ಯಂಗ್ ಬ್ಯಾಟರ್ ಲೈಫಲ್ಲಿ ಊಹಿಸಲಾಗದ ಘಟನೆ ಇದು
ಇಂಗ್ಲೆಂಡ್ ಮಣಿಸಿ ಕಪ್ಗೆ ಮುತ್ತಿಕ್ಕಿದ್ದ ಯುವ ಪ್ಲೇಯರ್ಸ್
IPLನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಯಂಗ್ಬ್ಯಾಟರ್
ಯಶ್ ಧುಲ್ 2 ವರ್ಷಗಳ ಹಿಂದೆ ಈ ಹೆಸರು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯ ಬಾಯಲ್ಲಿ ಪ್ರತಿಧ್ವನಿಸಿತ್ತು. ಇಡೀ ದೇಶಕ್ಕೆ ದೇಶವೇ ಯಶ್ ಧುಲ್ ಹೆಸರನ್ನ ಕೊಂಡಾಡಿತ್ತು. ಇಂತಹ ಯಂಗ್ಬ್ಯಾಟರ್ ಲೈಫಲ್ಲಿ ಊಹಿಸಲಾಗದ ಘಟನೆ ನಡೆದು ಹೋಗಿದೆ. ಸಣ್ಣ ವಯಸ್ಸಲ್ಲೆ ದೊಡ್ಡ ಯುದ್ಧ ಎದುರಿಸಿ ಧುಲ್ ಗೆದ್ದಿದ್ದಾರೆ. ಅಷ್ಟಕ್ಕೂ ಆ ಯುದ್ಧ ಏನು ಅಂತೀರಾ?.
ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್?
ಕ್ರಿಕೆಟ್ ಈ ಮೂರಕ್ಷರದ ಜಂಟಲ್ಮೆನ್ ಗೇಮ್ನಲ್ಲಿ ಏನಿಲ್ಲ ಹೇಳಿ?. ಆನ್ಫೀಲ್ಡ್ನಲ್ಲಿ ನಡೆಯುವ ಕಾಳಗ ಅದ್ಯಾವ, ಯುದ್ಧಭೂಮಿಯ ಸೈನಿಕರ ಹೋರಾಟಕ್ಕೂ ಕಮ್ಮಿ ಇರಲ್ಲ. ಇದು ಬರೀ ಆನ್ ಫೀಲ್ಡ್ ಕಥೆ ಅಷ್ಟೇ ಅಲ್ಲ. ಆಫ್ ದಿ ಫೀಲ್ಡ್ನಲ್ಲಿ ಇಂತಹ ಅದೆಷ್ಟೋ ಮೈ ಜುಮ್ ಅನ್ನಿಸೋ ಹೋರಾಟದ ಕಥೆಗಳಿವೆ. ಇದೀಗ ಆ ಲಿಸ್ಟ್ಗೆ ಆ್ಯಂಗ್ರಿ ಯಂಗ್ಮ್ಯಾನ್ ಯಶ್ ಧುಲ್ ಸೇರಿಕೊಂಡಿದ್ದಾರೆ.
ಸರ್ಜರಿಗೆ ಒಳಗಾದ ಚಾಂಪಿಯನ್ ಕ್ಯಾಪ್ಟನ್ ಯಶ್ ಧುಲ್..!
ಇದು ಸುವರ್ಣ ಘಳಿಗೆ.. ಭಾರತ ತಂಡ ಮತ್ತೊಮ್ಮೆ ತಲೆಎತ್ತಿ ಮೆರೆದಾಡಿದ ಅವಿಸ್ಮರಣೀಯ ಕ್ಷಣ. ಇಡೀ ದೇಶಕ್ಕೆ ದೇಶವೆ ಹೆಮ್ಮೆಪಟ್ಟ ಮಹಾಕ್ಷಣ. 2022ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದು ಭಾರತ ತಂಡ ಚರಿತ್ರೆ ಸೃಷ್ಟಿಸಿತ್ತು. ಈ ಐತಿಹಾಸಿಕ ಕ್ಷಣದ ಸೃಷ್ಟಿಗೆ ಕಾರಣ ಕ್ಯಾಪ್ಟನ್ ಯಶ್ ಧುಲ್. ಬಲಿಷ್ಠ ಇಂಗ್ಲೆಂಡ್ ತಂಡವನ್ನ ಫೈನಲ್ನಲ್ಲಿ ಮಣ್ಣು ಮುಕ್ಕಿಸಿ ಭಾರತದ ಕೀರ್ತಿ ಪತಾಕೆಯನ್ನ ಜಗದಗಲಕ್ಕೆ ಪಸರಿಸುವಂತೆ ಮಾಡಿದ್ದು ಇದೇ ಯಶ್ ಧುಲ್.
2 ವರ್ಷಗಳ ಹಿಂದೆ ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟ ಯಶ್ ಧುಲ್ ನಾಯಕತ್ವಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಎಂಬೆಲ್ಲಾ ಮಾತುಗಳು ಕೇಳಿ ಬಂದ್ವು. ಆದ್ರೆ ಅಸಲಿಗೆ ಹಾಗೇ ಆಗಲೇ ಇಲ್ಲ. 2022 ರಲ್ಲಿ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದ ಯಶ್ ಧುಲ್ ಪ್ರಶಂಸೆ ಗಳಿಸಿದಷ್ಟೇ ವೇಗವಾಗಿ ಕಣ್ಮರೆಯಾದ್ರು. ಡೊಮೆಸ್ಟಿಕ್ ಕ್ರಿಕೆಟ್, ಐಪಿಎಲ್ನಲ್ಲಿ ಯಂಗ್ಬ್ಯಾಟರ್ ಕಾಣಿಸಿಕೊಂಡಿದ್ದು ಬಿಟ್ರೆ ಬೇರೆಲ್ಲೂ ಕಾಣಲಿಲ್ಲ. ಈ ಕಣ್ಮರೆ ಹಿಂದಿನ ಕಾರಣ ಹಾರ್ಟ್ ಹೋಲ್ ಸರ್ಜರಿ..!
ಹುಟ್ಟಿನಿಂದಲೇ ಯಶ್ ಧುಲ್ ಹಾರ್ಟ್ನಲ್ಲಿ ಹೋಲ್..!
ವಿಶ್ವ ವಿಜೇತ ನಾಯಕ ಯಶ್ ಧುಲ್ಗೆ ಹುಟ್ಟಿನಿಂದಲೇ ಹಾರ್ಟ್ನಲ್ಲಿ ಹೋಲ್ ಇತ್ತಂತೆ. ಇದು ಗೊತ್ತಾಗಿದ್ದಯ ಕೆಲ ತಿಂಗಳ ಹಿಂದೆ ಮಾತ್ರ. ಎನ್ಸಿಎಯಲ್ಲಿ ಕೆಲ ತಿಂಗಳ ಹಿಂದೆ ಕ್ಯಾಂಪ್ ಏರ್ಪಡಿಸಲಾಗಿತ್ತು. ಈ ಕ್ಯಾಂಪ್ನಲ್ಲಿ ವೇಳೆ ಯಶ್ ಧುಲ್ಗೆ ರೂಟೀನ್ ಚೆಕಪ್ ಮಾಡಲಾಗಿತ್ತು. ಈ ವೇಳೆ ಧುಲ್ ಹೃದಯದಲ್ಲಿ ಹೋಲ್ ಇರೋದು ಗೊತ್ತಾಗಿದೆ. ಬಳಿಕ ಎನ್ಸಿಎ ವೈದ್ಯರ ಸಲಹೆ ಮೇರೆಗೆ ಯಶ್ ಧುಲ್ ಡೆಲ್ಲಿಯಲ್ಲಿ ಹಾರ್ಟ್ ಹೋಲ್ ಸರ್ಜರಿಗೆ ಒಳಗಾಗಿದ್ದಾರೆ.
‘ಯಶ್ ಧುಲ್ ಸರ್ಜರಿಗೆ ಒಳಗಾಗಿದ್ದಾರೆ’
ಇದು ಯಾವುದು ಗಂಭೀರವಲ್ಲ. ಹೃದಯದ ರಂಧ್ರವು ಕೆಲವರಿಗೆ ಹುಟ್ಟಿನಿಂದಲೇ ಕಾಣಿಸಿಕೊಳ್ಳುತ್ತೆ. ಎನ್ಸಿಎ ತಂಡವು ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿತ್ತು. ಯಶ್ ಧುಲ್ ದೆಹಲಿಯಲ್ಲಿ ಸರ್ಜರಿಗೆ ಒಳಗಾಗಿದ್ದು, ಈ ಅವಧಿಯಲ್ಲಿ ಬಿಸಿಸಿಐ ಅವರ ಮೇಲೆ ಸಂಪೂರ್ಣ ನಿಗಾ ಇರಿಸಿತ್ತು.
ವಿಜಯ್ ಧುಲ್, ಯಶ್ ಧುಳ್ ತಂದೆ
ಮತ್ತೆ ಅಖಾಡಕ್ಕೆ ಎಂಟ್ರಿಕೊಟ್ಟ ಡೆಲ್ಲಿ ‘ಡೇರ್ ಡೆವಿಲ್’
ಹಾರ್ಟ್ ಹೋಲ್ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಯಶ್ ಧುಳ್ ಸದ್ಯ ಸಂಪೂರ್ಣ ರಿಕವರಿ ಆಗಿದ್ದಾರೆ. ಪ್ಯಾಡ್ ಕಟ್ಟಿ ಕ್ರಿಕೆಟ್ ಅಂಗಳಕ್ಕೆ ಧುಮುಕಿದ್ದಾರೆ. ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಅಂಡರ್-19 ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಕಾಣಿಸಿಕೊಂಡಿದ್ದು, ಮತ್ತೆ ಸ್ಟ್ರಾಂಗ್ ಕಮ್ಬ್ಯಾಕ್ ಮಾಡುವ ಪಣ ತೊಟ್ಟಿದ್ದಾರೆ.
ಇದನ್ನೂ ಓದಿ: ಕನ್ನಡಿಗ KL ರಾಹುಲ್ಗೆ ಬಿಗ್ ಶಾಕ್.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?
ಏರಿಳಿತಗಳು ಸಹಜ. ಅದನ್ನ ನೀವು ಹೇಗೆ ತೆಗೆದುಕೊಳ್ಳುತ್ತೀರಿ ಹಾಗೂ ಹೇಗೆ ಮಾನಸಿಕವಾಗಿ ಸಿದ್ಧರಾಗುತ್ತೀರಿ ಎಂಬುದು ಮುಖ್ಯ. ಹಿಂದೆ ಘಟನೆ ನಡೆದಿದೆ. ನಾನು ಅದರಿಂದ ಚೇತರಿಸಿಕೊಂಡು ಹಿಂತಿರುಗಿದ್ದೇನೆ. ಇದಕ್ಕೆ ಸಮಯ ತೆಗೆದುಕೊಳ್ಳುತ್ತೆ. ನಾನು ಧನಾತ್ಮಕವಾಗಿದ್ದೇನೆ ಮತ್ತು ಆಟಕ್ಕೆ 100 ರಷ್ಟು ಪ್ರಯತ್ನ ಹಾಕುತ್ತೇನೆ.
ಯಶ್ ಧುಲ್, ಕ್ರಿಕೆಟಿಗ
ಯಶ್ ಧುಲ್ ಮಾತುಗಳನ್ನ ಕೇಳ್ತಿದ್ರೆ ಅವರಲ್ಲಿ ಕಮ್ಬ್ಯಾಕ್ ಗುರಿ ಅಚಲವಾಗಿರೋದು ಸ್ಪಷ್ಟವಾಗಿದೆ. ಏನನ್ನಾದ್ರು ಸಾಧಿಸಿಯೇ ತೀರುವ ಛಲ ಅವರಲ್ಲಿದೆ. ಏನೇ ಆದ್ರೂ ಹಾರ್ಟ್ ಹೋಲ್ನಂತಾ ಸರ್ಜರಿಗೆ ಚಿಕ್ಕ ವಯಸ್ಸಲ್ಲೇ ಒಳಗಾಗಿರೋದ್ರಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ಹೀಗಾಗಿ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಯುವ ಬ್ಯಾಟರ್ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ. ಹಾಗಂತ ಯಶ್ ಧುಲ್ಗೆ ಸಾಮರ್ಥ್ಯ ಇಲ್ಲ ಅಂತಲ್ಲ.. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಆಗೀ ಎಲ್ಲಾ ಟ್ಯಾಲೆಂಟ್ ಇದೆ. ಆ ಪ್ರಯತ್ನದ ಹಾದಿಯಲ್ಲಿ ಈ ಡೆಲ್ಲಿ ಪುತ್ತರ್ ಸಾಗಲಿ ಎಂದು ಆಶೀಸೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ