ಡಾ.ರಾಜ್ ಕುಟಂಬಕ್ಕೆ ಆಘಾತ; ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

ಡಾ. ರಾಜ್​ಕುಮಾರ್ ಅವರ ಸಹೋದರಿ ನಿಧನರಾಗಿದ್ದಾರೆ. ಡಾ ರಾಜ್​ಕುಮಾರ್ ಸಹೋದರಿ ನಾಗಮ್ಮ ಗಾಜನೂರಿನ ಮನೆಯಲ್ಲೇ ಮೃತಪಟ್ಟಿದ್ದಾರೆ. ಡಾ ರಾಜ್​ಸಹೋದರಿ ನಾಗಮ್ಮ ಅವರು ಗಾಜನೂರಿನ ಮನೆಯಲ್ಲಿ ವಾಸವಾಗಿದ್ದರು.

author-image
Veenashree Gangani
dr rajkumar sister nagamma(2)
Advertisment
  • ಚಾಮರಾಜನಗರದ ಗಾಜನೂರಿನ‌ ಸ್ವಗ್ರಹದಲ್ಲಿ ನಿಧನ
  • ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ
  • ರಾಜ್ ಕುಮಾರ್‌ ತಲೆಮಾರಿನ ಕೊನೆಯ ಹಿರಿಯ ಸದಸ್ಯೆ

ಚಾಮರಾಜನಗರ: ಡಾ. ರಾಜ್​ಕುಮಾರ್ ಅವರ ಸಹೋದರಿ ನಿಧನರಾಗಿದ್ದಾರೆ. ಡಾ ರಾಜ್​ಕುಮಾರ್ ಸಹೋದರಿ ನಾಗಮ್ಮ ಗಾಜನೂರಿನ ಮನೆಯಲ್ಲೇ ಮೃತಪಟ್ಟಿದ್ದಾರೆ. ಡಾ ರಾಜ್​ಸಹೋದರಿ ನಾಗಮ್ಮ ಅವರು ಗಾಜನೂರಿನ ಮನೆಯಲ್ಲಿ ವಾಸವಾಗಿದ್ದರು. ರಾಜ್​ಕುಮಾರ್ ಸಹೋದರಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 

ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ತನಿಖೆಗೆ ಮೇಜರ್ ಟ್ವಿಸ್ಟ್​.. ​​​ಪಾಯಿಂಟ್​ 1ರಲ್ಲಿ ಸಿಕ್ಕ ಡೆಬಿಟ್​ ಕಾರ್ಡ್​ ರಹಸ್ಯ ಬಯಲು..!

shivanna(9)

ರಾಜ್​ಕುಮಾರ್‌ ತಲೆಮಾರಿನ ಕೊನೆಯ ಹಿರಿಯ ಸದಸ್ಯೆ ಇವರಾಗಿದ್ದರು. ನಾಗಮ್ಮ ಅವರಿಗೆ 92 ವರ್ಷ ವಯಸ್ಸಾಗಿತ್ತು. ಪುನೀತ್​ ರಾಜ್​ಕುಮಾರ್​ ಅವರು ಅಗಲಿ ವರ್ಷಗಳೇ ಕಳೆದು ಹೋಗಿವೆ. ಆದ್ರೆ ಈ ವಿಚಾರ ನಾಗಮ್ಮ ಅವರಿಗೆ ಗೊತ್ತಿರಲಿಲ್ಲ. ಆದರೆ, ಅತ್ತೆ ನಾಗಮ್ಮ ಆಗಾಗ ಅಪ್ಪು ಕಂದ ಬಂದು ನನ್ ನೋಡ್ಕೊಂಡು ಹೋಗು ಅಂತ ಹೇಳ್ತಾನೇ ಇರುತ್ತಿದ್ದರಂತೆ. 

dr rajkumar sister nagamma

ತುಂಬಾ ವಯಸ್ಸಾಗಿದ್ದ ಕಾರಣ ನಾಗಮ್ಮ ಅವರಿಗೆ ಕುಟುಂಬಸ್ಥರು ಅಪ್ಪು ನಿಧನದ ಸುದ್ದಿ ತಿಳಿಸಿರಲಿಲ್ಲ. ಹಾಗಾಗಿ ನಾಗಮ್ಮ ಅವರು ಅಪ್ಪು ಬರ್ತಾನೆ. ಬಂದು ನೋಡಿಕೊಂಡು ಹೋಗ್ತಾನೆ ಅನ್ನುವ ನಂಬಿಕೆಯಲ್ಲಿಯೇ ಇದ್ದರು. ಆದ್ರೆ ಇಂದು ರಾಜ್​ಕುಮಾರ್‌ ತಲೆಮಾರಿನ ಕೊನೆಯ ಹಿರಿಯ ಸದಸ್ಯೆ ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dr Rajkumar sister Nagamma
Advertisment