/newsfirstlive-kannada/media/post_attachments/wp-content/uploads/2024/04/CREDIT-CARD.jpg)
ಯೆಸ್ ಬ್ಯಾಂಕ್ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್​​ನ ಗ್ರಾಹಕರಿಗೆ ಇದು ಶಾಕಿಂಗ್ ಸುದ್ದಿ. ನೀವು ಏನಾದರೂ ಶಾಪಿಂಗ್​ನಿಂದ ಹಿಡಿದು ಬಿಲ್ ಪಾವತಿವರೆಗೆ ಕ್ರೆಡಿಟ್ ಕಾರ್ಡ್​​ಗಳನ್ನು ಬಳಸುತ್ತಿದ್ದರೆ ನಾಳೆಯಿಂದ ನಿಮ್ಮ ಪಾಕೆಟ್​ನಿಂದ ಮತ್ತಷ್ಟು ಕತ್ತರಿ ಬೀಳಲಿದೆ.
ನಾಳೆಯಿಂದ ಈ ಎರಡು ಬ್ಯಾಂಕ್​ಗಳು ಯುಟಿಲಿಟಿ ಬಿಲ್ ಪಾವತಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿವೆ. ವರದಿಗಳ ಪ್ರಕಾರ ವೈಯಕ್ತಿಕ ಕಾರ್ಡ್​ಗಳ ದುರ್ಬಳಕೆ ಮತ್ತು ಕಡಿಮೆ ಎಂಡಿಆರ್​ನಿಂದಾಗಿ ಬ್ಯಾಂಕ್​ಗಳು ಈ ನಿರ್ಧಾರ ತೆಗೆದುಕೊಂಡಿವೆ. ಮರ್ಚೆಂಟ್ ಡಿಸ್ಕೌಂಟ್ ರೇಟ್​ (ಎಂಡಿಆರ್​) ಎನ್ನುವುದು ಪ್ರತಿ ಕ್ರೆಡಿಟ್ ಕಾರ್ಡ್​ ವಹಿವಾಟಿಗೆ ಪಾವತಿ ಗೇಟ್​ವೇಗಳು ಕಂಪನಿಗಳಿಗೆ ವಿಧಿಸುವ ಶುಲ್ಕವಾಗಿದೆ.
ಕ್ರೆಡಿಟ್ ಕಾರ್ಡ್​ ಬಳಕೆದಾರರಿಂದ ಯುಟಿಲಿಟಿ ಬಿಲ್ ಪಾವತಿಗೆ ಶೇಕಡಾ 1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದು ಎಂದು ಯೆಸ್ ಬ್ಯಾಂಕ್ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಇತ್ತೀಚೆಗೆ ಘೋಷಣೆ ಮಾಡಿದ್ದವು. ಅದರಂತೆ ನೀವು ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಬಳಸಿ ನಿಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸಿದ್ದರೆ ಅದು 1500 ರೂಪಾಯಿ ಆಗಿದ್ದರೆ ಮೇ ನಂತರ ನೀವು ಅದರ ಮೇಲೆ ಶೇಕಡಾ ಒಂದು ಅಥವಾ15 ರೂಪಾಯಿ ಕಟ್ಟಬೇಕಾಗುತ್ತದೆ.
ಎಷ್ಟು ಪಾವತಿಸಬೇಕು?
ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಕಾರ್ಡ್​ ಮೂಲಕ 15 ಸಾವಿರ ರೂಪಾಯಿಗಿಂತ ಕಡಿಮೆ ಬಿಲ್ ಪಾವತಿ ಮಾಡಿದರೆ ಅದರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದಕ್ಕಿಂತ ಹೆಚ್ಚು ಪಾವತಿ ಮಾಡಿದರೆ ಶೇಕಡಾ ಒಂದು ರೂಪಾಯಿ ದರದಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ತನ್ನ ಮಿತಿಯನ್ನು 20 ಸಾವಿರ ರೂಪಾಯಿ ಆಗಿದೆ. ಅದಕ್ಕಿಂತ ಹೆಚ್ಚು ಬಳಸಿದರೆ ಬ್ಯಾಂಕ್​​ಗಳು ಶೇಕಡಾ 18 ರಷ್ಟು ಜಿಎಸ್​ಟಿ ವಿಧಿಸಲಿವೆ.
ಇದನ್ನೂ ಓದಿ:ಟೀಕೆ ಟೀಕೆ ಟೀಕೆ.. ಕೊಹ್ಲಿ ಕಂಡ್ರೆ ಅದ್ಯಾಕೆ ಹಿಂಗೆ ಆಡ್ತಾರೋ.. ಆದರೆ ಕಿಂಗ್ ಕೊಹ್ಲಿ ಉತ್ತರ ಮಾತ್ರ ಬೆಂಕಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us