/newsfirstlive-kannada/media/post_attachments/wp-content/uploads/2024/09/YAMAHA-ZR125.jpg)
ಯಮಹಾ ಇಂಡಿಯಾ RayZR 125 ಸ್ಟ್ರೀಟ್ ರ್ಯಾಲಿ ನವೀಕರಿಸಿದ ಆವೃತ್ತಿ ಹೊರತಂದಿದೆ. ಗ್ರಾಹಕರಿಗಾಗಿ ಆಕರ್ಷಕವಾಗಿ ಪರಿಚಯಿಸಿದೆ. ಹೊಸ ಲುಕ್ನಲ್ಲಿ ಮಾರುಕಟ್ಟೆಗೆ ಬಂದಿರುವ ನೂತನ ಸ್ಕೂಟರ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಯಮಹಾ RayZR 125 ನೂತನ ನವೀಕರಣಗೊಂಡ ಸ್ಕೂಟರ್ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಒಳಗೊಂಡಿದೆ. ಇದರಲ್ಲಿ ವೈ-ಕನೆಕ್ಟ್ ಸ್ಮಾರ್ಟ್ರ್ಫೋನ್ ಅಪ್ಲಿಕೇಶನ್ನೊಂದಿಗೆ ಸಂಪರ್ಕಿಸುವ ಆಯ್ಕೆ ಇದೆ.
ಇದನ್ನೂ ಓದಿ: ಆ್ಯಪಲ್ ಪ್ರಿಯರಿಗೆ ಶಾಕ್.. ಐಫೋನ್ 16 ಪ್ರೊದಲ್ಲಿ ಕಾಣಿಸಿಕೊಂಡ ಸಮಸ್ಯೆ!
ಯಮಹಾ RayZR 125 ಸ್ಟ್ರೀಟ್ ರ್ಯಾಲಿಯ ಮೆಕ್ಯಾನಿಕಲ್ ಸೆಟಪ್ ಒಂದೇ ಆಗಿದೆ. ಇದು 8ಬಿಹೆಚ್ಪಿ ಮತ್ತು 10.3ಎನ್ಎಮ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಸ್ಮಾರ್ಟ್ಮೋಟಾರ್ ಜನರೇಟರ್ ಒಳಗೊಂಡಿದೆ.
ಇದನ್ನೂ ಓದಿ: iPhone 13: ಬರೀ ₹38 ಸಾವಿರ ರೂಪಾಯಿಗೆ ಐಫೋನ್ 13 ಖರೀದಿಸಿ.. ಈ ಆಫರ್ ಮಿಸ್ ಮಾಡಬೇಡಿ
ಅಂದಹಾಗೆಯೇ ಯಮಹಾ RayZR 125 ಸ್ಟ್ರೀಟ್ ರ್ಯಾಲಿ ಸೈಬರ್ ಗ್ರೀನ್ ಬಣ್ಣದ ಸ್ಕೀಮ್ ಹೊಂದಿದೆ. 98,130 ರೂಪಾಯಿಗೆ ಖರೀದಿಸಲು ಸಿಗುತ್ತಿದೆ. ಸಿಟಿಗಳಲ್ಲಿ ಈ ಸ್ಕೂಟರ್ ಬಳಕೆಗೆ ಹೇಳಿ ಮಾಡಿಸಿದ ಹಾಗಿದೆ. ಅದಕೆಂದೇ ಇದಕ್ಕೆ ಸ್ಟ್ರೀಟ್ ರ್ಯಾಲಿ ಎಂದು ಕಂಪನಿ ಹೆಸರಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ