ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಹೊಸ ಸಿನಿಮಾ ಜವಾನ್
ಸೆಪ್ಟೆಂಬರ್ 7ನೇ ತಾರೀಕು ರಿಲೀಸ್ ಆಗಲಿದೆ ಜವಾನ್ ಸಿನಿಮಾ!
ಜವಾನ್ ಸಿನಿಮಾಗಾಗಿ ಶಾರುಖ್ ಜತೆಗೆ ಕೈ ಜೋಡಿಸಿದ್ರಾ ಯಶ್..?
ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. ಇವರು ತಮ್ಮ ನಟನೆ ಮೂಲಕವೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಇವರ ಹೊಸ ಸಿನಿಮಾ ಜವಾನ್ ರಿಲೀಸ್ಗೆ ರೆಡಿಯಾಗಿದೆ. ಅಪಾರ ಜನ ಮನ್ನಣೆ ಗಳಿಸಿರೋ ಈ ಸಿನಿಮಾಗಾಗಿ ಶಾರುಖ್ ಖಾನ್ ಜತೆ ಪ್ಯಾನ್ ಇಂಡಿಯಾ ಸ್ಟಾರ್ ರಾಕಿಭಾಯ್ ಯಶ್ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.
ಕಾಲಿವುಡ್ ಸೂಪರ್ ಹಿಟ್ ಡೈರೆಕ್ಟರ್ ಅಟ್ಲಿ ಈ ಸಿನಿಮಾದ ನಿರ್ದೇಶಕರು. ಇವರ ನಿರ್ದೇಶನದ ಶಾರುಖ್ ಅಭಿನಯದ ಈ ಸಿನಿಮಾ ಟೀಸರ್, ಟ್ರೈಲರ್ ಈಗ ಸಾಕಷ್ಟು ಹಿಟ್ ಆಗಿದೆ. ಸಿನಿಮಾದ ಹಾಡುಗಳು ಕೂಡ ಜನರ ಗಮನ ಸೆಳೆದಿವೆ.
ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಿಂದಿಯಲ್ಲಿ ಶಾರುಖ್ ಅವರೇ ಡಬ್ ಮಾಡಿದ್ದು, ಬೇರೆ ಭಾಷೆಗಳಲ್ಲಿ ಮಾತ್ರ ವಿವಿಧ ಕಲಾವಿದರು ಧ್ವನಿ ನೀಡಿದ್ದಾರೆ. ಹೀಗಾಗಿ ಕನ್ನಡದಲ್ಲಿ ಯಶ್ ಡಬ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ಸಿನಿಮಾಗೆ ರೇಟಿಂಗ್ ನೀಡುವ ಐಎಂಡಿಬಿಯಲ್ಲಿ ಜವಾನ್ ಟಾಪ್ನಲ್ಲಿ ಇದೆ. ಈ ಪಟ್ಟಿಯಲ್ಲಿ ಕರಣ್ ಜೋಹರ್, ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಗಿದೆ. ಸೆಪ್ಟೆಂಬರ್ 7ನೇ ತಾರೀಕು ರಿಲೀಸ್ ಆಗೋ ಈ ಸಿನಿಮಾಗೆ ಕನ್ನಡದಲ್ಲಿ ಯಶ್ ಡಬ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ