newsfirstkannada.com

ಚೌಧರಿ ಗೆಲುವಿನ ವಿರುದ್ಧ ಬೌನ್ಸರ್ ಎಸೆದ ಪಠಾಣ್; ದೀದಿ ಉರುಳಿಸಿದ ಗಾಳದಲ್ಲಿ ‘ಕೈ’ನಾಯಕನ ಸತತ 6ನೇ ಗೆಲುವಿನ ಕನಸು..!

Share :

Published March 23, 2024 at 1:47pm

  ಗುಜರಾತಿನ ಯೂಸುಫ್ ಪಠಾಣ್​ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೆ

  ‘ಕ್ರಿಕೆಟ್ ಬೇರೆ, ರಾಜಕೀಯ ಬೇರೆ’ ಎಂದು ತೊಡೆ ತಟ್ಟಿದ ಚೌಧರಿ

  ಬಹರಂಪುರ ಕ್ಷೇತ್ರ ಇತಿಹಾಸ ಏನು ಹೇಳ್ತಿದೆ? ಯಾರೆಲ್ಲ ಗೆದ್ದಿದ್ದಾರೆ?

ದೀದಿ.. ದ ಲೇಡಿ.. ಮಮತಾ ಬ್ಯಾನರ್ಜಿ ನಾಡಿನ ಬಹರಂಪುರ ಲೋಕಸಭಾ ಕ್ಷೇತ್ರ ಭಾರೀ ಚರ್ಚೆಯಲ್ಲಿದೆ. ಕಾರಣ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರ ಚುನಾವಣಾ ಕಹಳೆ. ತೃಣಮೂಲ ಕಾಂಗ್ರೆಸ್​ನಿಂದ ಅಖಾಡಕ್ಕೆ ಇಳಿದಿದ್ದು, ಭರ್ಜರಿ ಮತಬೇಟೆ ನಡೆಸ್ತಿದ್ದಾರೆ. ಇದು, ಸಹಜವಾಗಿಯೇ ಅಲ್ಲಿನ ಕಾಂಗ್ರೆಸ್​​ ಪಾಳಯದ ಕಣ್ಣು ಕೆಂಪಾಗಿಸಿದೆ. ಯಾಕಂದರೆ ಕಳೆದ 20 ವರ್ಷಗಳಿಂದ ಬಹರಂಪುರ ಲೋಕಸಭಾ ಕ್ಷೇತ್ರ, ಅಧೀರ್ ರಂಜನ್ ಚೌಧರಿ ಹಿಡಿತದಲ್ಲಿದೆ.

ಲೋಕಸಭೆಯ ಕಾಂಗ್ರೆಸ್​ ನಾಯಕರೂ ಆಗಿರುವ ಅಧೀರ್ ರಂಜನ್ ಚೌಧರಿಗೆ, ಯೂಸುಫ್ ಪಠಾಣ್​ ಅವರ ರಾಜಕೀಯ ಎಂಟ್ರಿ ನುಂಗಲಾರದ ತುತ್ತಾಗಿದೆ. ಇಷ್ಟು ವರ್ಷಗಳಿಂದ ನಿರಾಯಸವಾಗಿ ಗೆದ್ದುಕೊಂಡು ಬರ್ತಿದ್ದ ಚೌಧರಿಗೆ ಈ ಸಲ ಗೆಲುವು ಅಷ್ಟು ಸಲಭವಿಲ್ಲ. ಸೋತರೆ ಲೋಕಸಭೆಯ ಕಾಂಗ್ರೆಸ್​ ನಾಯಕನಿಗೆ ಸೋಲು ಎಂಬ ಹಣಪಟ್ಟಿ. ಗೆದ್ದರೆ ಪಕ್ಷದಲ್ಲಿ ಮತ್ತಷ್ಟು ಹಿಡಿತ ಸಿಗುವ ಖುಷಿ. ಇದೇ ಕಾರಣಕ್ಕೆ ಮಮತಾ ಬ್ಯಾನರ್ಜಿ ಹಾಕಿರುವ ಸವಾಲನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಚೌಧರಿ, ‘ರಾಜಕೀಯ, ಕ್ರಿಕೆಟ್ ಬೇರೆ ಬೇರೆ’ ಎನ್ನುತ್ತಲೇ ಪಠಾಣ್ ವಿರುದ್ಧ ತೊಡೆ ತಟ್ಟಿದ್ದಾರೆ.

ಕ್ಷೇತ್ರದ ಇತಿಹಾಸ ಏನು ಹೇಳ್ತದೆ..?

ಬಹರಂಪುರ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಚುನಾವಣೆ ನಡೆದಿದ್ದು 1952 ರಲ್ಲಿ. ಮೊದಲ ಚುನಾವಣೆಯಲ್ಲಿ ತ್ರಿಡಿಬ್ ಚೌಧರಿ ಹುಟ್ಟು ಹಾಕಿರುವ ಆರ್​ಎಸ್​ಪಿ (Revolutionary Socialist Party). ತ್ರಿಡಿಬ್ ಚೌಧರಿ ಅವರು ಸತತ 7 ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿ ಕಾರುಭಾರು ನಡೆಸಿದ್ದರು. ಅಂದರೆ 1952ರಿಂದ 1980ವರೆಗೂ ನಡೆದ ಚುನಾವಣೆಯಲ್ಲಿ ಆರ್​ಎಸ್​ಪಿ ಪಕ್ಷವೇ ಇಲ್ಲಿ ಮೇಲುಗೈ ಸಾಧಿಸಿತ್ತು. ಆದರೆ 1984ರಲ್ಲಿ ಮೊದಲ ಬಾರಿಗೆ ಬಹರಂಪುರ ಲೋಕಸಭೆ ಕ್ಷೇತ್ರವು ಕಾಂಗ್ರೆಸ್​ ಪಾಲಾಯಿತು. ಕಾಂಗ್ರೆಸ್​ ನಾಯಕ ಅತೀಶ್ ಚಂದ್ರ ಸಿಹ್ನ ತಮ್ಮ ತೆಕ್ಕೆಗೆ ಪಡೆದುಕೊಂಡರು.

ಇದನ್ನೂ ಓದಿ: ಚುನಾವಣಾ ಅಖಾಡದಲ್ಲಿ ಸ್ವರಾಜ್ ಕುಟುಂಬದ ಕುಡಿ; ಕಾನೂನು ಪಾಂಡಿತ್ಯ ಹೊಂದಿರೋ ಬಾನ್ಸುರಿ ಯಾರು..?

ಆದರೆ 1989ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಆರ್​ಎಸ್​ಪಿ ಮತ್ತೆ ಕ್ಷೇತ್ರವನ್ನು ಮರುಪಡೆದುಕೊಂಡಿತ್ತು. 1989ರಿಂದ ಮುಂದಿ ಎರಡು ಅವಧಿವರೆಗೆ ಬಹರಂಪುರ ಆರ್​​ಎಸ್​ಪಿ ಕೋಟೆಯಾಗಿತ್ತು. ಆ ಕೋಟೆಯನ್ನು ಮತ್ತೆ ಛಿದ್ರ ಮಾಡಿದ್ದು, ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ. 1999 ರಿಂದ ಚೌಧರಿ ಸತತವಾಗಿ ಗೆಲುವು ಸಾಧಿಸಿಕೊಂಡು ಬರ್ತಿದ್ದಾರೆ. 1999, 2004, 2009, 2014, 2019ರಲ್ಲಿ ಅಂದರೆ ಐದು ಬಾರಿ ಚೌಧರಿ ಸಂಸದರಾಗಿ ಆಯ್ಕೆಯಾಗಿ ಲೋಕಸಭೆಯನ್ನು ಪ್ರವೇಶ ಮಾಡಿದ್ದಾರೆ. ಹೀಗಾಗಿ ರಂಜನ್ ಚೌಧರಿಗೆ ಈ ಬಾರಿಯ ಚುನಾವಣೆ ಸಹಜವಾಗಿಯೇ ಪ್ರತಿಷ್ಠೆಯಾಗಿದೆ.

ಚೌಧರಿಗೆ ಗೆಲುವು ಸುಲಭವಿಲ್ಲ..!

ಬುರ್ವಾನ್, ಕಂದಿ, ಭರತ್ ಪುರ್, ರೆಜಿನಗರ್, ಬೆಲ್ದಂಗ, ಬಹರಂಪುರ, ನಒದ (Naod) ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಇಲ್ಲಿ, 6 ವಿಧಾನಸಭಾ ಕ್ಷೇತ್ರಗಳು ಮಮತಾ ಬ್ಯಾನರ್ಜಿ ಪಕ್ಷದ ತೆಕ್ಕೆಯಲ್ಲಿದೆ. ಅಂದರೆ 6 ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಶಾಸಕರು ದರ್ಬಾರ್ ನಡೆಸ್ತಿದ್ದಾರೆ. ಬಹರಂಪುರ ವಿಧಾನಸಭಾ ಕ್ಷೇತ್ರ ಮಾತ್ರ ಬಿಜೆಪಿ ಹಿಡಿತದಲ್ಲಿದ್ದು, ಕಾಂಗ್ರೆಸ್​​ಗೆ ನೆಲೆಯೇ ಇಲ್ಲದಂತಿದೆ. ಹಿಂದೂ ಸಮುದಾಯಗಳೇ ಹೆಚ್ಚಿದ್ದರೂ ಈ ಕ್ಷೇತ್ರದಲ್ಲಿ, ಮುಸ್ಲಿಂ ಸಮುದಾಯದ ಮತಗಳು ಕೂಡ ನಿರ್ಣಾಯಕ. ಮುಸ್ಲಿಂ ಕಮ್ಯುನಿಟಿಯಿಂದ ಶೇಕಡಾ 52, ಕ್ರಿಶ್ಚಿಯನ್ ಶೇಕಡಾ 0.25, ಜೈನ್ ಶೇಕಡಾ 0.4, ಎಸ್​​ಪಿ ಶೇ. 13.2, ಎಸ್​ಟಿ ಶೇ. 0.9, ಸಿಖ್ ಸಮುದಾಯದ ಶೇಕಡ 0.1 ರಷ್ಟು ಮತಗಳಿವೆ. ಯುಸೂಫ್ ಪಠಾಣ್ ನಿಂತಿರುವ ಹಿನ್ನೆಲೆಯ್ಲಲಿ ಬಹುತೇಕ ಅಲ್ಪಸಂಖ್ಯಾತ ಮತಗಳು ಚೌಧರಿಗೆ ಬೀಳುವ ಸಾಧ್ಯತೆ ಕಡಿಮೆ ಇದೆ.

ನಾಲಿಗೆ ಮೇಲೆ ಹಿಡಿತ ಇಲ್ಲ

ಇನ್ನು ಐದು ಬಾರಿ ಸಂಸದರಾಗಿ ಆಯ್ಕೆ ಆಗುತ್ತಿರುವ ಚೌಧರಿ ವಿರುದ್ಧ ಕ್ಷೇತ್ರದಲ್ಲಿ ಸಹಜವಾಗಿಯೇ ಅಸಮಾಧಾನಗಳಿವೆ ಎಂಬ ವರದಿಗಳಿವೆ. ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚು ಸುದ್ದಿಯಾಗುವ ಚೌಧರಿಗೆ ಪಠಾಣ್ ದೊಡ್ಡ ಹೊಡೆತ ಕೊಡಲಿದ್ದಾರೆ ಎಂಬ ಮಾತುಗಳಿವೆ. ಇನ್ನು, ಯೂಸುಫ್ ಪಠಾಣ್ ಗೆಲುವು ಕೂಡ ಅಷ್ಟು ಸುಲಭವಿಲ್ಲ. ಜನಪ್ರಿಯತೆ ಇದ್ದರೂ ರಾಜಕೀಯ ಅನುಭವದ ಕೊರತೆ, ಚುನಾವಣಾ ತಂತ್ರಗಳಲ್ಲಿ ಫೆಲ್ಯೂರ್ ಆಗಲೂ ಬಹುದು. ಇನ್ನೊಂದು ವಿಚಾರ ಅಂದರೆ ಯೂಸುಫ್ ಪಠಾಣ್ ಮೂಲತಃ ಗುಜರಾತ್​ನ ವಡೋದರ ಮೂಲದವರು. ಬಹರಂಪುರಕ್ಕೆ ವಲಸೆ ಬಂದಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಜನ ಒಪ್ಪಿಕೊಳ್ತಾರಾ ಎಂಬ ಪ್ರಶ್ನೆ ಕೂಡ ಇದೆ. ಈಗಾಗಲೇ ವಿಪಕ್ಷಗಳು ಅವರು ಹೊರಗಿನವರು ಎಂಬ ಅಪಸ್ವರವನ್ನು ಎತ್ತಿ ಮತದಾರರ ತಲೆಗೆ ತುಂಬುತ್ತಿದ್ದಾರೆ. ಆದರೂ ಅವರ ಬೆನ್ನಿಗೆ ಸಹೋದರ ಇರ್ಫಾನ್ ಪಠಾಣ್, ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್​ ಇರುವುದರಿಂದ ತೀವ್ರ ಕುತೂಹಲ ಮೂಡಿಸಿದೆ ಬಹರಂಪುರ ಕ್ಷೇತ್ರ.

ಪಠಾಣ್ ಹೊರಗಿನವರು ಎಂಬ ಎದುರಾಳಿ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಯೂಸುಫ್, ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಿಂದ ಬಂದು ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ. ಹೀಗಿರುವಾಗ ನಾನು ಇಲ್ಲಿಂದ (ಬಂಗಾಳ) ಸ್ಪರ್ಧಿಸಿದರೆ ಏನು ತೊಂದರೆ? ನಾನು ಬಂಗಾಳದ ಮಗು, ನಾನು ಬದುಕಲು ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್ ನಾಯಕ ಚೌಧರಿಗೆ ಕಠಿಣ ಸ್ಪರ್ಧೆ ನೀಡಿಯೇ ತೀರುತ್ತೇನೆ ಎಂದು ಪಠಾಣ್ ಹೇಳಿಕೊಂಡಿದ್ದಾರೆ.

ತಾಯಿ, ಮಣ್ಣು, ಜನರ ಕಲ್ಯಾಣಕ್ಕಾಗಿ ಬದ್ಧತೆಯೊಂದಿಗೆ ಹೋರಾಟಕ್ಕೆ ಧುಮುಕಿದ್ದಾರೆ. ಅವರ ಆಗಮನವು ಹೊಸ ಯುಗಕ್ಕೆ ನಾಂದಿ ಹಾಡಿದೆ. ಭರವಸೆ ಮತ್ತು ಆಶಾವಾದವಾಗಿದೆ -ಟಿಎಂಸಿ

ಪಠಾಣ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿರುವ ಟಿಎಂಸಿ, ಕಾಂಗ್ರೆಸ್ ಕ್ಷೇತ್ರವನ್ನು ಕಿತ್ತುಕೊಳ್ಳುವ ಹುಮ್ಮಸ್ಸಿನಲ್ಲಿದೆ. ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಟಾರ್​ ಆಗಿರುವ ಯೂಸುಫ್, ಹೊಡಿಬಡಿ ಆಟದಲ್ಲಿ ಭಾರೀ ಜನಪ್ರಿಯತೆಗಳಿಸಿದವರು. ಭಾರತದ ಪರ 57 ಏಕದಿನ ಪಂದ್ಯಗಳನ್ನು, 22 ಟಿ-20 ಪಂದ್ಯಗಳನ್ನು ಆಡಿ ಗಮನ ಸೆಳೆದಿದ್ದಾರೆ. ಅದೇ ರೀತಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಲ್ಲಿ 174 ಪಂದ್ಯಗಳನ್ನು ಆಡಿ 143.0 ಸ್ಟ್ರೈಕ್​ರೇಟ್​ನೊಂದಿ 3204 ರನ್​ಗಳಿಸಿದ್ದಾರೆ. ಕ್ರಿಕೆಟ್ ವೃತ್ತಿ ಬದುಕಿನ ಅಲ್ಪಾವಧಿಯಲ್ಲೇ ಭರ್ಜರಿ ಹೆಸರು ಮಾಡಿರುವ ಯೂಸುಫ್​ಗೆ ರಾಜಕೀಯ ಹೊಸ ಕ್ಷೇತ್ರ ಮತ್ತು ಹೊಸ ಚಾಲೇಂಜ್. ಪಠಾಣ್ ಅವರ ರಾಜಕೀಯ ಭವಿಷ್ಯವು ಜೂನ್ 4 ರಂದು ಗೊತ್ತಾಗಲಿದೆ. ನಾಲ್ಕನೇ ಹಂತ ಅಂದರೆ ಮೇ 13 ರಂದು ಮತದಾರ ತಮಗೆ ಪಠಾಣ್ ಬೇಕಾ? ಚೌಧರಿ ಬೇಕಾ? ಎಂದು ನಿರ್ಧರಿಸಲಿದ್ದಾನೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೌಧರಿ ಗೆಲುವಿನ ವಿರುದ್ಧ ಬೌನ್ಸರ್ ಎಸೆದ ಪಠಾಣ್; ದೀದಿ ಉರುಳಿಸಿದ ಗಾಳದಲ್ಲಿ ‘ಕೈ’ನಾಯಕನ ಸತತ 6ನೇ ಗೆಲುವಿನ ಕನಸು..!

https://newsfirstlive.com/wp-content/uploads/2024/03/PARLIMENT.jpg

Load More