newsfirstkannada.com

ಕೇವಲ 20 ಲಕ್ಷ ಜೇಬಿಗಿಳಿಸಿ ಕೋಟಿ ಕುಬೇರರ ಮೀರಿಸಿದ ರಿಯಲ್ ಹೀರೋಗಳು.. ಒಬ್ಬರಿಗಿಂತ ಒಬ್ಬರು ಸೂಪರ್​​..!

Share :

Published April 25, 2024 at 11:34am

    ಆಟಗಾರರದಿಂದ 20 ಕೋಟಿ ಸಮಾನ ಪರ್ಫಾಮೆನ್ಸ್​​​..!

    ಕೋಟಿ ವೀರರು ಠುಸ್​​​.. ಲಕ್ಷಾಧೀಶರೇ ಸೂಪರ್ ಡೂಪರ್

    ಕೋಟಿ ಕುಬೇರರಿಗೆ ಸೆಡ್ಡು ಹೊಡೆದ ಮೂಲಬೆಲೆ ಆಟಗಾರರು

ಇವರೆಲ್ಲರೂ ಐಪಿಎಲ್​​ ಹರಾಜಿನಲ್ಲಿ ಬೇಸ್​ ಪ್ರೈಸ್ ಅಂದ್ರೆ​ 20 ಲಕ್ಷಕ್ಕೆ ಬಿಡ್ ಆದವರು. ಆದರೆ ಇಂದು ಇದೇ ಆಟಗಾರರು ಪರ್ಫಾಮೆನ್ಸ್​ನಲ್ಲಿ ಕೋಟಿ ಕುಬೇರರನ್ನ ಮೀರಿಸಿದ್ದಾರೆ. ಆ ಮೂಲಕ ದುಬಾರಿ ಮೊತ್ತಕ್ಕೆ ಖರೀದಿಸಿದ ಆಟಗಾರರು ಉತ್ತಮ ಪ್ರದರ್ಶನ ನೀಡ್ತಾರೆ ಅನ್ನುವ ಫ್ರಾಂಚೈಸಿಗಳ ಲೆಕ್ಕಾಚಾರವನ್ನ ಸುಳ್ಳಾಗಿಸಿದ್ದಾರೆ.

20 ಲಕ್ಷ ಆಟಗಾರರದಿಂದ 20 ಕೋಟಿಯ ಪರ್ಫಾಮೆನ್ಸ್​​​..!
ಐಪಿಎಲ್​​​​ನಲ್ಲಿ ಹಣದ ಹೊಳೆಯೇ ಹರಿಯುತ್ತೆ. ಒಂದು ಸೀಸನ್​ನಿಂದ ಫ್ರಾಂಚೈಸಿಗಳು ನೂರಾರು ಕೋಟಿ ರೂಪಾಯಿ ಜೇಬಿಗಿಳಿಸಿಕೊಳ್ಳುತ್ತವೆ. ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬೇಕಾದ ಆಟಗಾರರನ್ನ ಖರೀದಿಸುತ್ತವೆ. ಹೆಚ್ಚು ದುಡ್ಡು ಕೊಟ್ಟು ಬಿಡ್ ಮಾಡಿದ ಸ್ಟಾರ್​​ಗಳು ಉತ್ತಮ ಪ್ರದರ್ಶನ ನೀಡ್ತಾರೆ ಅನ್ನೋದು ಫ್ರಾಂಚೈಸಿ ಮಾಲೀಕರ ಲೆಕ್ಕಚಾರ. ಆ ಲೆಕ್ಕಾಚಾರ ಪ್ರಸಕ್ತ ಐಪಿಎಲ್​ನಲ್ಲಿ ಉಲ್ಟಾ ಆಗಿದೆ. 20 ಲಕ್ಷಕ್ಕೆ ಬಿಡ್​ ಆದವರು 20 ಕೋಟಿ ಪಡೆದವರ ಸರಿ ಸಮಾನ ಪರ್ಫಾಮೆನ್ಸ್​ ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ:ಬೈಕ್​​ನಲ್ಲಿ ಬಂದು JDU ಯುವ ಮುಖಂಡನ ಗುಂಡಿಟ್ಟು ಸಾಯಿಸಿ ಪರಾರಿ

20 ಲಕ್ಷದ ಅಶುತೋಷ್​​​​​-ಶಶಾಂಕ್ ರಿಂದ​ ಜಬರ್ದಸ್ತ್​​​​ ಆಟ..!
ಶಶಾಂಕ್​ ಸಿಂಗ್ ಹಾಗೂ ಅಶುತೋಷ್​ ಶರ್ಮಾ. ಪಂಜಾಬ್ ಕಿಂಗ್ಸ್​​​ನ ಈ ಜೋಡೆತ್ತು ಹೆಸರನ್ನ ಕೇಳದವರಿಲ್ಲ. ಡಿಸ್ಟ್ರಕಿವ್ ಆಟದಿಂದ ಐಪಿಎಲ್​​​ಗೆ ರಂಗು ತಂದಿದ್ದಾರೆ. ಇಬ್ಬರನ್ನ ಪಂಜಾಬ್​​​​​​​ ತಂಡ ತಲಾ 20 ಲಕ್ಷ ನೀಡಿ ಖರೀದಿಸಿತ್ತು. ಮೂಲ ಬೆಲೆಗೆ ಬಿಡ್​​​ ಆದ ಈ ಆಟಗಾರರೇ ಪಂಜಾಬ್​ ಮ್ಯಾಚ್ ವಿನ್ನರ್​ಗಳಾಗಿದ್ದಾರೆ. ಶಶಾಂಕ್​​ 195 ಹಾಗೂ ಅಶುತೋಷ್​​​ ಅಮೋಘ 159 ರನ್ ಸಿಡಿಸಿ, ಕೋಟಿ ವೀರರಿಗೆ ಸೆಡ್ಡು ಹೊಡೆದಿದ್ದಾರೆ.

ರಘುವಂಶಿ-ನಿತೀಶ್​ ರೆಡ್ಡಿ ಅಮೋಘ ಪ್ರದರ್ಶನ
ಕೆಕೆಆರ್​​​​ನ ಆಂಗ್​​ಕ್ರಿಶ್​ ರಘುವಂಶಿಗೆ ಇದು ಚೊಚ್ಚಲ ಐಪಿಎಲ್​​​. 20 ಲಕ್ಷಕ್ಕೆ ತಂಡ ಸೇರಿದ ರಘುವಂಶಿ ದಮ್ದಾರ್​​ ಪ್ರದರ್ಶನ ನೀಡ್ತಿದ್ದಾರೆ. 161 ಸ್ಟ್ರೈಕ್​ರೇಟ್ ಹೊಂದಿರೋ ಯಂಗ್​​ಗನ್​​ ಆಟ ಸ್ಟಾರ್​ ಆಟಗಾರರನ್ನೇ ನಾಚಿಸುವಂತಿದೆ. ಹೈದ್ರಾಬಾದ್​​​​ನ ನಿತೀಶ್​​ ರೆಡ್ಡಿ ಕಥೆ ಕೂಡ ಸೇಮ್​​​. ಮೂಲ ಬೆಲೆಗೆ ಹರಾಜಾದ ನಿತೀಶ್​​​ ರಗಢ್​​​ ಆಟ ಯಾವ ಕೋಟಿ ವೀರರಿಗೂ ಕಮ್ಮಿ ಇಲ್ಲ. 1 ಅರ್ಧಶತಕ ಸಹಿತ 115 ರನ್​ ಚಚ್ಚಿ ದಿಲ್ ಗೆದ್ದಿದ್ದಾರೆ.

ಇದನ್ನೂ ಓದಿ:Video: ಪಂತ್ ಹೊಡೆದ ಬಾಲ್​​​ನಿಂದ ಕ್ಯಾಮರಾಮ್ಯಾನ್​ಗೆ ಪೆಟ್ಟು; ಕ್ಷಮೆ ಕೇಳಿ ವಿನಯತೆ ಮೆರೆದ ನಾಯಕ..!

ಹರ್ಷಿತ್​​​ ರಾಣ -ಮಯಂಕ್​ ಯಾದವ್​​​.. ಬೆಂಕಿ ಬೌಲಿಂಗ್​​​..!
ಹರ್ಷಿತ್​​​​​ ರಾಣಾ ಹಾಗೂ ಮಯಂಕ್ ಯಾದವ್​​. ಸೀಸನ್​​ 17ರ ಯಂಗ್​ ಸೆನ್ಸೆಷನ್​​ ಬೌಲರ್ಸ್​​​. ಬ್ಯಾಟ್ಸ್​​ಮನ್​ಗಳಿಗೆ ಇವರು ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ. 20 ಲಕ್ಷ ಜೇಬಿಗಿಳಿಸಿ ಕೋಟಿ-ಕೋಟಿ ಬಾಚಿದವರನ್ನೆ ಮೀರಿಸಿದ್ದಾರೆ. ಲಕ್ನೋ ತಂಡದ ಮಯಾಂಕ್​​​​ ಆಡಿದ್ದು ಮೂರೇ ಪಂದ್ಯ. ಆದರೆ ಮಾಡಿದ ಇಂಪ್ಯಾಕ್ಟ್​​ ದೊಡ್ಡದು. 150+ ಕಿ. ಮೀ ಬೌಲಿಂಗ್​​​, 6 ವಿಕೆಟ್​ ಬೇಟೆ ಫ್ಯಾನ್ಸ್ ಮನದಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿದೆ. ಇನ್ನು ಹರ್ಷಿತ್ 9 ವಿಕೆಟ್​ ಕಬಳಿಸಿದ್ದು ಭರವಸೆ ಹುಟ್ಟಿಸಿದ್ದಾರೆ.

ಯಶಸ್ವಿನ ಶಿಖರವೇರಿದ ಸ್ಪೀಡ್​ಸ್ಟರ್​​​ ಯಶ್​ ಠಾಕೂರ್​​
ಪ್ರಸಕ್ತ ಐಪಿಎಲ್​ನಲ್ಲಿ ಯುವವೇಗಿ ಯಶ್​ ಠಾಕೂರ್​​ ಪ್ರದರ್ಶನ ಎಲ್ಲರ ಕಣ್ಣು ಕುಕ್ಕಿಸುತ್ತಿದೆ. ಈ ಇಂಪ್ರೆಸ್ಸಿವ್​​​ ಬೌಲರ್​​​​ 20 ಲಕ್ಷ ರೂಪಾಯಿಗೆ ಲಕ್ನೋ ಪಾಲಾಗಿದ್ರು. ಅದಕ್ಕೆ ಮೋಸ ಮಾಡದ ಯಂಗ್ ಸ್ಪೀಡ್​​​​​​​​​​​​​​​ ಗನ್​​ 6 ಪಂದ್ಯದಲ್ಲಿ 8 ವಿಕೆಟ್ ಸರಮಾಲೆ ಕಟ್ಟಿದ್ದಾರೆ. ಸ್ಲಾಗ್ ಓವರ್​ನಲ್ಲಿ ಇಂಪ್ರೆಸ್ಸಿವ್ ದಾಳಿ ತಂಡಕ್ಕೆ ಗೆಲುವಿಗೆ ನೆರವಾಗ್ತಿದೆ. ಏನೇ ಹೇಳಿ, 20 ಲಕ್ಷ ಆಟಗಾರರ ಜಬರ್ದಸ್ತ್​​ ಪ್ರದರ್ಶನವನ್ನು ಮೆಚ್ಚಲೇಬೇಕು. ಹೊಸಬರಿಗೆ ದೊಡ್ಡ ಮೊತ್ತ ನೀಡೋದು ವ್ಯರ್ಥ, ಅವರಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ ? ಅನ್ನೋ ಫ್ರಾಂಚೈಸಿ ಮಾಲೀಕರ ಯೋಚನೆಯನ್ನ ಮೇಲಿನ ಆಟಗಾರರು ಬದಲಿಸಿದ್ದಾರೆ. ಕೋಟಿ ಕುಬೇರರಿಗಿಂತ ನಾವೇನು ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ:7 ಪಂದ್ಯಗಳಲ್ಲಿ ಸೋತು ಭಾರೀ ಮುಖಭಂಗ; ಆರ್​​ಸಿಬಿ ಪ್ಲೇಯಿಂಗ್-11ನಲ್ಲಿ ಇಂದು ಭಾರೀ ಬದಲಾವಣೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 20 ಲಕ್ಷ ಜೇಬಿಗಿಳಿಸಿ ಕೋಟಿ ಕುಬೇರರ ಮೀರಿಸಿದ ರಿಯಲ್ ಹೀರೋಗಳು.. ಒಬ್ಬರಿಗಿಂತ ಒಬ್ಬರು ಸೂಪರ್​​..!

https://newsfirstlive.com/wp-content/uploads/2024/04/HARSHIT-RAANA.jpg

Load More