/newsfirstlive-kannada/media/post_attachments/wp-content/uploads/2024/06/YS-Jagan-Swearing.jpg)
ಆಂಧ್ರಪ್ರದೇಶ ವಿಧಾನಸಭಾ ಅಧಿವೇಶನ ಇಂದು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗಿದೆ. ವಿಧಾನಸಭಾ ಚುನಾವಣೆ ಮುಗಿದ ಬಳಿಕ ಮೊದಲ ಬಾರಿಗೆ ಸಿಎಂ ಚಂದ್ರಬಾಬು ನಾಯ್ಡು ಅವರು ಅಧಿವೇಶನ ಕರೆದಿದ್ದು, ಜನಪ್ರತಿನಿಧಿಗಳಾಗಿ ಆಯ್ಕೆಯಾದ ನೂತನ ಶಾಸಕರು, ಸಚಿವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಆಂಧ್ರ ರಾಜಕೀಯಕ್ಕೆ ಮೆಗಾ ಟ್ವಿಸ್ಟ್; ಜಗನ್ ವಿರುದ್ಧ ತೊಡೆ ತಟ್ಟಿದ ಚಂದ್ರಬಾಬು, ಪವನ್ ಕಲ್ಯಾಣ್; ಮುಂದೇನು?
ವಿಧಾನಸಭಾ ಅಧಿವೇಶನದ ಮೊದಲ ದಿನವೇ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಾಯಿತು. ಡಿಸಿಎಂ ಪವನ್ ಕಲ್ಯಾಣ್ ಅವರು ಸೇರಿದಂತೆ ಟಿಡಿಪಿ, ಜನಸೇನಾ ಪಕ್ಷದ ನೂತನ ಶಾಸಕರು ವಿಧಾನಸಭೆಯ ಪ್ರತಿಜ್ಞಾವಿಧಿಯನ್ನು ಸ್ವೀಕಾರ ಮಾಡಿದರು.
No #Pawankalyan Fan Will Pass without liking this iconic Post ?
This Will Remembered Forever #PawanKalyanAneNenu#APAssemblypic.twitter.com/YNhkRP0Q4H
— WORLD CUP FOLLOWER (@BiggBosstwts) June 21, 2024
ಟಿಡಿಪಿ, ಜನಸೇನಾ ಪಕ್ಷದ ಶಾಸಕರು, ಸಚಿವರು ವಿಧಾನಸಭಾ ಸದಸ್ಯತ್ವ ಸ್ವೀಕಾರ ಮಾಡುವ ಸಂಭ್ರಮ ಒಂದು ಕಡೆಯಾದ್ರೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದು ಗಮನ ಸೆಳೆಯಿತು.
ಸಿಎಂ ಆಗಿದ್ದ ಜಗನ್ ಮೋಹನ್ ರೆಡ್ಡಿ ಅವರ YSRCP ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು. ಅಧಿಕಾರ ಕಳೆದುಕೊಂಡ ಬಳಿಕ ಜಗನ್ ಅವರು ಮೊದಲ ಬಾರಿಗೆ ಅಸೆಂಬ್ಲಿಗೆ ಆಗಮಿಸಿದ್ದು, ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
వైఎస్ జగన్ మోహన్ రెడ్డి అనే నేను!!#YSJaganpic.twitter.com/NLcDbeBX5A
— L?vely YSRCP (@LovelyPammi)
వైఎస్ జగన్ మోహన్ రెడ్డి అనే నేను!!#YSJaganpic.twitter.com/NLcDbeBX5A
— Lovely YSRCP (@LovelyPammi) June 21, 2024
">June 21, 2024
ವೈಎಸ್ ಜಗನ್ ಅವರು ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಜಗನ್ ಅನೆ ನೇನು ಎನ್ನುತ್ತಾ ಶಾಸನ ಸಭೆಯ ನಿಯಮಾನುಸಾರ, ಕಟ್ಟುಪಾಡುಗಳನ್ನು ಪಾಲಿಸುತ್ತೇನೆ ಎನ್ನುತ್ತಾ ಸಭಾ ಮರ್ಯಾದೆ, ಸಂಪ್ರದಾಯ ಪಾಲಿಸುತ್ತೇನೆ ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ