newsfirstkannada.com

ಶಿಯೋಮಿ ಪರಿಚಯಿಸಿದೆ 2 ಆಕರ್ಷಕ ಸ್ಮಾರ್ಟ್​ಟಿವಿ.. 25 ಸಾವಿರಕ್ಕೆ ಖರೀದಿಸಬಹುದು ನೋಡಿ!

Share :

Published August 29, 2024 at 7:46am

    ಶಿಯೋಮಿ ಎಕ್ಸ್​ ಪ್ರೊ QLED ಸ್ಮಾರ್ಟ್​ಟಿವಿ ಹೇಗಿದೆ ಗೊತ್ತಾ?

    3 ಆಯ್ಕೆಗಳಲ್ಲಿ ಸ್ಮಾರ್ಟ್​​ಟಿವಿ ರಿಲೀಸ್​​.. ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

    ಗ್ರಾಹಕರಿಗಾಗಿ ರಿಯಾಯಿತಿ ಬೆಲೆಗೂ ಖರೀದಿಸುವ ಅವಕಾಶ ತೆರೆದಿಟ್ಟ ಶಿಯೋಮಿ

ಶಿಯೋಮಿ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡುವ ಸದಸ್ಯ. ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಶಿಯೋಮಿ ಆಗಾಗ ಏನಾದರೊಂದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ಎರಡು ಹೊಸ ಸ್ಮಾರ್ಟ್​ಟಿವಿಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸ್ಮಾರ್ಟ್​ಟಿವಿಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ.

ಶಿಯೋಮಿ ಎಕ್ಸ್​ ಪ್ರೊ QLED ಮತ್ತು ಶಿಯೋಮಿ ಸ್ಮಾರ್ಟ್​ ಟಿವಿ X ಸರಣಿಯನ್ನು ಪರಿಚಯಿಸಿದೆ. ಎರಡು ಸರಣಿ ಸ್ಮಾರ್ಟ್​ಟಿವಿಯನ್ನು ಮೂರು ವಿಭಿನ್ನ ಗಾತ್ರಗಳಲ್ಲಿ ಪರಿಚಯಿಸಿದೆ. 43 ಇಂಚಿನ ಪ್ರೊ ಸರಣಿಯ ಸ್ಮಾರ್ಟ್​​ಟಿವಿ 29,999 ರೂಪಾಯಿಗೆ ಪರಿಚಯಿಸಿದೆ. ಇನ್ನು ಶಿಯೋಮಿ ಸ್ಮಾರ್ಟ್​ ಟಿವಿ X ಸರಣಿಯು 24,999 ರೂಪಾಯಿ ಆರಂಭಿಕ ಬೆಲೆಗೆ ಪರಿಚಯಿಸಿದೆ.

ಸ್ಮಾರ್ಟ್​ಟಿವಿಗಳ ವಿಶೇಷತೆ:

ಶಿಯೋಮಿ ಎಕ್ಸ್​ ಪ್ರೊ QLED ಸ್ಮಾರ್ಟ್​​ಟಿವಿ 43 ಇಂಚಿನ 55 ಇಂಚಿನ ಮತ್ತು 65 ಇಂಚಿನಲ್ಲಿ ಬರುತ್ತದೆ. X ಸರಣಿಯು 43 ಇಂಚಿನಲ್ಲಿ, 50 ಇಂಚಿನಲ್ಲಿ ಬರುತ್ತದೆ.

ಇದನ್ನೂ ಓದಿ: ಶಾಕ್​ ಕೊಟ್ಟ ಏರ್​ಟೆಲ್​​! ವಿಂಕ್​​ ಮ್ಯೂಸಿಕ್​ ಸ್ಥಗಿತ ಬಹುತೇಕ ಖಚಿತ.. ಉದ್ಯೋಗಿಗಳ ಗತಿಯೇನು?

ಶಿಯೋಮಿ ಎಕ್ಸ್​ ಪ್ರೊ QLED 43 ಇಂಚಿನ ಟಿವಿ 29,999 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 55 ಇಂಚಿನ ರೂಪಾಂತರವು 44,999 ರೂಪಾಯಿಗೆ ಸಿಗಲಿದೆ. 65 ಇಂಚಿನ ಟಿವಿ ಬೆಲೆ 62,999 ರೂಪಾಯಿಗೆ ಸಿಗುತ್ತಿದೆ.

ಇದನ್ನೂ ಓದಿ: Gold Rate: ಚಿನ್ನದ ಜೊತೆಗೆ ಬೆಲೆ ಹೆಚ್ಚಿಸಿಕೊಂಡ ಬೆಳ್ಳಿ.. ಬಂಗಾರ ಬಲು ದುಬಾರಿ

X ಸರಣಿಯನ್ನು ಗಮನಿಸುವುದಾದರೆ 43 ಇಂಚಿನ ಟಿವಿ 24,999 ರೂಪಾಯಿಂದ ಪ್ರಾರಂಭವಾಗುತ್ತದೆ. 50 ಇಂಚಿನ ಟಿವಿ 31,999 ರೂಪಾಯಿ ಮತ್ತು 55 ಇಂಚಿನ ಟಿವಿ 35,999 ರೂಪಾಯಿಗೆ ಸಿಗಲಿದೆ.

ಖರೀದಿಸಲು ಬಯಸುವ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​​ ಕಾರ್ಡ್​ ಮೂಲಕ 2 ಸಾವಿರ ರೂಪಾಯಿ ರಿಯಾಯಿತಿ ನೀಡುತ್ತದೆ. ಆಗಸ್ಟ್​ 30ರಿಂದ ಆನ್​ಲೈನ್​ ಮಾರಾಟ ಮಳಿಗೆ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಯೋಮಿ ಪರಿಚಯಿಸಿದೆ 2 ಆಕರ್ಷಕ ಸ್ಮಾರ್ಟ್​ಟಿವಿ.. 25 ಸಾವಿರಕ್ಕೆ ಖರೀದಿಸಬಹುದು ನೋಡಿ!

https://newsfirstlive.com/wp-content/uploads/2024/08/Xioami-smart-Tv.jpg

Load More