newsfirstkannada.com

Zerodha ಸಂಸ್ಥಾಪಕ ನಿತಿನ್​​​ ಕಾಮತ್​​ಗೆ ಮೈಲ್ಡ್ ಸ್ಟ್ರೋಕ್.. ಅಸಲಿಗೆ ಆಗಿದ್ದೇನು..?

Share :

Published February 26, 2024 at 10:38pm

    ಡೀಹೈಡ್ರೇಷನ್​​ ಮತ್ತು ಅತಿಯಾದ ಕೆಲಸದ ಒತ್ತಡದಿಂದ ಹೀಗೆ ಆಗಿದೆ

    ಮೈಲ್ಡ್ ಸ್ಟ್ರೋಕ್​ಗೆ ತುತ್ತಾದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್‌

    6 ವಾರಗಳ ಹಿಂದೆ ಲಘುವಾದ ಪಾರ್ಶ್ವವಾಯುಗೆ ಒಳಗಾಗಿದ್ದೆ- ನಿತಿನ್

ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಅವರಿಗೆ ಸುಮಾರು ಆರು ವಾರಗಳ ಹಿಂದೆ ಮೈಲ್ಡ್ ಸ್ಟ್ರೋಕ್ ಅಗಿತ್ತಂತೆ. ಕಡಿಮೆ ತೀವ್ರತೆಯ ಪಾರ್ಶ್ವವಾಯುದಿಂದ ಬಳಲುತ್ತಿದ್ದರು ಎಂಬ ಮಾಹಿತಿಯನ್ನು ಸ್ವತಃ ನಿತಿನ್ ಕಾಮತ್‌ ಅವರೇ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ: ರಾಜ್ಯಸಭಾ ನಂಬರ್‌ ಗೇಮ್‌ನಲ್ಲಿ ಗೆಲ್ಲೋದು ಯಾರು? ಚುನಾವಣೆಯ ಪ್ರಕ್ರಿಯೆ ಹೇಗಿರುತ್ತೆ?

ಇನ್ನು ಈ ಸಂಬಂಧ ಟ್ವೀಟ್​ ಮಾಡಿದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಅವರು, ಸುಮಾರು 6 ವಾರಗಳ ಹಿಂದೆ, ನಾನು ಲಘುವಾದ ಪಾರ್ಶ್ವವಾಯುಗೆ ಒಳಗಾಗಿದ್ದೆ. ನನ್ನ ತಂದೆ ತೀರಿ ಹೋಗಿದ್ದು, ಸರಿಯಾಗಿ ನಿದ್ರೆ ಆಗದೆ, ನಿಶ್ಯಕ್ತಿಯಿಂದ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸದ ಒತ್ತಡ ಇವುಗಳಲ್ಲಿ ಯಾವುದಾದರೂ ಒಂದು ಸಂಭವನೀಯ ಕಾರಣಗಳಾಗಿರಬಹುದು. ಮುಖವು ಸ್ವಲ್ಪ ಕುಗ್ಗಿದೆ. ಓದಲು ಅಥವಾ ಬರೆಯಲು ಬರುತ್ತಿಲ್ಲ. ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು 3 ರಿಂದ 6 ತಿಂಗಳು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ನಿತಿನ್​ ಕಾಮತ್ ಅವರು ಫಿಟ್ನೆಸ್ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬಹಿರಂಗವಾಗಿ ಹಲವು ಬಾರಿ ಪೋಸ್ಟ್​ಗಳನ್ನು ಮಾಡಿದ್ದರು. ಇದೀಗ ಪಾರ್ಶ್ವವಾಯು ಅನುಭವಿಸಿದ ಅವರು ಜನರು ತಮ್ಮ ಅಭ್ಯಾಸಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ನಾನಿನ್ನು ಹೆಚ್ಚು ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Zerodha ಸಂಸ್ಥಾಪಕ ನಿತಿನ್​​​ ಕಾಮತ್​​ಗೆ ಮೈಲ್ಡ್ ಸ್ಟ್ರೋಕ್.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/02/nitin-kamath.jpg

Load More