newsfirstkannada.com

ಸಿಎಂ ಸಿದ್ದುಗೆ ಭಾರೀ ಮುಖಭಂಗ; ಮೈಸೂರಲ್ಲಿ ಯದುವೀರ್​​ಗೆ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯ

Share :

Published June 4, 2024 at 2:28pm

  ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿಗೆ ಭರ್ಜರಿ ಜಯ

  ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್‌ ಒಡೆಯರ್​ಗೆ ಭಾರೀ ಗೆಲುವು

  ಕಾಂಗ್ರೆಸ್​ ಸ್ಥಳೀಯ ನಾಯಕ ಎಂ. ಲಕ್ಷ್ಮಣಗೆ ಅವರಿಗೆ ಹೀನಾಯ ಸೋಲು

ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಾದ ಮೈಸೂರಿನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಗೆದ್ದು ಬೀಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಸಿಎಂ ಸಿದ್ದರಾಯ್ಯನವರ ತವರು ಜಿಲ್ಲೆ ಮೈಸೂರು. ಈ ಕ್ಷೇತ್ರದಿಂದ ರಾಜವಂಶಸ್ಥರು ಕಣಕ್ಕೆ ಇಳಿದಿದ್ದ ಕಾರಣ ಇಡೀ ರಾಜ್ಯಾದ್ಯಂತ ಭಾರೀ ಗಮನ ಸೆಳೆದಿತ್ತು. ಕಾಂಗ್ರೆಸ್‌ನಿಂದ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರ ಕೂಡ ಇತ್ತು.

ಇನ್ನು, ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿದ್ದ ಕಾರಣ ಮೈಸೂರಿನಿಂದ ಕಾಂಗ್ರೆಸ್​ ಸ್ಥಳೀಯ ನಾಯಕ ಎಂ. ಲಕ್ಷ್ಮಣಗೆ ಅವಕಾಶ ಮಾಡಿಕೊಡಲಾಗಿತ್ತು. ಕ್ಷೇತ್ರದಲ್ಲಿ ಒಕ್ಕಲಿಗರು ಜಾಸ್ತಿ ಇದ್ದ ಕಾರಣ ಕಾಂಗ್ರೆಸ್​ ಗೆಲ್ಲಬಹುದು ಎಂದು ಭಾವಿಸಿತ್ತು.

ಸದ್ಯ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರಿಗೆ 714906 ವೋಟ್​ಗಳು ಬಿದ್ದಿವೆ. ಎಂ. ಲಕ್ಷ್ಮಣ ಅವರು 604352 ಮತಗಳು ಪಡೆದುಕೊಂಡಿದ್ದಾರೆ. ಯದುವೀರ್​ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಭ್ಯರ್ಥಿಗೆ ಬಿಗ್ ಶಾಕ್​.. ಬೆಂಗಳೂರಿಂದ ಬಂದು ತುಮಕೂರಲ್ಲಿ ಗೆದ್ದ ವಿ.ಸೋಮಣ್ಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದುಗೆ ಭಾರೀ ಮುಖಭಂಗ; ಮೈಸೂರಲ್ಲಿ ಯದುವೀರ್​​ಗೆ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯ

https://newsfirstlive.com/wp-content/uploads/2024/03/YADUVEER-1.jpg

Load More