Advertisment

ಪರಪ್ಪನ ಅಗ್ರಹಾರದಿಂದ 326km ದೂರ, 150 ವರ್ಷಗಳ ಇತಿಹಾಸ! ಬಳ್ಳಾರಿ ಜೈಲು ಅಂದ್ರೆ ಭಯ ಬೀಳೋದ್ಯಾಕೆ ಕೈದಿಗಳು?

author-image
AS Harshith
Updated On
ಡೆಡ್ಲಿ ಸೋಮ, ಹನುಮಂತ ನಾಯ್ಕ್.. ನಟೋರಿಯಸ್​ ರೌಡಿಗಳನ್ನು ಕಂಡ ಬಳ್ಳಾರಿ ಜೈಲಿಗೆ ಹೋಗಲ್ಲ ಎಂದ ದರ್ಶನ್​
Advertisment
  • ಬಳ್ಳಾರಿ ಸೆಂಟ್ರಲ್ ಜೈಲು ಇತಿಹಾಸವೇ ರೋಚಕ
  • 2ನೇ ಮಹಾಯುದ್ಧಕ್ಕೂ ಮುನ್ನವೇ ಆರಂಭವಾದ ಕಾರಾಗೃಹವಿದು
  • ಅಂದು ಸ್ವಾತಂತ್ರ್ಯ ಹೋರಾಟಗಾರಿಗೆ ಬಳ್ಳಾರಿ ಜೈಲೇ ಗತಿಯಾಗಿತ್ತು

ದರ್ಶನ್​​ ಹೆಸರಿನ ಜೊತೆಗೆ ಬಳ್ಳಾರಿ ಜೈಲು ಭಾರೀ ಸುದ್ದಿಯಲ್ಲಿದೆ. ಪರಪ್ಪನ ಅಗ್ರಹಾರದಿಂದ ಸುಮಾರು 326 ಕಿಲೋ ಮೀಟರ್​ ದೂರದಲ್ಲಿರುವ ಬಳ್ಳಾರಿ ಜೈಲಿಗೆ ದರ್ಶನ್​​ ಶಿಫ್ಟ್​ ಆಗುತ್ತಿದ್ದಾರೆ. ಹೀಗಾಗಿ 150 ವರ್ಷಗಳ ಇತಿಹಾಸವಿರುವ ಜೈಲಿನ ಹಲವು ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ಅದರಲ್ಲೂ ಬಳ್ಳಾರಿ ಕೇಂದ್ರ ಕಾರಾಗೃಹ ಸ್ವಾತಂತ್ರ್ಯ ಹೋರಾಟಗಾರ ಕತೆಯನ್ನು ಸಾರುತ್ತಿದೆ. ಸದ್ಯ ಈ ಜೈಲಿನ ಪರಿಸ್ಥಿತಿ ಹೇಗಿದೆ? ಎಷ್ಟು ಕೈದಿಗಳಿದ್ದಾರೆ? ಎಂದು ತಿಳಿಯೋಣ.

Advertisment

ಬಳ್ಳಾರಿ ಸೆಂಟ್ರಲ್ ಜೈಲು ಇತಿಹಾಸವೇ ರೋಚಕವಾಗಿದೆ. ಹಿಂದೊಮ್ಮೆ ಬ್ರಿಟಿಷ್ ಸರ್ಕಾರಕ್ಕೆ ಟಾರ್ಗೆಟ್ ಆಗಿದ್ದ ಗಣ್ಯ ಹೋರಾಟಗಾರರನ್ನ ಇರಿಸಲು ಈ ಜೈಲು ನಿರ್ಮಾಣವಾಯ್ತು ಎಂದು ನೆನಪಿಸಿಕೊಳ್ಳಬೇಕಿದೆ.

publive-image

ಇದನ್ನೂ ಓದಿ: ಇದೇನಾ ನೀರಿಲ್ಲದ ಜೈಲು! ದರ್ಶನ್​​ ಸೇರುವ ಬಳ್ಳಾರಿ ಜೈಲಿನಲ್ಲಿದೆ ಬ್ರಿಟಿಷರ ಕರಿ ನೆರಳ ಛಾಯೆ!

1874ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕಿಚ್ಚು ದೇಶದಲ್ಲಿ ಪ್ರಭಲವಾಗಿತ್ತು. ಮುಂಚೂಣಿ ಹೋರಾಟ ತಡೆಯೋದೆ ಬ್ರಿಟಿಷ್ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಅಂದು ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆಯ ಹೋರಾಟಗಾರಿಗೆ ಬಳ್ಳಾರಿ ಜೈಲೇ ಗತಿಯಾಗಿತ್ತು. ಹೀಗಾಗಿ 1874ರಲ್ಲಿ ಈ ಜೈಲನ್ನು ಬ್ರಿಟಿಷ್​ ಸರ್ಕಾರ ನಿರ್ಮಿಸಿತು.

Advertisment

ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​; ದರ್ಶನ್ ಬರೋ ಸುದ್ದಿ ತಿಳಿದು ಕೈದಿಗಳು ಖುಷ್.. ಯಾಕಿರಬಹುದು?

ಸ್ವಾತಂತ್ರ್ಯ ಹೋರಾಟ ವೇಳೆ ಮೂರು ಕಠಿಣ ಕಾರಾಗೃಹಗಳಿದ್ದವು. ಆದರೆ ಬಳ್ಳಾರಿ ಸೆಂಟ್ರಲ್ ಜೈಲ್ ಎರಡನೇ ಮಹಾಯುದ್ಧಕ್ಕೂ ಮುನ್ನವೇ ಆರಂಭವಾದ ಕಾರಾಗೃಹವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಕ್ಷಯ ರೋಗದ ಭೀತಿ ಎದುರಾಗಿತ್ತು. TB ನಿಯಂತ್ರಣಕ್ಕೆ ಬಳ್ಳಾರಿಯ TB ಸ್ಹಾನಿಟೋರಿಯಂ ಪ್ರದೇಶದಲ್ಲಿ ಮತ್ತೊಂದು ಪ್ರತ್ಯೇಕ ಜೈಲು ವ್ಯವಸ್ಥೆಯನ್ನು  ಬ್ರಿಟಿಷ್ ಸರ್ಕಾರ ಅಂದು ಮಾಡಿತ್ತು. ಬ್ರಿಟಿಷರು ವೆಲ್ಲೆಸ್ಲಿ ಜೈಲನ್ನ ಕೂಡ ನಿರ್ಮಾಣ ಮಾಡಿದ್ದರು. ಕ್ಷಯ ರೋಗಕ್ಕೆ ತುತ್ತಾದ ಹೋರಾಟಗಾರಿಗೆ ಅಗತ್ಯ ಚಿಕಿತ್ಸೆ ಅಲ್ಲಿ ನೀಡಲಾಗುತ್ತಿತ್ತು.

publive-image

ಇದನ್ನೂ ಓದಿ: ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರೆ​ ಪವಿತ್ರಾ ಗೌಡ ಹೋಗೋದು ಎಲ್ಲಿ? ಇಲ್ಲಿದೆ ಆರೋಪಿಗಳ ಪಟ್ಟಿ

Advertisment

ಬಳ್ಳಾರಿ ಸೆಂಟ್ರಲ್ ಜೈಲು 1874 ರಲ್ಲಿ ಆರಂಭವಾಯ್ತು. ಬಳಿಕ‌ ಅಲ್ಲೀಪುರ ಕಂಟೋನ್ಮೆಂಟ್ ಪ್ರದೇಶದಲ್ಲಿ ಮತ್ತೊಂದು ಜೈಲು ಆರಂಭವಾಯಿತು. ಅಂದು ಬಳ್ಳಾರಿಯಲ್ಲಿ ಬ್ರಿಟಿಷ್ ಸರ್ಕಾರ ಮೂರು ಜೈಲು ನಿರ್ಮಾಣ ಮಾಡಿತು. ಮದ್ರಾಸ್ ಪ್ರಾಂತ್ಯದ ಕಡಪ, ಕರ್ನೂಲ್, ಅನಂತಪುರ ಹಾಗೈ ಬಳ್ಳಾರಿ ಜಿಲ್ಲೆ ಹೋರಾಟಗಾರ ಬಂಧನಕ್ಕೆ ನಿರ್ಮಾಣ ಆದ ಜೈಲುಗಳು. ಸದ್ಯ ಬಳ್ಳಾರಿ ಜೈಲಿನಲ್ಲಿ 380 ಕೈದಿಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment