/newsfirstlive-kannada/media/post_attachments/wp-content/uploads/2024/06/darshan-26.jpg)
ರೇಣುಕಾಸ್ವಾಮಿ ಕೋಲೆ ಕೇಸ್ನಲ್ಲಿ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೇ ಕೇಸ್ ಸಂಬಂಧ ಈಗಾಗಲೇ ಮೋಹಕ ತಾರೆ ರಮ್ಯಾ, ಕಿಚ್ಚ ಸುದೀಪ್, ನಟ ಉಪೇಂದ್ರ ಸೇರಿದಂತೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ತಮ್ಮ ಸ್ನೇಹಿತ ದರ್ಶನ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಾಡಿನ ಮೂಲಕ ದರ್ಶನ್ ನೆನೆದ ಸಚಿವ ಜಮೀರ್.. ಡಿ ಬಾಸ್ನ ಕಾಪಾಡಿ ಎಂದ ಫ್ಯಾನ್ಸ್!
ಇದೀಗ ತಪ್ಪು ಮಾಡಿದಾಗ ಯಾರು ಅವರ ಪರ ನಿಂತು ಕೊಳ್ತಾರೆ ಹೇಳಿ. ತಪ್ಪು ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅಷ್ಟೇ ಅಂತ ರಾಜ್ಯ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮೊದಲ ಬಾರಿಗೆ ಮಾತಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಜಮೀರ್ ಅಹಮದ್ ಖಾನ್ ಅವರು, ದರ್ಶನ್ ಪ್ರಕರಣದಲ್ಲಿ ಯಾರೂ ಒತ್ತಡ ಮಾಡಲು ಹೋಗಿಲ್ಲ. ಮಾಧ್ಯಮದಲ್ಲಿ ಬಂದಿರೋದು ನಾನು ನೋಡಿರುವೆ. ದರ್ಶನ್ ಹಾಗೂ ನಾನು ಸ್ನೇಹಿತರು. ತಪ್ಪು ಮಾಡಿದಾಗ ಯಾರು ಅವರ ಪರ ನಿಂತು ಕೊಳ್ತಾರೆ ಹೇಳಿ. ತಪ್ಪು ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅಷ್ಟೇ. ದರ್ಶನ್ ಇದ್ದರು ಅಷ್ಟೇ ಯಾರಿದ್ದರೂ ಅಷ್ಟೇ. ಕಾನೂನಿನ ಚೌಕಟ್ಟಿನಲ್ಲಿ ಏನಾಗಬೇಕು ಅದು ಆಗತ್ತೆ. ಇನ್ನೂ ದರ್ಶನ ಪ್ರಕರಣದ ವಿಚಾರವಾಗಿ ಬೇರೆಯವರು ಏನು ಹೇಳುತ್ತಾರೋ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ, ದರ್ಶನ್ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್ ಶಾಸಕರು ದರ್ಶನ ಪರ ಮಾತನಾಡ್ತಿರೋದು ಅದು ಅವರ ವೈಯಕ್ತಿಕ ಅಭಿಪ್ರಾಯ ಅಂತ ಹೇಳಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಸಚಿವ ಜಮೀರ್ ಅಹಮದ್ ಖಾನ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ರೀಲ್ಸ್ನಲ್ಲಿ ಜಮೀರ್ ಅಹಮದ್ ಅವರು ತಮ್ಮ ಮನೆಯ ಸಾಕು ಪ್ರಾಣಿ ಬೆಕ್ಕಿಗೆ ಆಹಾರ ನೀಡಿದ್ದರು. ಅದೇ ವಿಡಿಯೋಗೆ ನಟ ದರ್ಶನ್ ನಟನೆಯ ಲಾಲಿ ಹಾಡು ಸಿನಿಮಾದ ಸ್ನೇಹ ಎಂಬ ತಂಗಾಳಿಗೆ ಯಾವ ರೂಪ ಇಲ್ಲ ಎಂಬ ಚರಣವನ್ನು ಹಾಕಿ ಪೋಸ್ಟ್ ಮಾಡಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ