newsfirstkannada.com

ಆಂಧ್ರ ರಾಜಕೀಯಕ್ಕೆ ಮೆಗಾ ಟ್ವಿಸ್ಟ್‌; ಜಗನ್ ವಿರುದ್ಧ ತೊಡೆ ತಟ್ಟಿದ ಚಂದ್ರಬಾಬು, ಪವನ್ ಕಲ್ಯಾಣ್‌; ಮುಂದೇನು?

Share :

Published June 4, 2024 at 8:59pm

Update June 4, 2024 at 9:00pm

    ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ YSRC​​​ಗೆ ಹೀನಾಯ ಸೋಲು

    5 ವರ್ಷಗಳ ಬಳಿಕ ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ದೊಡ್ಡ ಗೆಲುವು

    ಯಾರೂ ಊಹಿಸಿರದ ರೀತಿಯಲ್ಲಿ ಜಗನ್‌ ಸರ್ಕಾರ ಪತನಗೊಂಡಿದೆ

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮತ್ತೊಮ್ಮೆ ಗೆದ್ದು ಬಂದಿದ್ದಾರೆ. ಜಿದ್ದಾಜಿದ್ದಿನ ಕದನದಲ್ಲಿ ಟಿಡಿಪಿ ದಿಗ್ವಿಜಯ ಸಾಧಿಸಿದೆ. ಹಾಲಿ ಸಿಎಂ ಜಗನ್​​​​ ಮೋಹನ್​​ ರೆಡ್ಡಿಗೆ ಭಾರೀ ಮುಖಭಂಗವಾಗಿದೆ. ಫಿನಿಕ್ಸ್‌ನಂತೆ ಎದ್ದು ಬಂದ ಚಂದ್ರಬಾಬು ನಾಯ್ಡು ಭರ್ಜರಿ ಬಹುಮತದೊಂದಿಗೆ ಮತ್ತೊಮ್ಮೆ ಆಂಧ್ರಾಧಿಪತಿಯಾಗಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ! 

ಚುನಾವಣಾ ಫಲಿತಾಂಶದ ದಿನ ಆಂಧ್ರಪ್ರದೇಶದ ರಾಜಕೀಯಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಬರೋಬ್ಬರಿ 5 ವರ್ಷಗಳ ಬಳಿಕ ಟಿಡಿಪಿ ಮತ್ತು ಜನಸೇನಾ ಮತ್ತು ಬಿಜೆಪಿ ಮೈತ್ರಿಗೆ ಗೆಲುವಾಗಿದೆ. ಸಿಎಂ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​​ ಕಾಂಗ್ರೆಸ್​​​ಗೆ ಹೀನಾಯ ಸೋಲು ಉಂಟಾಗಿದೆ. ಲೋಕ ಸಮರದ ಜೊತೆ ಜೊತೆಯಲ್ಲೇ ನಡೆದಿದ್ದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ಪವನ್​​ ಕಲ್ಯಾಣ್​​ ಅವರ ಮೈತ್ರಿ ದೋಸ್ತಿ ಜಯ ಸಾಧಿಸಿದೆ.

ಹಾಲಿ ಸಿಎಂ ಜಗನ್​​ಗೆ ಭಾರೀ ಮುಖಭಂಗ
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಟಿಡಿಪಿ ಮತ್ತು ಪವನ್​ ಕಲ್ಯಾಣ್​ ಅವರ ಜನಸೇನಾ ಪಕ್ಷ ದಿಗ್ವಿಜಯ ಸಾಧಿಸಿದೆ. ವೈಎಸ್​​ಆರ್​ಸಿಪಿ ಪಕ್ಷದ ಮುಖ್ಯಸ್ಥ, ಹಾಲಿ ಸಿಎಂ ಜಗನ್​​ ಮೋಹನ್​ ರೆಡ್ಡಿಗೆ ಭಾರೀ ಮುಖಭಂಗವಾಗಿದೆ. ಯಾರೂ ಊಹಿಸಿರದ ರೀತಿಯಲ್ಲಿ ಜಗನ್‌ ಸರ್ಕಾರ ಪತನಗೊಂಡಿದೆ.

ಫಿನಿಕ್ಸ್‌ನಂತೆ ಗೆದ್ದು ಬಂದ ಚಂದ್ರಬಾಬು ನಾಯ್ಡು
ಸಾಲು ಸಾಲು ಭ್ರಷ್ಟಾಚಾರದ ಆರೋಪ ಹೊತ್ತು ಜೈಲುವಾಸ ಅನುಭವಿಸಿದ್ದ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು 2024ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಫಿನಿಕ್ಸ್​​​​ನಂತೆ ಎದ್ದು ಬಂದು ಗೆಲುವು ಸಾಧಿಸಿದ್ದಾರೆ. ಪವರ್​​​ ಸ್ಟಾರ್​​​ ಪವನ್​ ಕಲ್ಯಾಣ ನೇತೃತ್ವದ ಜನಸೇನಾ ಪಕ್ಷ ಮತ್ತು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಚಂದ್ರಬಾಬು ನಾಯ್ಡು ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದಾರೆ.

ಜೂನ್​​ 9ರಂದು ನಾಯ್ಡು ಪ್ರಮಾಣ ವಚನ!
ಆಂಧ್ರದ ಡಿಸಿಎಂ ಆಗ್ತಾರಾ ಪವರ್​ ಸ್ಟಾರ್​​​?
ಇತ್ತ ಚುನಾವಣೆಯಲ್ಲಿ ಜಯ ದಾಖಲಿಸುತ್ತಿದಂತೆ ಚಂದ್ರಬಾಬು ನಾಯ್ಡು ಅವರು ಕಳೆದ 5 ವರ್ಷಗಳ ಸರ್ಕಾರದ ಎಲ್ಲಾ ಫೈಲುಗಳನ್ನ ತರಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ತಮ್ಮ ಕನಸಿನ ಅಮರಾವತಿಯಲ್ಲಿ ಜೂನ್‌ 9ರಂದು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಡಿಸಿಎಂ ಯಾರಾಗ್ತಾರೇ ಎಂಬ ಕುತೂಹಲ ಹೆಚ್ಚಾಗಿದೆ.. ಇತ್ತ ಚುನಾವಣೆಯಲ್ಲಿ ಮೊದಲ ಬಾರಿಗೆ ಜಯ ದಾಖಲಿಸಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​​ ಡಿಸಿಎಂ ಆಗ್ತಾರೇ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ: ಬಾಬುಗೆ ಬಂಪರ್‌.. ನಿತೀಶ್ ಕಿಂಗ್‌ ಮೇಕರ್‌; ಮೋದಿಗೆ ಆಘಾತ ಎದುರಾಗ್ತಿದ್ದಂತೆ ಏನೆಲ್ಲಾ ಆಯ್ತು? 

ಒಡಿಶಾದಲ್ಲಿ ಅರಳಿದ ‘ಕಮಲ’.. ಬಿಜೆಡಿಗೆ ಹೀನಾಯ ಸೋಲು
ಆಂಧ್ರದ ಜೊತೆ ಒಡಿಶಾದಲ್ಲೂ ಸರ್ಕಾರ ಬದಲಾವಣೆ ಆಗಿದೆ. ಲೋಕ ಸಮರದ ಹೊತ್ತಲ್ಲೇ ನಡೆದ ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಪಕ್ಷ ಭರ್ಜರಿ ಜಯಭೇರಿ ಬಾರಿಸಿ ನೂತನ ಸರ್ಕಾರ ರಚಿಸಲು ಮುಂದಾಗಿದೆ. ಹಾಲಿ ಸಿಎಂ ನವೀನ್​ ಪಟ್ನಾಯಕ್​​​​​​​​​​​​​ಗೆ ನೇತೃತ್ವದ ಬಿಜು ಜನತಾದಳ ಪಾರ್ಟಿಗೆ ಭಾರೀ ಮುಖಭಂಗ ಉಂಟಾಗಿದೆ. ಈ ಮೂಲಕ ಪಟ್ನಾಯಕ್‌ ಕೋಟೆ ಕಮಲ ಪಾಳಯದ ಪಾಲಾದಂತಾಗಿದ್ದು ಬಿಜು ಪಟ್ನಾಯಕ್‌ ಸ್ಥಾಪಿಸಿದ್ದ ಸಾಮ್ರಾಜ್ಯ ಪತನಗೊಂಡಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರ ರಾಜಕೀಯಕ್ಕೆ ಮೆಗಾ ಟ್ವಿಸ್ಟ್‌; ಜಗನ್ ವಿರುದ್ಧ ತೊಡೆ ತಟ್ಟಿದ ಚಂದ್ರಬಾಬು, ಪವನ್ ಕಲ್ಯಾಣ್‌; ಮುಂದೇನು?

https://newsfirstlive.com/wp-content/uploads/2024/06/Chandrababu-naidu-Pawan-kalyan.jpg

Load More