ಮೂವರ ಮಕ್ಕಳ ತಾಯಿ ಪೆರ್ರಿ ವೈಯಕ್ತಿಕ ಜೀವನ ಹೇಗಿದೆ..?
ಪೆರ್ರಿ ಇದ್ದಲ್ಲಿ ಗೆಲುವಿನ ಪೇರಿ ಖಂಡಿತ, ಆರ್ಸಿಬಿ ನಿರೀಕ್ಷೆ ದುಪ್ಪಟ್ಟು..!
ಪೆರ್ರಿ ಪೂರ್ಣ ಹೆಸರು ಏನು ಗೊತ್ತಾ..? ಇವರಿಗೂ ಇದೆ ಒಂದು ನಿಕ್ ನೇಮ್..!
ಇಡೀ ಐಪಿಎಲ್ನ ಕ್ರೇಜ್ ಒಂದು ತೂಕವಾದರೆ, ಅದರಲ್ಲಿ ಆರ್ಸಿಬಿ ತಂಡದ ಕ್ರೇಜ್ ಇನ್ನೊಂದು ತೂಕ ಆಗಿರುತ್ತದೆ. ಏಕೆಂದರೆ ಬೆಂಗಳೂರು ತಂಡಕ್ಕೆ ಕೋಟಿ ಕೋಟಿ ಅಭಿಮಾನಿಗಳ ಹಾರೈಕೆ ಇದೆ. ಈ ಹಾರೈಕೆಯಿಂದಲೋ ಏನೋ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನಲ್ಲಿ ಸ್ಮೃತಿ ಮಂದನಾ ನೇತೃತ್ವದ ತಂಡ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇದರ ಹಿಂದೆ ಶಕ್ತಿಯಾಗಿ ನಿಂತಿದ್ದು ಮಾತ್ರ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ. ಆರ್ಸಿಬಿಯ ಪವರ್ ಆಗಿರುವ ಪೆರ್ರಿ ಯಾರು, ಇವರ ಕುಟುಂಬದ ಬಗ್ಗೆ ಏನು ಗೊತ್ತು, ಇವರ ಸಾಧನೆ ಏನು ಎಂಬುದರ ಇಣುಕು ನೋಟ ಇಲ್ಲಿದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ಸ್ಟಾರ್ ಆಲ್ರೌಂಡರ್ ಆಗಿರುವ ಎಲ್ಲಿಸ್ ಪೆರ್ರಿ, ಪೆಜ್ ಎಂಬ ನಿಕ್ನೇಮ್ನಿಂದ ಫೇಮಸ್. ಈಕೆಯ ಪೂರ್ಣ ಹೆಸರು ಎಲ್ಲಿಸ್ ಅಲೆಕ್ಸಾಂಡ್ರಾ ಪೆರ್ರಿ. ಸಿಡ್ನಿಯ ನ್ಯೂ ಸೌತ್ವೆಲ್ಸ್ನ ವಹ್ರೂಂಗಾದಲ್ಲಿ 3 ನವೆಂಬರ್ 1990 ರಂದು ಜನಿಸಿದರು. ಇವರಿಗೆ ಮೊದಮೊದಲು ಕ್ರಿಕೆಟ್ ಅಂದರೆ ಅಷ್ಟಕ್ಕೆ ಅಷ್ಟೇ. ಫುಟ್ಬಾಲ್ ಎಂದರೆ ಪಂಚಪ್ರಾಣ. ಕೇವಲ 16 ವರ್ಷದವರಿದ್ದಾಗಲೇ ರಾಷ್ಟ್ರೀಯ ಕ್ರಿಕೆಟ್ ಮತ್ತು ಫುಟ್ಬಾಲ್ ಎರಡಕ್ಕೂ ಎಂಟ್ರಿ ಕೊಟ್ಟಿದ್ದರು. ಐಸಿಸಿ ಹಾಗೂ FIFA ವಿಶ್ವಕಪ್ಗಳನ್ನು ಆಡಿದಂತಹ ಆಸಿಸ್ನ ಅತ್ಯಂತ ಕಿರಿಯ ಆಟಗಾರ್ತಿ ಎನ್ನುವ ಕೀರ್ತಿ ಪೆರ್ರಿಗೆ ಇದೆ.
ಆಸಿಸ್ ತಂಡದಲ್ಲೇ ಪೆರ್ರಿ ಅತ್ಯಂತ ಸುಂದರಿ. ನೋಡುಗರನ್ನ ತನ್ನ ಅಂದದಿಂದಲೇ ಸೆಳೆಯುವಂತಹ ಮೈಮಾಟ ಹೊಂದಿರುವ ಆಟಗಾರ್ತಿ. ಹೀಗಾಗಿಯೇ ಹಲವಾರು ಕಂಪನಿಗಳಿಗೆ ಆಡ್ಗಳನ್ನ ನೀಡಿದ್ದಾರೆ. 2016 ಮತ್ತು 18ರಲ್ಲಿ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2017ರಲ್ಲಿ ಐಸಿಸಿಯಿಂದ ನೀಡುವ ವರ್ಷದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಟಿ20ಯಲ್ಲಿ 1,000 ರನ್ ಹಾಗೂ 100 ವಿಕೆಟ್
ಆಕ್ರಮಣಕಾರಿಯಾಗಿ ಬೌಲಿಂಗ್, ಬ್ಯಾಟಿಂಗ್ ಮಾಡುವ ಪೆರ್ರಿ ಹಲವು ದಾಖಲೆಗಳನ್ನು ಆಸ್ಟ್ರೇಲಿಯಾ ತಂಡದಲ್ಲಿ ಮಾಡಿದ್ದಾರೆ. ಟಿ20ಯಲ್ಲಿ 1,000 ರನ್ ಹಾಗೂ 100 ವಿಕೆಟ್ ಕಬಳಿಸಿದ ಆಸಿಸ್ನ ಮೊದಲ ಆಟಗಾರ್ತಿ. ವುಮೆನ್ಸ್ ಟೆಸ್ಟ್ ಪಂದ್ಯದಲ್ಲಿ 213* ರನ್ ಗಳಿಸಿ ದಾಖಲೆ ಬರೆದಿದ್ದು ಇನ್ನೂವರೆಗು ಯಾವ ಆಸಿಸ್ ಆಟಗಾರ್ತಿಯು ಇದನ್ನು ಬ್ರೇಕ್ ಮಾಡಿಲ್ಲ. ಏಕದಿನ ಪಂದ್ಯದಲ್ಲಿ 150 ವಿಕೆಟ್ ಪಡೆದ ಆಸಿಸ್ನ 3ನೇ ಪ್ಲೇಯರ್ ಎನಿಸಿಕೊಂಡಿದ್ದಾರೆ.
ಈ ಎಲ್ಲವುಗಳ ಜೊತೆಗೆ ಪೆರ್ರಿ ಇದ್ದ ಕಡೆ ಗೆಲುವು ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲ್ಲ. ಏಕೆಂದರೆ ಇಲ್ಲಿವರೆ ಪರ್ರಿ ಇಂಟರ್ನ್ಯಾಷನಲ್ ಹಾಗೂ ನ್ಯಾಷನಲ್ ಟೀಮ್ನಲ್ಲಿ ಹಲವಾರು ಕಪ್ಗಳನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸಿಸ್ ತಂಡಕ್ಕೆ 8 ವಿಶ್ವ ಚಾಂಪಿಯನ್ಶಿಪ್ಗಳು, ನ್ಯೂ ಸೌತ್ ವೇಲ್ಸ್ ತಂಡಕ್ಕೆ 11 WNCL ಚಾಂಪಿಯನ್ಶಿಪ್ಗಳು ಮತ್ತು 2 ಬಾರಿ WBBL ಚಾಂಪಿಯನ್ ಶಿಪ್ ಗೆಲ್ಲಲು ಪರ್ರಿಯ ಕೊಡುಗೆ ತುಂಬಾ ಇದೆ. ಇದಿಷ್ಟೇ ಅಲ್ಲದೇ ಇವರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿಗಳು ಒಲಿದಿವೆ. ಈಕೆಯ ಕ್ರೀಡೆಯ ರೋಲ್ ಮಾಡೆಲಿಂಗ್ನಿಂದ ಮಹಿಳೆಯರಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಲು ಕಾರಣವಾಗಿದೆ.
ಆಸಿಸ್ನ ಅಲಿಸ್ಸಾ ಹೀಲಿ ಮತ್ತು ಪೆರ್ರಿ ಶಾಲಾ ದಿನಗಳಿಂದಲೇ ಕ್ರಿಕೆಟ್ ಸೇರಿದಂತೆ ಸ್ಪೋರ್ಟ್ಸ್ನಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ಇವರಿಬ್ಬರು ಈಗಲೂ ಒಳ್ಳೆಯ ಸ್ನೇಹಿತರು ಆಗಿದ್ದಾರೆ.
ಕ್ರಿಕೆಟ್ಗೆ ಪಾದರ್ಪಣೆ ಮಾಡಿದ ಪೆಜ್
22 ಜುಲೈ 2007ರಲ್ಲಿ ಪೆರ್ರಿ ತನ್ನ 16 ವಯಸ್ಸಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಪಾದರ್ಪಣೆ ಮಾಡಿದರು. ಡೆಬ್ಯು ಪಂದ್ಯದಲ್ಲಿ 8 ಓವರ್ ಮಾಡಿ 37 ರನ್ ನೀಡಿ 2 ವಿಕೆಟ್ ಉರುಳಿಸಿದ್ದರು. ಜೊತೆಗೆ 9ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದು 20 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಆಸಿಸ್ 35 ರನ್ಗಳಿಂದ ಸೋತು ಹೋಗಿತ್ತು. ಅಲ್ಲದೇ 2010ರಲ್ಲಿ ಮೊಟ್ಟ ಮೊದಲ ಮಹಿಳಾ ಟ್ವಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಆಸಿಸ್ ಗೆದ್ದು ಫೈನಲ್ ಪ್ರವೇಶಿಸಲು ಈ ಪೆರ್ರಿಯೇ ಮುಖ್ಯ ಕಾರಣ. 2010-11ರಲ್ಲಿ ಮಹಿಳಾ ಆಶಸ್ ಟೆಸ್ಟ್ ಅನ್ನು ಇಂಗ್ಲೆಂಡ್ ವಿರುದ್ಧ ಗೆಲ್ಲಲು ಪೆರ್ರಿ ಬೌಲಿಂಗ್ ಕಾರಣವಾಗಿತ್ತು.
ಆಸಿಸ್ ತಂಡ ಗೆದ್ದ ಕಪ್ಗಳು
ಪೆಜ್ ಫ್ಯಾಮಿಲಿ ಬಗ್ಗೆ ನಿಮಗೇನು ಗೊತ್ತು?
ಈ ಎಲ್ಲ ವಿಶ್ವಕಪ್ ಗೆದ್ದ ಆಸಿಸ್ ತಂಡದಲ್ಲಿ ಪೆರ್ರಿ ಅತ್ಯಂತ ಅಮೋಘವಾದ ಕೊಡುಗೆ ನೀಡಿದ್ದಾರೆ. ಇಷ್ಟೇಲ್ಲ ಹೇಳಿದ ನಿಮಗೆ ಪೆರ್ರಿಯ ಕುಟುಂಬದ ಬಗ್ಗೆ ಹೇಳಿದರೆ ಎಲ್ಲ ಪೂರ್ಣ ಎನಿಸುತ್ತದೆ. ಎಲ್ಲಿಸ್ ಪೆರ್ರಿ ತಾಯಿ ಕ್ಯಾಥಿ ಇವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು ತಂದೆ ಮಾರ್ಕ್ ಗಣಿತ ಟೀಚರ್ ಆಗಿದ್ದಾರೆ. ಆಸ್ಟ್ರೇಲಿಯಾದ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರೊಂದಿಗೆ 2 ವರ್ಷ ಡೇಟಿಂಗ್ ಮಾಡಿದ್ದ ಪೆಜ್ 2015 ರಲ್ಲಿ ವಿವಾಹವಾದರು. ಆದರೆ 2020ರಲ್ಲಿ ವಿಚ್ಛೇದನ ಪಡೆದುಕೊಂಡು ಬೇರೆ ಬೇರೆ ಇದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಆರ್ಸಿಬಿಯಲ್ಲಿ ಆಡುತ್ತಿರುವ ಪೆರ್ರಿ WPL ಕಪ್ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಇಡೀ ಆರ್ಸಿಬಿ ತಂಡದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ್ದು ಫೈನಲ್ನಲ್ಲಿ ಒಳ್ಳೆಯ ಪ್ರದರ್ಶನ ತೋರುತ್ತಾರೆ ಎನ್ನುವುದು ಎಲ್ಲರ ಆಶಯವಾಗಿದೆ. ಪೆರ್ರಿ ಕಪ್ ಗೆದ್ದು ಕೊಡುವ ಹುರುಪು ಹೆಚ್ಚಿಸಿರುವುದು ಅಭಿಮಾನಿಗಳ ಕುತೂಹಲ ಇನ್ನಷ್ಟು ದುಪ್ಪಟ್ಟು ಮಾಡಿದೆ. ಏನೇ ಆಗಲಿ ನಾಳೆ ಡೆಲ್ಲಿ ಟೀಮ್ ವಿರುದ್ಧ ನಡೆಯುವ ಫೈನಲ್ ಪಂದ್ಯದ ಜೊತೆಗೆ ಎಲ್ಲಿಸ್ ಪೆರ್ರಿ ಅವರ ಬ್ಯಾಟಿಂಗ್, ಬೌಲಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ವಿಶೇಷ ವರದಿ; ಭೀಮಪ್ಪ, ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ