. ವಿಶ್ವದ ಸೂಪರ್ ಸ್ಟಾರ್ಗಳು ಫ್ರಾಂಚೈಸಿ ಪರ ಆಡಿದ್ದಾರೆ. ಆದ್ರೆ, ಟ್ರೋಫಿ ಗೆದ್ದಿಲ್ಲ. ಇದೀಗ ವನಿತೆಯರ ತಂಡ ಆ ಅಸಾಧ್ಯದ ಸಾಧನೆ ಮಾಡುತ್ತಾ ಅನ್ನೋ ಕುತೂಹಲ ಕ್ರಿಕೆಟ್ ವಲಯದಲ್ಲಿದೆ.
ಆಲ್ರೌಂಡ್ ಆಟವಾಡಿದ್ರೆ ನಾವೇ ಚಾಂಪಿಯನ್.!
ಈ ಟೂರ್ನಿಯಲ್ಲಿ ಆರ್ಸಿಬಿ ಫೈನಲ್ ತಲುಪಿದ್ರೂ ಕೂಡ ಸಂಘಟಿತ ಹೋರಾಟದ ಕೊರತೆ ಕಾಡಿದೆ. ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಲ್ಲ. ಬ್ಯಾಟಿಂಗ್ ಸಕ್ಸಸ್ ಆದ್ರೆ, ಬೌಲಿಂಗ್ ಫೇಲ್ಯೂರ್ ಆಗಿದೆ. ಬೌಲಿಂಗ್ನಲ್ಲಿ ಮೇಲುಗೈ ಸಾಧಿಸಿದಾಗ ಬ್ಯಾಟಿಂಗ್ ಪ್ಲಾಫ್ ಆಗಿದೆ. ಫೈನಲ್ ಫೈಟ್ನಲ್ಲಿ ಮಂದಾನ ಪಡೆ ಮೈ ಕೊಡವಿ ನಿಂತು ಹೋರಾಡಿದ್ರೆ ಟ್ರೋಫಿ ಗೆಲುವು ಅಸಾಧ್ಯವಲ್ಲ.
ರನ್ನರ್ಅಪ್ ಡೆಲ್ಲಿಗೆ ಟ್ರೋಫಿ ಗೆಲ್ಲೋ ಹಂಬಲ.!
ಕಳೆದ ಸೀಸನ್ನ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್, ಈ ಬಾರಿ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಆಲ್ರೌಂಡ್ ಪರ್ಫಾಮೆನ್ಸ್ನಿಂದ ಮಿಂಚಿದೆ. ಲೀಗ್ ಹಂತದ ಎರಡೂ ಮುಖಾಮುಖಿಯಲ್ಲಿ ಆರ್ಸಿಬಿಯನ್ನ ಸೋಲಿಸಿದೆ. ಇದೇ ಆತ್ಮವಿಶ್ವಾಸದಲ್ಲಿರೋ ಡೆಲ್ಲಿ ಟಫ್ ಫೈಟ್ ಕೊಡಲು ಸಜ್ಜಾಗಿದೆ.
RCB VS DC ಯಾರೇ ಗೆದ್ರು ಇತಿಹಾಸ ಸೃಷ್ಟಿ.!
ಐಪಿಎಲ್ ಆರಂಭವಾಗಿ 16 ಸೀಸನ್ ಕಳೆದಿವೆ. ಆದ್ರೆ, ಆರ್ಸಿಬಿ, ಡೆಲ್ಲಿ ಎರಡೂ ತಂಡಗಳು ಈವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಇದೀಗ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಎರಡೂ ತಂಡಗಳು ಫೈನಲ್ ಫೈಟ್ ನಡೆಸಲಿವೆ. ಇದ್ರಲ್ಲಿ ಗೆದ್ದ ತಂಡ ಇತಿಹಾಸ ಸೃಷ್ಟಿಸಲಿದೆ. ಯಾವ ತಂಡ ಇತಿಹಾಸ ಸೃಷ್ಟಿಸುತ್ತೆ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ