newsfirstkannada.com

ಲಿಪ್​ಸ್ಟಿಕ್ ಬೆನ್ನಲ್ಲೇ ಮಿಣಿ ಮಿಣಿ ಪೌಡರ್.. ಜೈಲಾಧಿಕಾರಿಗಳ ಜೊತೆ ಪವಿತ್ರಾ ಗೌಡ ಕಿರಿಕ್; ಆಗಿದ್ದೇನು?

Share :

Published June 27, 2024 at 9:20pm

Update June 27, 2024 at 9:22pm

  ಸೆಂಟ್ರಲ್‌ ಜೈಲಲ್ಲೂ ಚಿಂಗಾರಿಯ ಬಂಗಾರಿಗೆ ಗ್ಲ್ಯಾಮರ್​ದ್ದೇ ಮಹಾ ಚಿಂತೆ

  ಸದಾ ಸೌಂದರ್ಯಪ್ರಜ್ಞೆ ಇರೋ ರೀಲ್ಸ್ ರಾಣಿಯ ಮೇಕಪ್ ಕ್ರೇಜ್ ಇದು

  ಪರಪ್ಪನ ಅಗ್ರಹಾರ ಜೈಲಲ್ಲೂ ಮೇಕಪ್​ಗೆ ಪವಿತ್ರಾ ಚಡಪಡಿಕೆ.. ಏನಾಯ್ತು?

ನಟ ದರ್ಶನ್​​ಗೆ ಜೈಲಿನಿಂದ ಹೊರಬರೋದು ಹೇಗೆ ಎಂಬ ಚಿಂತೆಯಾದ್ರೆ ಪವಿತ್ರಾ ಗೌಡಗೆ ಜೈಲಿನಲ್ಲೂ ಮೇಕಪ್​ನದ್ದೇ ಚಿಂತೆಯಾಗಿ ಬಿಟ್ಟಿದೆ. ರೇಣುಕಾಸ್ವಾಮಿ ಜೀವ ಹಿಂಡಿದ್ದಕ್ಕೆ ಸ್ವಲ್ಪನೂ ಪಶ್ಚಾತ್ತಾಪ ಇಲ್ಲದೇ ಸದಾ ಸೌಂದರ್ಯದ ಬಗ್ಗೆಯೇ ತುಡಿತ. ಮೇಕಪ್​​ಗಾಗಿ ಚಡಪಡಿಸುತ್ತಿರುವ ಪವಿತ್ರಾ ಗೌಡ ಜೈಲಿನಲ್ಲೂ ಪೌಡರ್​​ಗಾಗಿ ಜಗಳ ಆಡ್ತಿದ್ದಾರಂತೆ. ರೀಲ್ಸ್​​ ರಾಣಿ ತನ್ನಿಷ್ಟದ ಮೇಕಪ್ ಮಾಡಲಾಗದೇ ಒದ್ದಾಡುತ್ತಿದ್ದಾರಂತೆ.

ಜೈಲಲ್ಲೂ ಚಿಂಗಾರಿಯ ಬಂಗಾರಿಗೆ ಗ್ಲ್ಯಾಮರ್ ಚಿಂತೆ!

ಐಷಾರಾಮಿ ಜೀವನ ನಡೆಸ್ತಿದ್ದ ಪವಿತ್ರಾ ಗೌಡಗೆ ಮೇಕಪ್ ಅಂದ್ರೆ ವಿಶೇಷ ಕಾಳಜಿ. ಮಾಡೆಲ್​ ಆಗಿ, ನಟಿಯಾಗಿ ರೀಲ್ಸ್ ರಾಣಿಯಾಗಿ ಮಿರಮಿರ ಮಿಂಚುತ್ತಿದ್ದ ಪವಿತ್ರಾ ಗೌಡಗೆ ಪರಪ್ಪನ ಅಗ್ರಹಾರ ಜೈಲಿನಲ್ಲೂ ಮೇಕಪ್​​ನದ್ದೇ ಚಿಂತೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಕೊಂಚವೂ ವಿಷಾದ ಇಲ್ಲದೇ ಮೇಕಪ್ ಸುಂದರಿಗೆ ಸದಾ ಸೌಂದರ್ಯದ್ದೇ ಚಿಂತೆ. ಜೈಲಿನಲ್ಲಿ ಮೇಕಪ್​ ಮಾಡಲಾಗದೇ ಪವಿತ್ರಾ ವಿಲವಿಲ ಒದ್ದಾಡುವಂತಾಗಿದೆ. ಮನೆಯಲ್ಲಿ ಸ್ಥಳ ಮಹಜರು ವೇಳೆಯೂ ಲಿಪ್​ಸ್ಟಿಕ್ ಹಚ್ಚಿದ್ದ ಪವಿತ್ರಾ ಗೌಡ ವಾಶ್​​ರೂಂಗೆ ಹೋಗುವ ನೆಪದಲ್ಲಿ ಮೇಕಪ್ ಮಾಡಿದ್ದ ವಿಚಾರ ಬಯಲಾಗಿತ್ತು.

ಇದನ್ನೂ ಓದಿ: ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್‌.. ಪೆಡಿಕ್ಯೂರ್‌, ಮೆಡಿಕ್ಯೂರ್‌ ಬೆನ್ನಲ್ಲೇ ಲಿಪ್‌ಸ್ಟಿಕ್ ರಹಸ್ಯ ಬಯಲು

ಇನ್ನು ಹತ್ಯೆ ಕೇಸ್​​ನಲ್ಲಿ ಅರೆಸ್ಟ್ ಆಗುವ ಒಂದು ದಿನ ಮುನ್ನ ಪವಿತ್ರಾ ಗೌಡ ಪೆಡಿಕ್ಯೂರ್ ಮಾಡಿಸಿದ್ದರಂತೆ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲೂ ಮೇಕಪ್​ಗಾಗಿ ಚಡಪಡಿಸ್ತಿದ್ದಾರೆನ್ನಲಾಗಿದೆ. ಅಗತ್ಯವಿರುವ ಪೌಡರ್​ ಸಿಗಲಿಲ್ಲ ಅಂತ ಜೈಲು ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರಂತೆ. ತನ್ನಿಷ್ಟದ ಮೇಕಪ್ ಮಾಡಲಾಗದೇ ಪವಿತ್ರ ಒದ್ದಾಡುತ್ತಿದ್ದ ಸ್ವಂತ ಮೇಕಪ್ ಕಿಟ್​ ಹೊಂದಲು ಅವಕಾಶ ಕೊಡುವಂತೆ ಜೈಲಾಧಿಕಾರಿಗಳ ಜೊತೆ ಕಿರಿಕ್ ತೆಗೆದಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 17 ಆರೋಪಿಗಳು ಜೈಲು ಸೇರಿದ್ದಾರೆ. ಈ ಮುನ್ನ 10 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಸೌಂದರ್ಯವರ್ಧಕಗಳನ್ನು ಬಳಸಿದ್ದು ಸದ್ಯ ಪೊಲೀಸ್ ಅಧಿಕಾರಿಗಳಿಗೂ ಸಂಕಷ್ಟ ತಂದಿದೆ. ಹೀಗಾಗಿ ಪವಿತ್ರಾ ಗೌಡಗೆ ಮೇಕಪ್​ ಕಿಟ್ ಕೊಡಲು ಜೈಲಾಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಅದೇನೇ ಇರಲಿ ಯಾಱರಿಗೋ ಏನೇನೋ ಚಿಂತೆಯಾದ್ರೆ ಪವಿತ್ರಾ ಗೌಡಗೆ ಜೈಲಿನಲ್ಲಿದ್ದರೂ ತನ್ನ ಗ್ಲ್ಯಾಮರ್​ ಬಗ್ಗೆಯೇ ಚಿಂತೆ. ಕಂಬಿ ಎಣಿಸ್ತಿದ್ರೂ ಮೇಕಪ್​ ಕ್ರೇಜ್​ ಹೋಗದೇ ಇರೋದು ವಿಚಿತ್ರ ಎನ್ನಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಿಪ್​ಸ್ಟಿಕ್ ಬೆನ್ನಲ್ಲೇ ಮಿಣಿ ಮಿಣಿ ಪೌಡರ್.. ಜೈಲಾಧಿಕಾರಿಗಳ ಜೊತೆ ಪವಿತ್ರಾ ಗೌಡ ಕಿರಿಕ್; ಆಗಿದ್ದೇನು?

https://newsfirstlive.com/wp-content/uploads/2024/06/pavitra2-1.jpg

Load More