ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿಗೆ ಹೊಸ ಜೀವನ ಕೊಟ್ಟ ಪ್ರತಾಪ್
ಡ್ರೋನ್ ಪ್ರತಾಪ್ ದೇವರು ಕೊಟ್ಟ ಮತ್ತೊಬ್ಬ ಮೊಮ್ಮಗ ಎಂದ ಅಜ್ಜಿ
ಕಾಮೆಂಟ್ಸ್ ಮಾಡುವ ಮೂಲಕ ಪ್ರತಾಪ್ಗೆ ಫ್ಯಾನ್ಸ್ಗಳಿಂದ ಶುಭ ಹಾರೈಕೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ರನ್ನರ್ ಡ್ರೋನ್ ಪ್ರತಾಪ್ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದ ಡ್ರೋನ್ ಪ್ರತಾಪ್ ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಜನರ ಅಭಿಪ್ರಾಯಗಳನ್ನ ಬದಲಾಯಿಸಿದ್ದರು.
ಇದನ್ನೂ ಓದಿ: ಮತ್ತೆ ಹೃದಯ ಗೆದ್ದ ಡ್ರೋನ್ ಪ್ರತಾಪ್.. ಬಿಗ್ಬಾಸ್ ಮಾಜಿ ಸ್ಪರ್ಧಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಡ್ರೋನ್ ಪ್ರತಾಪ್ ಮುಗ್ಧ ನಗುವಿನಿಂದ ಕರ್ನಾಟಕದ ಮನಸ್ಸು ಗೆದ್ದರು. ಇದಾದ ಬಳಿಕ ಪ್ರತಿಯೊಬ್ಬರು ಪ್ರತಾಪ್ ಅವರಿಗೆ ಬೆಂಬಲವಾಗಿ ನಿಂತು ಸ್ಫೂರ್ತಿ ತುಂಬಿದರು. ಜೊತೆಗೆ ಬಿಗ್ಬಾಸ್ನಿಂದ ಬಂದ ಹಣದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಕೊಟ್ಟ ಮಾತಿನಂತೆ ಇದೀಗ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿಯೊಬ್ಬರಿಗೆ ಡ್ರೋನ್ ಪ್ರತಾಪ್ ಆಪರೇಷನ್ ಮಾಡಿಸಿದ್ದಾರೆ.
View this post on Instagram
ಬಳಿಕ ಅಜ್ಜಿಗೆ ಒಂದು ಮನೆ ಕಟ್ಟಿಸಿಕೊಡಲು ನಿರ್ಧರಿಸಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು, ಅಭಿಮಾನಿಗಳು ಕಾಮೆಂಟ್ಸ್ ಮಾಡುವ ಮೂಲಕ ಡ್ರೋನ್ ಪ್ರತಾಪ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಡ್ರೋನ್ ಪ್ರತಾಪ್ ಅವರ ಈ ಸಹಾಯ ಆರ್ಥಿಕವಾಗಿ ಕುಗ್ಗಿ ಹೋಗಿದ್ದ ಈ ಅಜ್ಜಿಗೆ ಮರು ಜೀವ ಕೊಟ್ಟಂತೆ ಆಗಿದೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿಗೆ ಆಪರೇಷನ್ ಯಶಸ್ವಿಯಾಗಿದೆ. ಇದರಿಂದ ಅಜ್ಜಿ ಬಹಳಷ್ಟು ಸಂತೋಷಪಟ್ಟಿದ್ದಾರೆ. ಜೊತೆಗೆ ಇಂದು ನಾನು ನಿನ್ನಿಂದ ಕೋಟ್ಯಾಧಿಪತಿ ಆಗಿದ್ದೀನಿ. ಈಗಾಗಲೇ ನನ್ಗೆ ಒಬ್ಬ ಮೊಮ್ಮಗ ಇದ್ದಾನೆ. ಈಗ ದೇವರು ಮತ್ತೊಬ್ಬ ಮೊಮ್ಮಗನನ್ನು ಕೊಟ್ಟಿದ್ದಾನೆ ಎಂದು ಹಾಡಿ ಹೊಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ