ಪಿಜಿ ಬಳಿ ಪ್ರಿಯತಮೆಯನ್ನ ಕರೆಯಿಸಿಕೊಂಡ ಪ್ರಿಯಕರ
ಇಂಟರ್ನ್ಗೆ ಬಂದಿದ್ದ ಯುವತಿಗೆ ಕ್ಯಾಚ್ ಹಾಕಿದ್ದ ರವಿ
ಬೆಳಗಿನ ಜಾವ ರಾಡ್ನಿಂದ ಹಲ್ಲೆ ಮಾಡಿದ ಆರೋಪಿ..!
ಬೆಂಗಳೂರು: ಫೋನ್ ಕಾಲ್ ಅವೈಡ್ ಮಾಡಿದ್ದಕ್ಕೆ ಅನುಮಾನಗೊಂಡ ಪ್ರಿಯಕರನೊಬ್ಬ, ತನ್ನ ಪ್ರೇಯಸಿಗೆ ರಾಡ್ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಮೈಕೋಲೇಔಟ್ನ ಪಿ.ಜಿಯೊಂದರ ಬಳಿ ನಡೆದಿದೆ.
ಸ್ನೇಹ ಸಿಕ್ತಾ ಚಟರ್ಜಿ (26) ಎನ್ನುವರು ಹಲ್ಲೆಗೊಳಗಾದ ಯುವತಿ. ರವಿಕುಮಾರ್ (28) ಹಲ್ಲೆ ಮಾಡಿದ ಆರೋಪಿ. ಟೆಕ್ಕಿಯಾಗಿದ್ದ ರವಿಕುಮಾರ್ ಕಳೆದ 1 ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಗೆ ಇಂಟರ್ನ್ ಆಗಿ ಯುವತಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಇತ್ತೀಚೆಗೆ ಯುವತಿ ಬೇರೆ ಕಂಪನಿಗೆ ಸೇರಿಕೊಂಡು ಅಂತರ ಕಾಯ್ದುಕೊಂಡು ಫೋನ್ ಕಾಲ್ಗಳನ್ನ ಅವೈಡ್ ಮಾಡಿದ್ದಳು. ಕರೆಗಳಿಗೂ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡಿದ್ದನು ಎನ್ನಲಾಗಿದೆ. ಇದರಿಂದ ಕೋಪಗೊಂಡು ಆ.2 ರಂದು ಬೆಳಗಿನ ಜಾವ 3.30ರ ಸುಮಾರಿಗೆ ತನ್ನ ಪಿಜಿ ಬಳಿ ಕರೆಯಿಸಿಕೊಂಡು ಕಬ್ಬಿಣದ ರಾಡ್ನಿಂದ ಯುವತಿ ತಲೆಗೆ ಹಲ್ಲೆ ಮಾಡಿದ್ದನು. ಇದರಿಂದ ತೀವ್ರ ರಕ್ತ ಸ್ರಾವವಾಗುತ್ತಿದ್ದ ಆಕೆಯನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಸಂಬಂಧ ಮೈಕೋಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಆರೋಪಿ ರವಿಕುಮಾರ್ನನ್ನು ಅರೆಸ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ