ಟೆಸ್ಟ್ನಲ್ಲೂ ಆಸ್ಟ್ರೇಲಿಯಾ ಚಾಂಪಿಯನ್
ರೋಹಿತ್ ಪಡೆಗೆ 209 ರನ್ಗಳ ಸೋಲು
ಭಾರತದ ಸೋಲಿಗೆ ಭಾರೀ ಆಕ್ರೋಶ
ಹೇಳಿಕೊಳ್ಳೋಕೆ ಇವ್ರು ಬಿಗ್ ಪ್ಲೇಯರ್ಸ್. ಭಾರತ ಮಾತ್ರವಲ್ಲ.. ಕ್ರಿಕೆಟ್ ಲೋಕಕ್ಕೆ ಇವರು ಸೂಪರ್ ಸ್ಟಾರ್ಗಳು. ಆದ್ರೆ ಇವ್ರ ಆಟವನ್ನು ಆ ದೇವರೇ ಮೆಚ್ಚಬೇಕು. ಟೀಮ್ ಇಂಡಿಯಾದ ಅಭಿಮಾನಿಗಳಂತೂ ಒಪ್ಪಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ಸೋಲಿಗೆ ಇವ್ರ ಅಟ್ಟರ್ಪ್ಲಾಫ್ ಶೋನೆ ಮೇನ್ ರೀಸನ್.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಮಕಾಡೆ ಮಲಗಿದೆ. ದಿ ಓವಲ್ ಮೈದಾನದಲ್ಲಿ ಆಡಿದ ಐದೂ ದಿನವೂ ಸತತ ಹಿನ್ನಡೆ ಅನುಭವಿಸಿದ ರೋಹಿತ್ ಪಡೆಯ ಚಾಂಪಿಯನ್ ಪಟ್ಟಕ್ಕೇರೋ ಕನಸು ಭಗ್ನವಾಗಿದೆ. ಆಸಿಸ್ ಕ್ಯಾಂಪ್ ಸಂತಸದ ಕಡಲಲ್ಲಿ ತೇಲ್ತಿದ್ರೆ, ಟೀಮ್ ಇಂಡಿಯಾದಲ್ಲಿ ಸೋಲಿಗೆ ಕಾರಣಗಳ ಹುಡುಕಾಟ ನಡೀತಾ ಇದೆ. ನೋ ಡೌಟ್ ಸೋಲಿಗೆ ಕಾರಣ ಹಲವಿವೆ.. ಮೇನ್ ರೀಸನ್ ಒಂದೇ.. ಅದೇ.., ಸೂಪರ್ ಸ್ಟಾರ್ಗಳ ಅಟ್ಟರ್ಪ್ಲಾಫ್ ಶೋ.
ನಾಯಕನದ್ದೇ ಹೀನಾಯ ಆಟ, ಇನ್ಯಾರಿಗ್ ಹೇಳೋದು?
ಕ್ಯಾಪ್ಟನ್ ಅಫ್ ದ ಶಿಪ್.. ಮುಂದೆ ನಿಂತು ತಂಡವನ್ನ ಮುನ್ನಡೆಸಬೇಕಾದ ರೋಹಿತ್ ಶರ್ಮಾನೇ ಓವಲ್ ಅಖಾಡದಲ್ಲಿ ಎಡವಿದ್ರು. ನಾಯಕನಾಗಿ ಜವಾಬ್ದಾರಿಯುತವಾಗಿ ಆಡಬೇಕಾಗಿದ್ದ ಹಿಟ್ಮ್ಯಾನ್ ಅಖಾಡದಲ್ಲಿ ನೀಡಿದ್ದು ಹೀನಾಯ ಪ್ರದರ್ಶನ. ಮೊದಲ ಇನ್ನಿಂಗ್ಸ್ನಲ್ಲಿ 15 ರನ್ಗಳಿಗೆ ಆಟ ನಿಲ್ಲಿಸಿದ್ರೆ, 2ನೇ ಇನ್ನಿಂಗ್ಸ್ನಲ್ಲಿ ಒಳ್ಳೆ ಸ್ಟಾರ್ಟ್ ಪಡೆದುಕೊಂಡು 43 ರನ್ಗಳಿಸಿದ್ರು. ಹೀಗಿದ್ದೂ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ಎಡವಿದರು.
ರೆಡ್ಬಾಲ್ನಲ್ಲಿ ತಡವರಿಸಿದ ಗಿಲ್
ಐಪಿಎಲ್ನಲ್ಲಿ ಶತಕದ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದ ಶುಭ್ಮನ್ ಗಿಲ್, ರೆಡ್ಬಾಲ್ ಎದುರಿಸೋಕೆ ಪರದಾಡಿದ್ರು. 2ನೇ ಇನ್ನಿಂಗ್ಸ್ನಲ್ಲಿ ಕಾಂಟ್ರವರ್ಸಿಯಲ್ ಆಗಿ ಔಟಾದ್ರು ನಿಜ. ಆದ್ರೆ ಮೊದಲ ಇನ್ನಿಂಗ್ಸ್ನಲ್ಲಿ ಏನ್ ಮಸ್ತ್ ಆಟ ಆಡ್ಲಿಲ್ಲ. ಬಾಲ್ ಜಡ್ಜ್ ಮಾಡೋಕೆ ತಿಣುಕಾಡಿದ ಶುಭ್ಮನ್, ತಾವೇ ವಿಕೆಟ್ ಗಿಫ್ಟ್ ಕೊಟ್ಟರು.
ಆಸಿಸ್ ಬೋನಿಗೆ ಸಲೀಸಾಗಿ ಬಿದ್ದ ಕೊಹ್ಲಿ
ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆ ದುಪ್ಪಟ್ಟಿತ್ತು. ಆದ್ರೆ ಆಗಿದ್ದು ಮತ್ತದೇ ನಿರಾಸೆ. ಮೊದಲ ಇನ್ನಿಂಗ್ಸ್ನಲ್ಲಿ 14 ರನ್ಗಳಿಗೆ ಪೆವಿಲಿಯನ್ ಸೇರಿದ ವಿರಾಟ್, 2ನೇ ಇನ್ನಿಂಗ್ಸ್ನಲ್ಲಿ ಕಮಾಲ್ ಮಾಡೋ ಸೂಚನೆ ನೀಡಿದ್ರು. ಆದ್ರೆ 5ನೇ ದಿನ ಆರಂಭದಲ್ಲೇ ನಿರೀಕ್ಷೆ ಠುಸ್ ಪಟಾಕಿಯಾಯ್ತು. ಆಸ್ಟ್ರೇಲಿಯಾದ ಬೋನಿಗೆ ಸಲೀಸಾಗಿ ಬಿದ್ದ, ಕೊಹ್ಲಿ ಸೈಲೆಂಟಾಗಿ ಪೆವಿಲಿಯನ್ ಸೇರಿಕೊಂಡರು.
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಏನಪ್ಪಾ ನಿನ್ನ ಆಟ
ನಾವಲ್ಲ.. ಸೋಷಿಯಲ್ ಮೀಡಿಯಾಗಳಲ್ಲಿ ಫ್ಯಾನ್ಸ್ ಹೇಳ್ತಿರೋ ಮಾತಿದು.. ಟೆಸ್ಟ್ ಸ್ಪೆಷಲಿಸ್ಟ್ ಅನ್ನೋ ಟ್ಯಾಗ್ಲೈನ್ ಇಟ್ಟುಕೊಂಡಿರೋ ಚೇತೇಶ್ವರ್ ಪೂಜಾರ ಅಲ್ಟಿಮೇಟ್ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ್ರು. ಹೋದ ಪುಟ್ಟ ಬಂದ ಪುಟ್ಟ ಎಂಬ ಮಾತಿನಂತೆ ಪ್ಯಾಡ್ ಕಟ್ಟಿ ಕಣಕ್ಕಿಳಿದಷ್ಟೇ ವೇಗವಾಗಿ ಪೆವಿಲಿಯನ್ಗೆ ವಾಪಾಸ್ಸಾದ್ರು.
ನಿಮ್ಮ ಆಟ ಸಾಕಾಯ್ತು
ಈ ಸೋಲಿನ ಬಳಿಕವಾದ್ರೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಚ್ಚೆತ್ತುಕೊಳ್ಳಬೇಕಿದೆ. ಶುಭಮನ್ ಗಿಲ್ ಇನ್ನೂ ಯಂಗ್ಪ್ಲೇಯರ್, ಟ್ಯಾಲೆಂಟ್ ಕೂಡ ಇದೆ ಅವರು ತಂಡಕ್ಕೆ ಬೇಕು. ಆದ್ರೆ ಉಳಿದ ಸೀನಿಯರ್ ಆಟಗಾರರ ಕಥೆ ಏನು? ತಂಡಕ್ಕೆ ಅನುಭವಿಗಳ ಅಗತ್ಯವಿರೋದೆ ಬಿಗ್ಮ್ಯಾಚ್, ಬಿಗ್ಸ್ಟೇಜ್ನಲ್ಲಿ ಆಡ್ತಾರೆ ಅಂತ. ಆದ್ರೆ ಐಸಿಸಿ ಇವೆಂಟ್ಗಳಲ್ಲಿ ಈ ಅನುಭವಿಗಳೇ ಮಕಾಡೆ ಮಲಗ್ತಿದ್ದಾರೆ. ಹೀಗಾಗಿ, ಟೀಮ್ ಇಂಡಿಯಾಗೆ ಸರ್ಜರಿ ಮಾಡೋಕೆ ಇದೇ ಬೆಸ್ಟ್ ಟೈಂ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್