ಧೋನಿ ಬಗ್ಗೆ ಗಂಭೀರ ಆರೋಪ! ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದ ಯುವರಾಜ್​ ಸಿಂಗ್​!

author-image
AS Harshith
Updated On
ನಂಬಿಕೆ ಕಳ್ಕೊಂಡ ಯುವರಾಜ್​ ಸಿಂಗ್​ ಶಿಷ್ಯ; ಟೀಮ್​ ಇಂಡಿಯಾದಲ್ಲಿ ಮತ್ತೆ ಚಾನ್ಸ್​ ಸಿಗೋದು ಡೌಟ್​!
Advertisment
  • ಮಗನ ಬದುಕು ಹಾಳು ಮಾಡಿದ್ದು ಧೋನಿ ಎಂದು ಆರೋಪ
  • ಧೋನಿಯನ್ನ ಕ್ಷಮಿಸಲ್ಲ ಎಂದು ಹೇಳಿದ್ದ ಮಾಜಿ ಕ್ರಿಕೆಟಿಗ
  • ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ ಎಂದ ಯೋಗರಾಜ್​

ಯುವರಾಜ್​ ಸಿಂಗ್​​​ರವರ ತಂದೆ ಯೋಗರಾಜ್​ ಸಿಂಗ್​ ತನ್ನ ಮಗನ ಬದುಕು ಹಾಳು ಮಾಡಿದ್ದು ಧೋನಿ ಎಂದು ಆರೋಪಿಸಿದ್ದರು. ನಾನು ಆತನನ್ನು ಕ್ಷಮಿಸಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಯ ಬೆನ್ನಲ್ಲೇ ಯುವರಾಜ್​ ಸಿಂಗ್​ ತನ್ನ ತಂದೆಯ ಬಗ್ಗೆ ಹೇಳಿದ ಹೇಳಿಕೆಯೊಂದು ವೈರಲ್​ ಆಗಿದೆ. ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳಿರುವ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯೋಗರಾಜ್​​ ಸಿಂಗ್​ ಭಾರತದ ಮಾಜಿ ಕ್ರಿಕೆಟಿಗ, ನಟ ಕೂಡ ಹೌದು. ಇವರು ಸಂದರ್ಶನವೊಂದರಲ್ಲಿ ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಯುವರಾಜ್​ ಸಿಂಗ್​​ನ ವೃತ್ತಿ ಜೀವನ ಕೊನೆಗೊಳ್ಳಲು ಧೋನಿ ಕಾರಣ. ಯುವಿ ಇನ್ನೂ 4-5 ವರ್ಷ ಆಡಬಹುದಿತ್ತು ಎಂದಿದ್ದರು. ಜೊತೆಗೆ ಕಪಿಲ್​ ದೇವ್​ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು. ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೀಗ ಇದರ ಬೆನ್ನಲ್ಲೇ ಯುವರಾಜ್​ ಸಿಂಗ್​ ತನ್ನ ತಂದೆಯ ಬಗ್ಗೆ ಮಾತನಾಡಿದ ಸಂಗತಿ ಇದೀಗ ವೈರಲ್​ ಆಗಿದೆ.

[caption id="attachment_84391" align="alignnone" width="800"]ಯೋಗರಾಜ್​ ಸಿಂಗ್​ (ತಂದೆ)- ಯುವರಾಜ್​ ಸಿಂಗ್​ (ಮಗ)- ಧೋನಿ ಯೋಗರಾಜ್​ ಸಿಂಗ್​ (ತಂದೆ)- ಯುವರಾಜ್​ ಸಿಂಗ್​ (ಮಗ)- ಧೋನಿ[/caption]

ಇದನ್ನೂ ಓದಿ: ಕ್ರಿಕೆಟಿಗನಾಗದಿದ್ದರೂ ಏನಂತೆ… ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾನೆ ಅನಿಲ್​ ಕುಂಬ್ಳೆ ಮಗ!

9 ತಿಂಗಳ ಹಿಂದೆ ಪಾಡ್​​ಕಾಸ್ಟ್​ವೊಂದರಲ್ಲಿ ಮಾತನಾಡಿದ ಯುವರಾಜ್​ ಸಿಂಗ್​​​, ‘ನಮ್ಮ ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇದು ಅವರು ಗಮನಹರಿಸಬೇಕಾದ ವಿಷಯವಾಗಿದೆ. ಆದರೆ ಅವರು ಅದನ್ನು ಗಂಭೀರವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.


">September 2, 2024

ಯೋಗರಾಜ್​ ಧೋನಿ ಬಗ್ಗೆ ಏನಂದ್ರು?

‘ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಅವರು ಶ್ರೇಷ್ಠ ಕ್ರಿಕೆಟಿಗನಾದರೆ ನನ್ನ ಮಗನ ವಿರುದ್ಧ ಏನು ಮಾಡಿದ್ರು. ಅದು ಈಗ ಬೆಳಕಿಗೆ ಬರುತ್ತಿದೆ. ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ನನ್ನ ಕುಟುಂಬವಾಗಿದ್ದರೂ ಸರಿ ನಾನು ತಪ್ಪು ಮಾಡಿಕೊಂಡದವರನ್ನು ಕ್ಷಮಿಸಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ​ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA

‘ಯಾರಾದರೂ ಯುವರಾಜ್​ ಸಿಂಗ್​ನಂತಹ ಮಗನನ್ನು ಹುಟ್ಟು ಹಾಕಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಗೌತಮ್​ ಗಂಭೀರ್​​, ವಿರೇಂದ್ರ ಸೆಹ್ವಾಗ್​ ಮತ್ತು ಯುವರಾಜ್​​​ ಸಿಂಗ್​​ನಂತರ ಆಟಗಾರರು ಎಂದಿಗೂ ಹುಟ್ಟಿಲ್ಲ ಎಂದಿಗೂ ಹುಟ್ಟಲ್ಲ. ಯುವರಾಜ್​ ಸಿಂಗ್​ಗೆ ಭಾರತ ರತ್ನ ಕೊಡಬೇಕು. ಯುವಿ ಕ್ಯಾನ್ಸರ್​​ ವಿರುದ್ಧ ಹೋರಾಡಿ ಭಾರತಕ್ಕೆ ವಿಶ್ವಕಪ್​​ ಗೆದ್ದು ಕೊಟ್ಟವರು’ ಎಂದು ತಂದೆ ಯೋಗರಾಜ್​ ಸಿಂಗ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment