ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮಗನ ಮದುವೆ
ಅನಂತ್ ಅಂಬಾನಿ, ರಾಧಿಕಾ ಮದುವೆಗೆ ಸೆಲೆಬ್ರಿಟಿಗಳ ದಂಡೇ ಆಗಮನ
ಜಾನ್ ಸೆನಾಗೆ ಜಾನ್ ಬಾಬು, ಜಾನ್ ಕಾಕಾ ಎಂದು ಕರೆದ ಪಾಪರಾಜಿಗಳು
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು. ಇಂದು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಸಂಜೆಯಿಂದಲೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯ ಮೆರವಣಿಗೆ ಆರಂಭಗೊಂಡಿದೆ.
ಇದನ್ನೂ ಓದಿ: ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?
ಈಗಾಗಲೇ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮದುವೆಗೆ ದೇಶ, ವಿದೇಶಗಳಿಂದ ಗಣ್ಯರು ಮುಂಬೈಗೆ ಆಗಮಿಸುತ್ತಿದ್ದಾರೆ. ಜಾಗತಿಕ ಕಂಪನಿಗಳ ಎಂಡಿ, ಸಿಇಓಗಳು ಕೂಡ ಆಗಮನವಾಗಿದೆ. ಟೋನಿ ಬ್ಲೇರ್, ಬೋರಿಸ್ ಜಾನ್ಸನ್, ಜಾನ್ ಕೆರಿ, ಕಿಮ್ ಕರ್ದಿಶಾನಾ, ಸಲ್ಮಾನ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ಆಂಧ್ರದ ಡಿಸಿಎಂ ಪವನ್ ಕಲ್ಯಾಣ್, ರಾಮಚರಣ್, ನಟ ಯಶ್ ಹಾಗೂ ರಾಧಿಕಾ ಪಂಡಿತ್, ಸಿಎಂ ಮಮತಾ ಬ್ಯಾನರ್ಜಿ, ಲಾಲೂ ಪ್ರಸಾದ್ ಯಾದವ್ ಕುಟುಂಬ, ಕಿಮ್ ಕರ್ದಾಶಿಯಾನ್ ಮತ್ತು ಕ್ಲೋಯ್ ಕಾರ್ಡಶಿಯಾನ್, ಪ್ರಿಯಾಂಕಾ ಚೋಪ್ರಾ, ನೆಕ್ ಜೋನ್ಸ್ ದಂಪತಿ, ಐಶ್ವರ್ಯಾ ರೈ-ಬಚ್ಚನ್, ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆಗೆ ಆಗಮಿಸಿದ್ದಾರೆ.
John Cena is in India attending the wedding of the #anantambaniwedding
WWE रेसलर जॉन सीना, अनंत-राधिका की शादी के लिए मुंबई पहुंचे …#JohnCena
pic.twitter.com/5s7a3nZRYH pic.twitter.com/26RiCooQES— abhishek giri (@Abhishekgiri220) July 12, 2024
ಇನ್ನು, ಡಬ್ಲ್ಯುಡಬ್ಲ್ಯುಇ (WWE) ಐಕಾನ್, 16 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಲೆಜೆಂಡರಿ ಜಾನ್ ಸೆನಾ ಅವರು ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಗಾಗಿ ಮುಂಬೈಗೆ ಆಗಮಿಸಿದ್ದಾರೆ. ಇಂದು ಮಧ್ಯಾಹ್ನ ಮುಂಬೈಗೆ ಆಗಮಿಸಿದ ಜಾನ್ ಸೆನಾ ಅವರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬೂದು ಬಣ್ಣದ ಟೀ ಶರ್ಟ್, ಟ್ಯಾನ್ ಶಾರ್ಟ್ಸ್ ಮತ್ತು ಕ್ಯಾಪ್ ಧರಿಸಿಕೊಂಡು ಬಂದಿದ್ದ ಜಾನ್ ಸೆನಾ ಅವರನ್ನು ನೋಡಿದ ಪಾಪರಾಜಿಗಳು ಜೋರಾಗಿ ಕೂಗಾಡ ತೊಡಗಿದರು.
ಜಾನ್ ಸೆನಾ ತಮ್ಮ ಲಗೇಜ್ ಬ್ಯಾಗ್ ಅನ್ನು ಕಾರಿನಲ್ಲಿ ಇಡುತ್ತಿದ್ದಾಗ ಪಾಪರಾಜಿಗಳು ಜಾನ್ ಸೆನಾ ಅಂತ ಕರೆಯುತ್ತಿದ್ದಂತೆ ಮುಗುಳ್ನಗುತ್ತಾ ಕೈ ಬೀಸಿದ್ದಾರೆ. ಇದೇ ವೇಳೆ ಪಾಪರಾಜಿಗಳು ತಮಾಷೆಗಾಗಿ ‘ಜಾನ್ ಬಾಬು’ ಮತ್ತು ‘ಜಾನ್ ಕಾಕಾ’ ಎಂದು ಕರೆದಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಜಾನ್ ಸೆನಾ ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಟಾಕ್ಸಿಕ್ ಚಿತ್ರತಂಡ ಯಾವುದೇ ರೀತಿಯಲ್ಲಿ ಸ್ಪಷ್ಟನೆ ಕೊಟ್ಟಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ