ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಟಾಕ್ಸಿಕ್ ಸಿನಿಮಾ ಬಿಡುಗಡೆಯ ಡೇಟ್ ಫಿಕ್ಸ್! ಯಾವಾಗ?

author-image
admin
Updated On
ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಟಾಕ್ಸಿಕ್ ಸಿನಿಮಾ ಬಿಡುಗಡೆಯ ಡೇಟ್ ಫಿಕ್ಸ್! ಯಾವಾಗ?
Advertisment
  • ರಾಕಿ ಭಾಯ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್‌ಗೆ ಮುಹೂರ್ತ!
  • ಟಾಕ್ಸಿಕ್‌ಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಬಿಗ್ ಅಪ್​ಡೇಟ್ ಕೊಟ್ಟ ಯಶ್‌
  • ಗೀತು ಮೋಹನ್ ದಾಸ್ ಆ್ಯಕ್ಷನ್​ ಕಟ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್‌

ರಾಕಿ ಭಾಯ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ರಿಲೀಸ್ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಖುದ್ದು ನಟ ಯಶ್ ಅವರೇ ಟಾಕ್ಸಿಕ್ ಬಿಡುಗಡೆಯ ಡೇಟ್ ಅನೌನ್ಸ್ ಮಾಡಿದ್ದಾರೆ.

KGF ಸಿನಿಮಾದ ನಂತರ ಯಶ್ ಅವರು ಟಾಕ್ಸಿಕ್‌ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಟಾಕ್ಸಿಕ್ ಸಿನಿಮಾ ಅಪ್​ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್​​ ಕಾತುರದಿಂದ ಕಾಯುತ್ತಿದ್ದು, ಇದೀಗ ಲೇಟೆಸ್ಟ್ ಅಲ್ಲ ಬಿಗ್ ಅಪ್​ಡೇಟ್ ಸಿಕ್ಕಿದೆ.

ಅಂದ ಹಾಗೆ ಟಾಕ್ಸಿಕ್‌​ ಸಿನಿಮಾಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಜೋಡಿ ಮೋಡಿ ಮಾಡಲು ಮುಂದಾಗಿದೆ.

publive-image

ಟಾಕ್ಸಿಕ್ ಸಿನಿಮಾ ಮಾರ್ಚ್ 19 2026ರಂದು ಬಿಡುಗಡೆಯಾಗಲಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ 19-03-2026 ರಂದು ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಅಧಿಕೃತ ದಿನಾಂಕವನ್ನು ಅನಾವರಣಗೊಳಿಸಿದೆ. ಟಾಕ್ಸಿಕ್‌ ಹೀರೋ ಯಶ್ ಕೂಡ ಈ ಡೇಟ್ ಅನೌನ್ಸ್ ಮಾಡಿದ್ದು, ಹೊಸ ಪೋಸ್ಟರ್‌ ರಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ: ಯಶ್​ ಟಾಕ್ಸಿಕ್​ ಮೂವಿಯಲ್ಲಿ ವಿಲನ್ ಯಾರು.. ರಾಕಿ ಭಾಯ್​ ಸಿನಿಮಾದಿಂದ ಬಿಗ್ ಅಪ್​ಡೇಟ್​ 

ಈಗಾಗಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್​ ಬೇರೆ, ಬೇರೆ ಸ್ಥಳಗಳಲ್ಲಿ ಭರದಿಂದ ಸಾಗುತ್ತಿದೆ. ತಾರಾಗಣ ವಿಚಾರವಾಗಿ ಟಾಕ್ಸಿಕ್ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಆದರೂ ಈ ಸಂಬಂಧ ಚಿತ್ರತಂಡದವರು ಎಲ್ಲೂ ಕೂಡ ಅಧಿಕೃತವಾಗಿ ತಾರಾಗಣದ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಕೇಳಿ ಬಂದಿದ್ದವು. ನಿರ್ದೇಶಕಿ ಗೀತಾ ಅವರು ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment