/newsfirstlive-kannada/media/post_attachments/wp-content/uploads/2024/04/LOVE-1.jpg)
ಹರಿಯಾಣದ ಬಹದುರ್ಗಢ್​​ನಲ್ಲಿ ಲೀವಿಂಗ್ ರಿಲೇಷನ್​ಶಿಪ್​​ನಲ್ಲಿದ್ದ ಜೋಡಿಯೊಂದು 7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗರ್ವಿತ್ (25), ನಂದಿನಿ (22) ಜೀವ ಕಳೆದುಕೊಂಡ ಪ್ರೇಮಿಗಳು.
ಇದನ್ನೂ ಓದಿ:ವಿಶ್ವದಾದ್ಯಂತ ರಾಮಾಯಣ ಹಬ್ಬ, ಒಂದು ದೇಶ, ಒಂದು ಚುನಾವಣೆ -ಬಿಜೆಪಿ ಪ್ರಣಾಳಿಕೆ ಹೈಲೈಟ್ಸ್…!
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು, ಯೂಟ್ಯೂಬ್ ಹಾಗೂ ಫೇಸ್​ಬುಕ್​ಗೆ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇವರ ಡೆಹ್ರಾಡೂನ್​​ನಿಂದ ಬಹದುರ್ಗಢ್​​ಗೆ ಬಂದಿದ್ದರು. ಇವರ ಜೊತೆಗೆ ಅವರ ತಂಡ ಕೂಡ ಬಂದಿತ್ತು.
ಇದನ್ನೂ ಓದಿ:ಇಸ್ರೇಲ್ ಮೇಲೆ ಯುದ್ಧ ಸಾರಿದ ಇರಾನ್; ಸ್ಟ್ರಾಂಗ್ ಮೆಸೇಜ್ ಕೊಟ್ಟ ಭಾರತ..
ಒಂದು ದಿನ ಗರ್ವಿತ್​ ಮತ್ತು ನಂದಿನಿ ಶೂಟ್​ ಮುಗಿಸಿಕೊಂಡು ಮನೆಗೆ ಲೇಟ್ ಆಗಿ ಬಂದಿದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇಬ್ಬರು ಮಾತಿಗೆ ಮಾತು ಬೆಳಸಿ ಬಿಲ್ಡಿಂಗ್​​ನಿಂದ ಜಿಗಿದಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರು ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಟುಂಬಸ್ಥರಿಗೂ ಮಾಹಿತಿ ನೀಡಿ, ತನಿಖೆಯ ಬಗ್ಗೆ ತಿಳಿಸಿದ್ದಾರೆ. ತನಿಖೆಯನ್ನು ಮುಂದುವರಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us