Advertisment

ಫ್ರಿಡ್ಜ್​​ನಿಂದಲೇ UTI ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ; ಹೊಸ ಅಧ್ಯಯನ ಹೇಳುತ್ತಿರುವುದೇನು?

author-image
Gopal Kulkarni
Updated On
ಫ್ರಿಡ್ಜ್​​ನಿಂದಲೇ UTI ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ; ಹೊಸ ಅಧ್ಯಯನ ಹೇಳುತ್ತಿರುವುದೇನು?
Advertisment
  • ಯುಟಿಐ ಸಮಸ್ಯೆಯನ್ನು ಮತ್ತಷ್ಟು ವೃದ್ಧಿಸಲಿದೆ ನಿಮ್ಮ ಮನೆಯ ತಂಗಳುಪೆಟ್ಟಿಗೆ
  • ರೆಫ್ರಿಜರೇಟರ್​ನಲ್ಲಿ ಶೇಖರಿಸಿಟ್ಟ ಮಾಂಸದಿಂದಲೇ ಹೆಚ್ಚು ಹರಡುತ್ತಿದೆ ಯುಟಿಐ
  • ಏನಿದು ಯುಟಿಐ? ಹೆಣ್ಣು ಮಕ್ಕಳಲ್ಲಿಯೇ ಅತಿಯಾಗಿ ಕಾಣಿಸಿಕೊಳ್ಳುವುದು ಏಕೆ?

ಯುಟಿಐ ಅಂದ್ರೆ ಮೂತ್ರನಾಳದ ಸೋಂಕು ಅತ್ಯಂತ ಪೀಡಾದಾಯಕ ಹಾಗೂ ವಿಪರೀತ ನರಳಿಸುವ ರೋಗ. ನಂಬಿದ್ರೆ ನಂಬಿ ಬಿಟ್ರೆ ಬಿಡಿ ಶೇಕಡಾ 60 ರಷ್ಟು ಮಹಿಳೆಯರು ತಮ್ಮ ಜೀವಿತಕಾಲದಲ್ಲಿ ಈ ಯುಟಿಐನಿಂದ ನರಳುತ್ತಾರೆ. ನೀವು ಯುಟಿಐನ ಸಮಸ್ಯೆಯಿಂದ ಬಳಲುತ್ತಿದ್ದರೆ ನೆನಪಿರಲಿ. ಅದನ್ನು ವೃದ್ಧಿಸುವಲ್ಲಿ ನಿಮ್ಮ ಮನೆಯ ರೆಫ್ರಿಜೇಟರ್ ಅಂದ್ರೆ ಫ್ರಿಡ್ಜ್ ಬಹುದೊಡ್ಡ ಪಾತ್ರವನ್ನುನಿರ್ವಹಿಸುತ್ತಿದೆ. ಅಮೆರಿಕ ತಜ್ಞರ ಹೊಸ ಅಧ್ಯಯನದ ಪ್ರಕಾರ ರೆಫ್ರಿಜೇಟರ್​ನಲ್ಲಿ ಎಸ್ಕೋರಿಚಿಯಾ ಕೊಲಿ ಎಂಬ ಬ್ಯಾಕ್ಟಿರಿಯಾ ಬಿಡುಗಡೆಯಾಗುತ್ತದೆ. ಇದು ನಿಮ್ಮನ್ನು ಯುಟಿಐನಿಂದ ರಕ್ಷಿಸಲು ಅಷ್ಟು ಸರಳವಾಗಿ ಬಿಡುವುದಿಲ್ಲ. ಯುಟಿಐ ಕಾಯಿಲೆಗೆ ಇನ್ನೂ ಹೆಚ್ಚು ಮಾರಕವಾಗಿ ಕಾಡುವ ಗುಣ ಈ ಬ್ಯಾಕ್ಟಿರಿಯಾದಲ್ಲಿದೆ ಎಂದು ಹೇಳಲಾಗುತ್ತದೆ.

Advertisment

ಇದನ್ನೂ ಓದಿ:ನಿಮ್ಮ ಬಾಯಲ್ಲಿ ಪದೇ ಪದೇ ಹುಣ್ಣು ಕಾಣಿಸಿಕೊಳ್ತಿದ್ಯಾ? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ!

ಮೂತ್ರನಾಳದ ಸೋಂಕಿನಂತಹ ಸಮಸ್ಯೆಗಳು ಅತಿ ಹೆಚ್ಚು ಏರಿಕೆ ಕಂಡಿದ್ದು 1999 ರಿಂದ 2019ರವರೆಗೆ. ಶೇಕಡಾ 70 ರಷ್ಟು ಈ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡಿತು. ಹಾಗಾದರೆ ಈ ಏರಿಕೆಗೆ ಕಾರಣವೇನು. ಯುಟಿಐನ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ? ತಜ್ಞರು ತಮ್ಮ ಹೊಸ ಸಂಶೋಧನೆಯ ಪ್ರಕಾರ ಹೇಳುವುದು ಹೀಗೆ. ಮೂತ್ರನಾಳದ ಸೋಂಕು ಮೂತ್ರ ವ್ಯವಸ್ಥೆಯ ಯಾವುದೇ ಭಾಗಕ್ಕೂ ಹರಡುವ ಸಾಧ್ಯತೆ ಇದೆ. ಅದು ಮೂತ್ರಪಿಂಡ (Kidney)ಇರಬಹುದು ಬ್ಯಾಡರ್ ಇರಬಹುದು ಮೂತ್ರನಾಳವೇ ಇರಬಹುದು ಇವುಗಳಲ್ಲಿ ಯಾವುದೇ ಭಾಗಕ್ಕೂ ಸೋಂಕು ತಗುಲಿ ಅಪಾಯ ತಂದಿಡುವ ಸಾಧ್ಯತೆ ಇದೆ.

ಇದನ್ನೂ ಓದಿ:Health Tips: ಬೆಳಗ್ಗೆ ಎದ್ದು ಈ ಕೆಲಸ ಮಾಡಿದ್ರೆ ಸಕ್ಕರೆ ಕಾಯಿಲೆ ಮಾಯ; ಈ ಸ್ಟೋರಿ ತಪ್ಪದೆ ಓದಿ!

Advertisment

ಹಾಗಾದ್ರೆ ಈ ಯುಟಿಐ ಅಂದರೇನು ಅಂತ ನಾವು ನೋಡುತ್ತಾ ಹೋಗುವುದಾದ್ರೆ. ಯುಟಿಐ ಒಂದು ಬ್ಯಾಕ್ಟಿರಿಯಾದಿಂದ ಮೂತ್ರ ಮೂತ್ರ ವ್ಯವಸ್ಥೆಯ ಭಾಗಕ್ಕೆ ಹಾನಿಯುಂಟು ಮಾಡುವ ಒಂದು ಖಾಯಿಲೆ. ಇದು ಮೂತ್ರನಾಳದಿಂದ ಬ್ಯಾಕ್ಟಿರಿಯಾಗಳು ದೇಹವನ್ನು ಸೇರುವುದರ ಮೂಲಕ ಶುರುವಾಗುತ್ತದೆ.Ecoli ಅನ್ನೊ ಹೆಸರಿನ ಬ್ಯಾಕ್ಟಿರಿಯಾ ಮೂತ್ರನಾಳದೊಳದಗೆ ಸೇರುವುದರಿಂದ ಈ ಸಮಸ್ಯೆ ಶುರುವಾಗುತ್ತದೆ. ಇದು ಹಲವುರ ರೀತಿಯ ಆರೋಗ್ಯ ಏರುಪೇರನ್ನುಂಟು ಮಾಡುತ್ತದೆ.

publive-image

ಸರಿಯಾದ ಸಮಯದಲ್ಲಿ ಈ ಒಂದು ರೋಗಕ್ಕೆ ಸರಿಯಾದ ಚಿಕಿತ್ಸೆ ದೊರಕದೆ ಇದ್ದಲ್ಲಿ ದೊಡ್ಡ ಸಮಸ್ಯೆಗಳನ್ನು ಮುಂದೆ ಎದುರಿಸಬೇಕಾಗುತ್ತದೆ. ಆರಂಭಿಕ ಲಕ್ಷಣಗಳು ಕಂಡ ಕೂಡಲೇ ಇದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ಮೂತ್ರನಾಳದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಾಣಿಸುವುದು. ಈ ರೀತಿಯ ಸಮಸ್ಯೆಗಳು ಕಂಡಾಗು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ವಿಳಂಬ ಮಾಡಿದಲ್ಲಿ ಈ ಸೋಂಕು ಮೂತ್ರಪಿಂಡಕ್ಕೆ ಆವರಿಸಿಕೊಂಡು ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳನ್ನ ಡಯಾಲಸಿಸ್ ಮೇಲೆ ಬದುಕುಬೇಕಾದ ಭೀಕರತೆಯನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ:ನುಗ್ಗೆಕಾಯಿ ಅಲ್ಲ, ನುಗ್ಗೆ ಎಲೆಯ ಪುಡಿಯಲ್ಲಿದೆ ಪವರ್‌.. ದಿನ ಟೀಯಂತೆ ಕುಡಿದರೆ ಏನೆಲ್ಲಾ ಆಗುತ್ತೆ ಗೊತ್ತಾ?

Advertisment

ಇನ್ನು ಯುಎಸ್​ನ ಹೊಸ ಅಧ್ಯಯನ ಹೇಳುವ ಪ್ರಕಾರ, ಫ್ರಿಡ್ಜ್​ನಲ್ಲಿ ಶೇಖರಿಸಿಟ್ಟ ಮಾಂಸಗಳಿಂದಾಗಿಯೇ ಸುಮಾರು 5 ಲಕ್ಷಕ್ಕೂ ಹೆಚ್ಚು ಮೂತ್ರನಾಳ ಸೋಂಕಿನ ಸಮಸ್ಯೆಗಳು ಕಂಡು ಬಂದಿವೆ ಎಂದು ಹೇಳಲಾಗಿದೆ. ಹೀಗಾಗಿ ಮನೆಯಲ್ಲಿ ಫ್ರಿಡ್ಜ್​ನಲ್ಲಿ ಮಾಂಸಾಹಾರವನ್ನು ಶೇಖರಿಸುವ ಮೊದಲು ಹುಷಾರಾಗಿರಿ. ಇನ್ನು ಒಂದು ಅಚ್ಚರಿಯ ಹಾಗೂ ಆತಂಕದ ವಿಷಯ ಅಂದ್ರೆ ಅದು ಶೇಕಡಾ 30 ರಿಂದ 70ರಷ್ಟು ಶೇಖರಿಸಿಟ್ಟ ಮಾಂಸದಲ್ಲಿ ಯುಟಿಐನಲ್ಲಿ ಕಾರಣವಾಗುವ ಇ-ಕೋಲಿ ಬ್ಯಾಕ್ಟಿರಿಯಾ ಕಂಡು ಬಂದಿವೆ ಎಂದು ಯುಎಸ್​ ಅಧ್ಯಯನಕಾರರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment