ಸಿಂಪಲ್ಲಾಗಿ ಸೆಟ್ಟೇರಿದ ಬಹುನಿರೀಕ್ಷಿತ ಯಶ್ನ ಟಾಕ್ಸಿಕ್ ಸಿನಿಮಾ
ಶ್ರೀಮಂಜುನಾಥನ ದರ್ಶನದ ಬಳಿಕ ಸಿನಿಮಾಗೆ ಸಿಕ್ತು ಚಾಲನೆ
ಅಭಿಮಾನಿಯ ಕೈಯಿಂದಲೇ ಕ್ಲ್ಯಾಪ್ ಮಾಡಿಸಿದ ರಾಕಿಭಾಯ್
ಬೆಂಗಳೂರು: KGF ಚಾಪ್ಟರ್ 2 ಆದ ಮೇಲೆ ನಟ ಯಶ್ ಇಷ್ಟು ವರ್ಷಗಳರೆಗೂ ಸೈಲೆಂಟ್ ಆಗಿಯೇ ಇದ್ರು. ಕೆಜಿಎಫ್ ಹೊಸದೊಂದು ಇಮೇಜ್ ತಂದು ಕೊಟ್ಟ ಕಾರಣದಿಂದಾಗಿ, ಯಶ್ ಮೇಲೆ ಈಗ ನಿರೀಕ್ಷೆಯ ಮಹಾಪೂರವೇ ಇದೆ. ಹೀಗಾಗಿ ಸಿನಿಮಾ ಆಯ್ಕೆಯಲ್ಲಿ ಎಚ್ಚರವಹಿಸಿದ್ದ ರಾಕಿಂಗ್ಸ್ಟಾರ್, ಕೊನೆಗೆ ಟಾಕ್ಸಿಕ್ ಅನ್ನೋ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕಾಗಿ ಹೊಸ ಅವತಾರದಲ್ಲಿ ಈಗ ಕಾಣಿಸಿಕೊಂಡಿದ್ದಾರೆ. ಯಶ್ ಅಭಿನಯದ ಅದ್ದೂರಿ ಸಿನಿಮಾ ಟಾಕ್ಸಿಕ್ನ ಮುಹೂರ್ತ ಅತ್ಯಂತ ಸಿಂಪಲ್ಲಾಗಿ ಮುಗಿಸಿದ್ದಾರೆ ಯಶ್.
ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಇವರಿಬ್ಬರಿಗೆ ಸಂಬಂಧಿಸಿದ ಮತ್ತೊಂದು ವಿಚಾರ ನಿಮ್ಗೆ ಗೊತ್ತಾ?
View this post on Instagram
ಇದನ್ನೂ ಓದಿ:ಅಣ್ಣಾವ್ರ ಗಂಧದ ಗುಡಿ ಹೆಸರು ಹೇಳಿ ಅಲ್ಲು ಅರ್ಜುನ್ ಪುಷ್ಪಗೆ ಕೌಂಟರ್ ಕೊಟ್ಟ ಪವನ್ ಕಲ್ಯಾಣ್.. ಏನಂದ್ರು?
ಮೊನ್ನೆ ಮೊನ್ನೆಯಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀಮಂಜುನಾಥನ ಆಶೀರ್ವಾದ ಪಡೆದ ಬೆನ್ನಲ್ಲೇ ಇದೀಗ ತಮ್ಮ ಬಹು ನಿರೀಕ್ಷಿತ ಮೂವಿ ಟಾಕ್ಸಿಕ್ಗೆ ಮುಹೂರ್ತ ಇಟ್ಟ ಸರಿಯಾದ ಸಮಯಕ್ಕೆ ಪೂಜೆ ನೆರವೇರಿಸಿದ್ದಾರೆ. ಟಾಕ್ಸಿಕ್ ಸದ್ಯಕ್ಕೆ ಸೆಟ್ಟೇರಿದೆ. ಚಿತ್ರತಂಡ- ಆಪ್ತರ ಸಮ್ಮುಖದಲ್ಲಿ ಟಾಕ್ಸಿಕ್ ಮೂವಿ ಮುಹೂರ್ತದ ದೇವರ ಪೂಜೆ ಮಾಡಲಾಯಿತು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಟಾಕ್ಸಿಕ್ಗೆ ಅಭಿಮಾನಿ ಕೈಯಿಂದಲೇ ಕ್ಲ್ಯಾಪ್ ಮಾಡಿಸಲಾಗಿದೆ.
ಅಭಿಮಾನಿಯಿಂದಲೇ ಕ್ಲ್ಯಾಪ್ ಮಾಡಿಸಿದ ಯಶ್
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಆರ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವ ಸುನೀಲ್ ಎನ್ನುವ ಅಭಿಮಾನಿ ಕ್ಲ್ಯಾಪ್ ಮಾಡಿಸಿದ್ದಾರೆ. ಯಶ್ ಅವರ ಬಹುತೇಕ ಸಿನಿಮಾಗಳಿಗೆ ಸುನೀಲ್ ಅವರೇ ಕೆಲಸ ಮಾಡಿದ್ದಾರೆ. ಒಳ್ಳೆಯ ಕೆಲಸಗಾರ. ಯಶ್ ಅವರ ಮಾತನ್ನು ತೆಗೆದು ಹಾಕದೆ ಕೆಲಸ ಮಾಡುತ್ತಾರೆ. ಅಲ್ಲದೇ ಸುನೀಲ್, ಯಶ್ಗೆ ದೊಡ್ಡ ಅಭಿಮಾನಿ ಕೂಡ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದ ಯಶ್ ಅವರು ಅಭಿಮಾನಿ ಸುನೀಲ್ರಿಂದ ಕ್ಲ್ಯಾಪ್ ಮಾಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ