newsfirstkannada.com

ಅತೀ ವೇಗ.. 25 ಕುರಿಗಳನ್ನು ದಾರುಣವಾಗಿ ಕೊಂದ ಟ್ರಕ್ ಚಾಲಕ -ಯಾದಗಿರಿಯಲ್ಲಿ ವಿದ್ರಾವಕ ಘಟನೆ

Share :

Published September 16, 2023 at 12:09pm

  ಬೆಳ್ಳಂಬೆಳಗ್ಗೆ ಕುರಿ ಮೇಯಿಸಲು ಹೋಗುತ್ತಿದ್ದ ಕುರಿಗಾಯಿಗಳು

  ಯಮರಾಯನಾಗಿ ರಸ್ತೆಯಲ್ಲಿ ಬಂದ ಟ್ರಕ್​ಗೆ 25 ಕುರಿಗಳು ಬಲಿ

  ನಾಲ್ವರು ಕುರಿಗಾಹಿಗಳಿಗೆ ಸೇರಿದ್ದ ಸಾವನ್ನಪ್ಪಿರುವ ಕುರಿಗಳು

ಯಾದಗಿರಿ: ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಕುರಿ ಮಂದೆ ಮೇಲೆ ಟ್ರಕ್​ವೊಂದು ಹರಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಗರದ ಹೊರ ಹೊಲಯದ ಚಿತ್ತಾಪುರ ರಸ್ತೆಯಲ್ಲಿ ನಡೆದಿದೆ.

ಇದನ್ನು ಓದಿ: ಇನ್​​ಸ್ಟಾದಲ್ಲಿ ಪರಿಚಯವಾದ ಬಾಯ್​ಫ್ರೆಂಡ್​.. ಮೋಸದ ಜಾಲಕ್ಕೆ ಬಿದ್ದು ಜೀವ ತೆಗೆದುಕೊಂಡ ಯುವತಿ

ಕುರಿಗಾಯಿಗಳು ಬೆಳಗಿನ ಜಾವದಲ್ಲಿ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದರು. ಆಗ ವೇಗವಾಗಿ ಬಂದ ಟ್ರಕ್ ಕುರಿ ಮಂದೆ ಮೇಲೆ ಹರಿದಿದೆ. ಪರಿಣಾಮ 25 ಕುರಿಗಳು ಮೃತಪಟ್ಟಿವೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಟ್ರಕ್​ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಜಿಲ್ಲೆಯ ಶಹಾಪುರ‌ ತಾಲೂಕಿನ ನಾಗನಟಗಿ ಗ್ರಾಮದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ. ಈ ಸಂಬಂಧ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತೀ ವೇಗ.. 25 ಕುರಿಗಳನ್ನು ದಾರುಣವಾಗಿ ಕೊಂದ ಟ್ರಕ್ ಚಾಲಕ -ಯಾದಗಿರಿಯಲ್ಲಿ ವಿದ್ರಾವಕ ಘಟನೆ

https://newsfirstlive.com/wp-content/uploads/2023/09/YDR_SHIPS.jpg

Load More